Venus Transit 2024 March: ಮಾರ್ಚ್ ತಿಂಗಳಿನಲ್ಲಿ ಎರಡು ಬಾರಿ ಶುಕ್ರನ ರಾಶಿ ಪರಿವರ್ತನೆ, ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

Shukra Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಧನದಾತ ಶುಕ್ರನ ಕುಂಭ ಹಾಗೂ ಮೀನ ರಾಶಿಯ ಗೋಚರ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಸುವರ್ಣ ದಿನಗಳು ಆರಂಭಗೊಳ್ಳಲಿವೆ (Spiritual News In Kannada)
 

Shukra Gochar 2024: ವೈದಿಕ ಪಂಚಾಂಗದ ಪ್ರಕಾರ ಶುಕ್ರ ಮಾರ್ಚ್ ತಿಂಗಳಲ್ಲಿ ಎರಡು ಬಾರಿ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಆತನನ್ನು ಧನ, ವೈಭವ, ಐಶ್ವರ್ಯಕಾರಕ ಎಂದು ಭಾವಿಸಲಾಗುತ್ತದೆ. ಮೊದಲಿಗೆ ಮಾರ್ಚ್ 7 ರಂದು ಶುಕ್ರ ಶನಿ ಅಧಿಪತ್ಯದ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದು, ಬಳಿಕ ಮಾರ್ಚ್ 31 ರಂದು ಆತ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಮಾರ್ಚ್ ತಿಂಗಳಿನಲ್ಲಿ ಶುಕ್ರನ ಈ ಎರಡು ಬಾರಿ ಗೋಚರ ಅತ್ಯಂತ ಶುಭ ಎಂದು ಭಾವಿಸಲಾಗುತ್ತಿದ್ದು. ಕೆಲ ರಾಶಿಗಳ ಜನರ ಧನಸಂಪತ್ತು ಇದರಿಂದ ದುಪ್ಪಟ್ಟಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-Shukra Rahu Yuti 2024: ಮಿತ್ರ ರಾಹುವಿನ ಜೊತೆಗೆ ಧನದಾತ ಶುಕ್ರನ ಮೈತ್ರಿ, ಧನಕುಬೇರ ಕೃಪೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!

 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Shukra Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಧನದಾತ ಶುಕ್ರನ ಕುಂಭ ಹಾಗೂ ಮೀನ ರಾಶಿಯ ಗೋಚರ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಸುವರ್ಣ ದಿನಗಳು ಆರಂಭಗೊಳ್ಳಲಿವೆ (Spiritual News In Kannada)  

2 /5

ಮೇಷ ರಾಶಿ: ಶುಕ್ರನ ಈ ರಾಶಿ ಪರಿವರ್ತನೆ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಈ ಅವಧಿಯಲ್ಲಿ ಶುಕ್ರ ನಿಮ್ಮ ಜಾತಕದ ದ್ವಾದಶ ಭಾವದಲ್ಲಿ ಸಂಚರಿಸಲಿದ್ದು, ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ನೌಕರ ವರ್ಗದ ಜನರಿಗೆ ನೌಕರಿಯಲ್ಲಿ ಉನ್ನತ ಸ್ಥಾನ ಪ್ರಾಪ್ತಿಯಾಗಲಿದೆ. ಸುಖ ಸೌಕರ್ಯಗಳು ಸಾಕಷ್ಟು ಹೆಚ್ಚಾಗಲಿದ್ದು, ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ. ಹಳೆ ಹೂಡಿಕೆಗಳಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಷೇರು ಮಾರುಕಟ್ಟೆ ವ್ಯವಹಾರದಿಂದಲೂ ಕೂಡ ನಿಮಗೆ ಸಾಕಷ್ಟು ಲಾಭ ಸಿಗಲಿದೆ.   

3 /5

ತುಲಾ ರಾಶಿ: ಈ ಅವಧಿಯಲ್ಲಿ ಶುಕ್ರ ನಿಮ್ಮ ಜಾತಕದ ಚತುರ್ಥ ಹಾಗೂ ಪಂಚಮ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ಈ ಅವಧಿಯಲ್ಲಿ ನಿಮ್ಮ ಭೌತಿಕ ಸುಖಗಳು ಹೆಚ್ಚಾಗಲಿವೆ. ವಾಹನ, ಆಸ್ತಿಪಾಸ್ತಿ ಖರೀದಿಸುವ ಯೋಗ ಕೂಡ ಇದೆ. ನೌಕರ ಹಾಗೂ ವ್ಯಾಪಾರ ವರ್ಗದ ಜನರಿಗೆ ಈ ಗೋಚರ ಸಾಕಷ್ಟು ಲಾಭ ತಂದುಕೊಡಲಿದೆ. ಇದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ದಾಂಪತ್ಯ ಜೀವನದ ಕುರಿತು ಹೇಳುವುದಾದರೆ, ಎಲ್ಲಾ ತಪ್ಪು ಕಲ್ಪನೆಗಳು ಸರಿಹೋಗಿ ಸಂಬಂಧದಲ್ಲಿ ಮಧುರತೆ ಇರಲಿದೆ. ಮಕ್ಕಳಿಗೆ ಸಂಬಂಧಿಸಿದ ಶುಭ ಸುದ್ದಿ ನಿಮಗೆ ಸಿಗುವ ಸಾಧ್ಯತೆ ಇದೆ.   

4 /5

ಮಕರ ರಾಶಿ: ಶುಕ್ರನ ಈ ಗೋಚರ ನಿಮ್ಮ ಜಾತಕದ ದ್ವಿತೀಯ ಹಾಗೂ ತೃತೀಯ ಭಾವದಲ್ಲಿ ನೆರವೇರುತ್ತಿದೆ. ಇದರಿಂದ ನಿಮಗೆ ಕಾಲಕಾಲಕ್ಕೆ ಅಪಾರ ಧನಲಾಭ ಉಂಟಾಗಲಿದೆ. ಜೊತೆಗೆ ಈ ಅವಧಿಯಲ್ಲಿ ನಿಮಗೆ ಭೂಮಿ, ಭವನ, ವಾಹನ ಇತ್ಯಾದಿಗಳ ಸುಖ ಪ್ರಾಪ್ತಿಯಾಗಲಿದೆ ಹಾಗೂ ನಿಮ್ಮ ಸಾಹಸ ಪರಾಕ್ರಮ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲವಾಗಿರಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)