ಜಾತಕ ಫಲ ಏನೇ ಇರಲಿ ಈ ಮೂರು ರಾಶಿಯವರನ್ನು ಸದಾ ಕಾಯುತ್ತಿರುತ್ತಾನೆ ಶನಿ ದೇವ

ಜ್ಯೋತಿಷ್ಯದ ಪ್ರಕಾರ ಮೂರು ರಾಶಿಯವರನ್ನು ಶನಿದೇವ ಸದಾ ಕಾಯುತಿರುತ್ತಾನೆಯಂತೆ. ಜಾತಕ ಫಲ ಏನೇ ಇದ್ದರೂ ಈ ಮೂರು ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿಯನ್ನೇ ಹರಿಸುತ್ತಾನೆಯಂತೆ ಶನಿ ಮಹಾತ್ಮ.   

ಬೆಂಗಳೂರು : ಪ್ರತಿಯೊಬ್ಬರ ಜಾತಕದಲ್ಲಿಯೂ ಶನಿದೆಸೆ ಎನ್ನುವುದು ಇದ್ದೇ ಇರುತ್ತದೆ. ಈ ದೆಸೆಯ ಅವಧಿಯಲ್ಲಿ ನಿರೀಕ್ಷೆಗೆ ಮೀರಿದ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಧನ ಹಾನಿ, ಗೌರವಕ್ಕೆ ಕುತ್ತು, ಏನೇ ಕೆಲಸ ಮಾಡಿದರೂ ಸೋಲು ಒಂದರ ಹಿಂದೆ ಒಂದರಂತೆ ಅಪಜಯ ಕಾಡುತ್ತದೆ. ಇವೆಲ್ಲವೂ ನ್ಯಾಯದ ದೇವರಾದ ಶನಿ ದೇವರು ನೀಡುವ ನ್ಯಾಯ ಎಂದೇ ಹೇಳಲಾಗುತ್ತದೆ. ಆದರೆ, ಜ್ಯೋತಿಷ್ಯದ ಪ್ರಕಾರ ಮೂರು ರಾಶಿಯವರನ್ನು ಶನಿದೇವ ಸದಾ ಕಾಯುತಿರುತ್ತಾನೆಯಂತೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೂರು ರಾಶಿಯವರ ಜಾಕತದಲ್ಲಿ ಶನಿ ಸಾಡೇ ಸಾತಿ ನಡೆಯುತಿರಲಿ, ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ದೆಸೆ ನಡೆಯುತ್ತಿರಲಿ ಈ  ಮೂರು ರಾಶಿಯವರನ್ನು ಶನಿದೇವ ಅಷ್ಟಾಗಿ ಕಾಡುವುದಿಲ್ಲವಂತೆ. ಜಾತಕ ಫಲ ಏನೇ ಇದ್ದರೂ ಈ ಮೂರು ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿಯನ್ನೇ ಹರಿಸುತ್ತಾನೆಯಂತೆ ಶನಿ ಮಹಾತ್ಮ.  

2 /4

ತುಲಾ ರಾಶಿಯನ್ನು ಶನಿ ದೇವನ ಉಚ್ಛ ರಾಶಿ ಎಂದು ಕರೆಯಲಾಗುತ್ತದೆ.  ಈ ಕಾರಣಕ್ಕಾಗಿ ತುಲಾ ರಾಶಿಯವರ ಮೇಲೆ ಶನಿದೇವನ  ಆಶೀರ್ವಾದ ಕೂಡಾ ಹೆಚ್ಚಾಗಿ ಇರುತ್ತದೆ ಎಂದು ಹೇಳಲಾಗುತ್ತದೆ. ಈ ರಾಶಿಯವರು ಬುದ್ಧಿವಂತರು ಮತ್ತು ಶ್ರಮಜೀವಿಗಳು. ಇವರು ಯಾವಾಗಲೂ ಸತ್ಯದ ಪರ ನಿಲ್ಲುತ್ತಾರೆ.  ಶನಿಯ ದೆಸೆಯ ಸಂದರ್ಭದಲ್ಲಿಯೂ ಈ ರಾಶಿಯವರ ಮೇಲೆ ತನ್ನ ಕೃಪೆ ಇಟ್ಟಿರುತ್ತಾನೆ ಶನಿ. 

3 /4

ಶನಿಯು ಮಕರ ರಾಶಿಯ ಅಧಿಪತಿ. ಈ ಕಾರಣಕ್ಕೆ ಮಕರ ರಾಶಿಯೆಂದರೆ ಶನಿ ದೇವರಿಗೆ  ಪ್ರೀತಿಯಂತೆ. ಈ ರಾಶಿಯವರು ಕೂಡಾ ಪ್ರತಿಭಾವಂತರು ಮತ್ತು ಬುದ್ಧಿವಂತರು. ಇವರು ಯಾವುದೇ ಕೆಲಸಲ್ಲೇ ಕೈ ಹಾಕಿದರೂ ಶನಿ ದೇವನ ಕೃಪೆಯಿಂದ ಅದರಲ್ಲಿ ಯಶಸ್ಸು ಕಾಣುತ್ತಾರೆ. ಜೀವನದಲ್ಲಿ ಎದುರಾಗುವ ಕಷ್ಟವನ್ನು ದೃಢವಾಗಿ ಎದುರಿಸುತ್ತಾರೆ. ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ. ಶನಿಯ ವಕ್ರದೃಷ್ಟಿ ಈ ರಾಶಿಯವರ ಮೇಲೆ ಪರಿಣಾಮ ಬೀರುವುದಿಲ್ಲ.

4 /4

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ  ಕುಂಭ ರಾಶಿಯ ಅಧಿಪತಿ ಕೂಡಾ ಶನಿ. ಈ ರಾಶಿಯವರು ಶಾಂತಿಪ್ರಿಯರು. ಶಿಸ್ತು, ಕಠಿಣ ಪರಿಶ್ರಮ, ತಾಳ್ಮೆ ಹೊಂದಿದ್ದರು ಹಠ ಸ್ವಭಾವದವರು. ಒಂದು ಕೆಲಸ ಮಾಡಬೇಕು ಎಂದು ನಿರ್ಧರಿಸಿದರೆ ಅದನ್ನು ಮಾಡಿ ಮುಗಿಸಿ ಅದರಲ್ಲಿ ಯಶಸ್ಸನ್ನು ಕಂಡುಕೊಳ್ಳುತ್ತಾರೆ.  ಇವರು ಆರ್ಥಿಕವಾಗಿ ಸಬಲರಾಗಿರುತ್ತಾರೆ. ಈ ರಾಶಿಯವರು ಯಾವುದನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ.  ಏನೇ ಸಮಸ್ಯೆ ಬಂದರೂ ಧೈರ್ಯವಾಗಿ ಮುನ್ನುಗ್ಗುತ್ತಾರೆ. (ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)