Seetha Raama serial: ಸೀತಾ ರಾಮ ಸಿರೀಯಲ್‌ ಮುದ್ದು ಗೊಂಬೆ ಸಿಹಿ ನಿಜವಾದ ತಾಯಿ ಯಾರು ಗೊತ್ತಾ?

Seetha Raama Kannada serial Sihi: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ಸೀತಾ ರಾಮ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಕಿರುತೆರೆಯ ಫೇಮಸ್‌ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್‌ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದರಲ್ಲಿ ಇನ್ನೊಂದು ಅತೀ ಮುಖ್ಯ ಪಾತ್ರವೆಂದರೇ ಅದು ಸಿಹಿ ಪಾತ್ರ.. ಇದೀಗ ಈ ಪಾತ್ರಧಾರಿ ನಿಜ ಜೀವನದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳನ್ನು ತಿಳಿಯೋಣ..

1 /5

ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನಪ್ರಿಯ ಧಾರವಾಹಿಗಳು ಪ್ರಸಾರವಾಗುತ್ತಿವೆ.. ಅವುಗಳ ಪೈಕಿ ಸೀತಾ ರಾಮ ಕೂಡ ಒಂದು.. ಈ ಸಿರೀಯಲ್‌ ಸದ್ಯ ಕಿರುತೆರೆ ಪ್ರೇಕ್ಷಕರ ನೆಚ್ಚಿನದ್ದಾಗಿದೆ ಎಂದರೇ ತಪ್ಪಾಗುವುದಿಲ್ಲ..   

2 /5

ಸೀತಾ ರಾಮ ಸಿರೀಯಲ್‌ನಲ್ಲಿ ಖ್ಯಾತ ಕಿರುತೆರೆ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್‌ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.. ಇದರಲ್ಲಿ ಬರುವ ಇನ್ನೊಂದು ಅತೀ ಪ್ರಾಮುಖ್ಯತೆ ಹೊಂದಿದ ಪಾತ್ರವೆಂದರೇ ಅದು ಸಿಹಿ..  

3 /5

ಹೌದು ಸಿಹಿ ಸೀತಾ ರಾಮ ಸಿರೀಯಲ್‌ನ ಆಧಾರ ಸ್ತಂಭ.. ಈ ಮುದ್ದು ಗೊಂಬೆಯ ಮಾತು ಕೇಳಲೆಂದೆ ಹಲವರು ಈ ಧಾರವಾಹಿ ನೋಡುತ್ತಿದ್ದಾರೆ.. ಅಷ್ಟು ಕ್ಯೂಟ್‌ ಆಗಿ ಮೂಡಿ ಬರುತ್ತಿರುವ ಪಾತ್ರ ಅದು.. ಹಾಗಾದ್ರೆ  ಆ ಪಾತ್ರದಲ್ಲಿ ನಟಿಸುತ್ತಿರುವ ಪಾತ್ರಧಾರಿಯ ನಿಜವಾದ ತಾಯಿ ಯಾರು? ಆ ಮಗುವಿನ ನಿಜ ಜೀವನ ಹೇಗಿದೆ ಎನ್ನುವುದನ್ನು ಇದೀಗ ತಿಳಿಯೋಣ..  

4 /5

ಸಿಹಿಯ ನಿಜವಾದ ಹೆಸರು ರಿತು ಸಿಂಗ್‌.. ಮೂಲತಃ ನೇಪಾಳಿಯವರು.. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಈ ಮಗು ತಾಯಿ ಪ್ರೀತಿಯನ್ನು ಮಾತ್ರ ಕಂಡಿದೆ.. ಈ ಮಗುವಿನ ತಾಯಿ ಬೆಂಗಳೂರಿನಲ್ಲಿ ಮನೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ..  

5 /5

ಸ್ಕ್ರೀನ್‌ ಮೇಲೆ ಕಾಣುವಂತೆ ಸಿಹಿಯ ಜೀವನ ಕಹಿಯಿಂದಲೇ ಕೂಡಿದೆ.. ಅಪ್ಪನ ಪ್ರೀತಿಯನ್ನೇ ನೋಡದ ಕಂದ ತೆರೆ ಮೇಲೆ ನಗುತ್ತಾ ಎಲ್ಲರನ್ನು ನಗಿಸುತ್ತಾ ಕಿರುತೆರೆ ಲೋಕದಲ್ಲಿ ಮಿಂಚುತ್ತಿದೆ..