shweta tiwari on her daughter: ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ ಮುಕ್ತ ಹೇಳಿಕೆಗಳನ್ನು ನೀಡುವುದರಲ್ಲಿ ಫೇಮಸ್. ಇದೀಗ ತನ್ನ ಮಗಳ ಬಗ್ಗೆ ಅಂತಹದ್ದೇ ಒಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ ಮುಕ್ತ ಹೇಳಿಕೆಗಳನ್ನು ನೀಡುವುದರಲ್ಲಿ ಫೇಮಸ್. ಇದೀಗ ತನ್ನ ಮಗಳ ಬಗ್ಗೆ ಅಂತಹದ್ದೇ ಒಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಶ್ವೇತಾ ತಿವಾರಿ ಮಗಳು ಪಾಲಕ್ ತಿವಾರಿ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ವದಂತಿಗಳು ಮತ್ತು ಸುಳ್ಳು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
"ಪಾಲಕ್ ತುಂಬಾ ಸ್ಟ್ರಾಂಗ್, ಆದರೆ ಮುಂದೇನಾಗುತ್ತದೆ ಎಂಬುದು ತಿಳಿದಿಲ್ಲ. ಕೆಲವೊಂದು ವದಂತಿಗಳು ಆಕೆಯ ವಿಶ್ವಾಸವನ್ನೇ ಅಲುಗಾಡಿಸಬಹುದು ಎಂದು ನನಗೆ ಭಯವಾಗುತ್ತದೆ" ಎಂದು ಹೇಳಿದ್ದಾರೆ.
ಗಲಾಟಾ ಇಂಡಿಯಾದೊಂದಿಗೆ ಮಾತನಾಡಿರುವ ಶ್ವೇತಾ ತಿವಾರಿ, ಪಾಲಕ್ ಬಗ್ಗೆ ಹೇಳಿಕೆ ನೀಡಿದ್ದಾರೆ “ಅವಳು ಎಷ್ಟು ಬಲಶಾಲಿ ಎಂಬುದು ನನಗೆ ಗೊತ್ತಿದೆ. ಅವಳ ಬಗ್ಗೆ ಸತ್ಯ ತಿಳಿದಿರುವವರಿಗೆ ಯಾರು ಏನೆಂದರೂ ಲೆಕ್ಕಕ್ಕೆ ಬರುವುದಿಲ್ಲ. ಆದರೆ ಆಕೆ ಇನ್ನೂ ಸಣ್ಣವಳು, ಒಂದು ದಿನ ಏನಾದರೂ ತಪ್ಪಾಗಬಹುದು ಎಂಬ ಭಯವಿದೆ. ಇದನ್ನೆಲ್ಲಾ ಅವಳು ಎಷ್ಟು ದಿನ ಸಹಿಸಿಕೊಳ್ಳುತ್ತಾಳೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದಿದ್ದಾರೆ.
"ಇದೇ ವಿಷಯದಲ್ಲಿ ನನಗೆ ಭಯವಾಗುತ್ತದೆ. ನಾಳೆ ಕೆಲವು ಕಾಮೆಂಟ್, ಕೆಲವು ಲೇಖನಗಳನ್ನು ಓದಿದಾಗ ಆತ್ಮವಿಶ್ವಾಸವನ್ನು ಅಲುಗಾಡಿಸಬಹುದು. ಹಾಗಾಗಿ ಈ ರೀತಿಯ ಏನಾದರೂ ಸಂಭವಿಸಬಹುದೆಂದು ನಾನು ಹೆದರುತ್ತೇನೆ. ಅವಳು ಇನ್ನೂ ಮಗು. ಆಕೆಗೆ ನಿಮಿಷಕ್ಕೊಬ್ಬ ಬಾಯ್ ಫ್ರೆಂಡ್, ಇವತ್ತು ಇವನೊಂದಿಗೆ, ನಾಳೆ ಮತ್ತೊಬ್ಬನೊಂದಿಗೆ.. ಹೀಗೆಲ್ಲಾ ವದಂತಿಗಳು ಹರಡುತ್ತಿವೆ. ಇದನ್ನೆಲ್ಲಾ ಎಷ್ಟು ದಿನ ಸಹಿಸಿಕೊಳ್ಳುತ್ತಾಳೆ ಎಂದು ನನಗೆ ಅರ್ಥವಾಗುತ್ತಿಲ್ಲ. ಯಾವುದೂ ಕೂಡ ಆಕೆಗೆ ಮುಳ್ಳಾಗದಿರಲಿ" ಎಂದು ಹೇಳಿದ್ದಾರೆ.
ಪಾಲಕ್ ತಿವಾರಿ ಶ್ವೇತಾ ಮತ್ತು ರಾಜಾ ಚೌಧರಿ ಅವರ ಪುತ್ರಿ. ಶ್ವೇತಾ ಮತ್ತು ರಾಜಾ 1998 ರಲ್ಲಿ ವಿವಾಹವಾಗಿದ್ದು, 8 ಅಕ್ಟೋಬರ್ 2000 ರಂದು ಜನಿಸಿದರು. ಆದರೆ ಶ್ವೇತಾ ಮತ್ತು ರಾಜಾ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ವಿವಾದಗಳ ನಂತರ, ಇವರಿಬ್ಬರು 2007 ರಲ್ಲಿ ವಿಚ್ಛೇದನ ಪಡೆದರು.
ಅಂದಹಾಗೆ ಪಾಲಕ್ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ ಈ ಬಗ್ಗೆ ಅವರಿಬ್ಬರು ಯಾವುದೇ ಸ್ಪಷ್ಟನೆ ನೀಡಿಲ್ಲ.