ಈ ಪುಟ್ಟ ಹುಡುಗಿ ಯಾರು ಅಂತ ಗೊತ್ತಾಯ್ತಾ..? ಈಗ ಈಕೆ ಸ್ಟಾರ್‌ ನಟನ ಪತ್ನಿ, ಅಪ್ಪು ಸಿನಿಮಾದ ಹೀರೋಯಿನ್

Yuvarathnaa heroine : ಕಾಲಿವುಡ್‌ ನಟಿಯಾದರೂ ಸಹ ಈಕೆ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ.. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಸೂಪರ್‌ ಹಿಟ್‌ ಸಿನಿಮಾದ ನಾಯಕಿಯೂ ಸಹ ಹೌದು.. ಇನ್ನೂ ನಿಮಗೆ ಈ ಪುಟ್ಟ ಹುಡುಗಿ ಯಾರು ಅಂತ ಗೊತ್ತಾಗ್ಲಿಲ್ವಾ..? ಹಾಗಿದ್ರೆ ಸ್ಕ್ರೋಲ್‌ ಡೌನ್‌ ಮಾಡಿ..

1 /8

ಈಕೆ ತಮಿಳು ನಟ ಆರ್ಯ ಪತ್ನಿ, ಹೆಸರು ಸಯೀಶಾ. ವನಮಗನ್ ಚಿತ್ರದ ಮೂಲಕ ಸಯೀಶಾ ಕಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಅತಿ ಕಡಿಮೆ ಅವಧಿಯಲ್ಲಿ ಸೂರ್ಯ, ಕಾರ್ತಿ, ವಿಜಯ್ ಸೇತುಪತಿ, ಆರ್ಯ ಮುಂತಾದ ಪ್ರಮುಖ ನಟರೊಂದಿಗೆ ನಟಿಸಿ ಸ್ಟಾರ್‌ ಪಟ್ಟ ಪಡೆದರು.  

2 /8

ಸಂತೋಷ್ ಪಿ ಜಯಕುಮಾರ್ ನಿರ್ದೇಶನದ ಗಜಿನಿಕಾಂತ್ ಚಿತ್ರದಲ್ಲಿ ನಟಿಸುವಾಗ ಆರ್ಯ ಮತ್ತು ಸಯೀಷಾ ನಡುವೆ ಪ್ರೀತಿ ಹುಟ್ಟಿತು. ಇದರ ಬೆನ್ನಲ್ಲೇ 2019ರಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆಯಾದರು.  

3 /8

ಆಗಸ್ಟ್ 12 ರಂದು ಮುಂಬೈನಲ್ಲಿ ಜನಿಸಿದ ಸಯೀಶಾ ಅವರು ನಟರಾದ ಸೈರಾ ಬಾನು ಮತ್ತು ದಿಲೀಪ್ ಕುಮಾರ್ ಅವರ ಮೊಮ್ಮಗಳು.    

4 /8

ಸಯೀಶಾ 2015 ರಲ್ಲಿ ತೆಲುಗು ಚಿತ್ರ ಅಖಿಲ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಜಯ್ ದೇವಗನ್ ಶಿವಾಯ್ ಮೂಲಕ ಬಾಲಿವುಡ್‌ಗೆ ಎಂಟ್ಟಿ ಕೊಟ್ಟರು.  

5 /8

ಎಎಲ್ ವಿಜಯ್-ಜಯಂ ರವಿ ಕಾಂಬಿನೇಷನ್ ನಲ್ಲಿ ತೆರೆಕಂಡ ವನಮಗನ್ ಚಿತ್ರದ ಮೂಲಕ ಕಾಲಿವುಟ್‌ಗೆ ನಾಯಕಿಯಾಗಿ ಪ್ರವೇಶ ಮಾಡಿದರು. ಯುವರತ್ನ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಚೆಲುವೆ ಅಪ್ಪು ಜೊತೆ ತೆರೆ ಹಂಚಿಕೊಂಡರು.  

6 /8

ಮದುವೆ ನಂತರ ಸಿನಿಮಾಗಳಿಂದ ದೂರ ಉಳಿದ ಸಯೀಶಾ, ಕಳೆದ ವರ್ಷ ಸಿಂಬು ಅಭಿನಯದ ಬಟು ತಾಳ ಚಿತ್ರದ ರವಾಡಿ ಎಂಬ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  

7 /8

ಮದುವೆಯ ನಂತರ ಆರ್ಯ ಜೊತೆ ‘ಟೆಡ್ಡಿ’ ಸಿನಿಮಾದಲ್ಲಿ ಮಾತ್ರ ನಟಿಸಿದ ಸಯೀಶಾ, ಆ ನಂತರ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸುವುದನ್ನು ಬಿಟ್ಟಿದ್ದರು.  

8 /8

ಇತ್ತೀಚೆಗೆ, ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ನಟಿ ಸಯೀಶಾ ಅವರ ಬಾಲ್ಯದ ಫೋಟೋ ಸಹ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.