Salt vastu tips: ಮನೆಯಲ್ಲಿಟ್ಟಿರುವ ಎಲ್ಲಾ ವಸ್ತುಗಳನ್ನು ಕಾಲಕಾಲಕ್ಕೆ ಉಪ್ಪು ನೀರಿನಿಂದ ಸ್ವಚ್ಛಗೊಳಿಸುತ್ತಿರಿ. ಈ ಕಾರಣದಿಂದ ಮನೆಯಲ್ಲಿ ಸಂಗ್ರಹವಾದ ಧೂಳು ಅಥವಾ ಕೊಳೆಯು ನಕಾರಾತ್ಮಕ ಶಕ್ತಿಯನ್ನು ಕೊನೆಗೊಳಿಸುತ್ತದೆ
ನವದೆಹಲಿ: ಯಾವುದೇ ಒಬ್ಬ ವ್ಯಕ್ತಿಯು ಕಠಿಣ ಪರಿಶ್ರಮದ ಹೊರತಾಗಿಯೂ ಉತ್ತಮ ಫಲಿತಾಂಶ ಪಡೆಯದಿದ್ದರೆ, ಇದರ ಹಿಂದಿನ ಕಾರಣ ವಾಸ್ತು ದೋಷವಾಗಿರಬಹುದು. ಯಶಸ್ಸು ಪಡೆಯಲು ಮತ್ತು ಮನೆಯ ನಕಾರಾತ್ಮಕತೆ ನಿವಾರಿಸಲು ವಾಸ್ತು ದೋಷದಿಂದ ಮುಕ್ತಿ ಪಡೆಯುವುದು ಉತ್ತಮ. ಇದಕ್ಕಾಗಿ ಕೆಲವು ಕ್ರಮಗಳನ್ನು ನೀವು ತೆಗೆದುಕೊಳ್ಳಬಹುದು. ಈ ಪರಿಹಾರಗಳಲ್ಲಿ ಸಮುದ್ರದ ಉಪ್ಪು ಕೂಡ ಒಂದು. ಸಮುದ್ರದ ಉಪ್ಪು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ. ಈ ಪರಿಹಾರದಿಂದ ಮನೆಯಲ್ಲಿ ಆಶೀರ್ವಾದ ಮತ್ತು ಸಮೃದ್ಧಿ ಬರಲು ಪ್ರಾರಂಭಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮನೆಯಲ್ಲಿ ಬಕೆಟ್ಗೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಸ್ನಾನ ಮಾಡಿ. ಇದು ನಿಮ್ಮ ದೇಹದೊಳಗಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ. ಇದರಿಂದ ನೀವು ಉಲ್ಲಾಸ ಮತ್ತು ಚೈತನ್ಯವನ್ನು ಅನುಭವಿಸುವಿರಿ. ಇದರಿಂದ ನಿಮಗೆ ಆಯಾಸವಾಗುವುದಿಲ್ಲ.
ಪ್ರತಿದಿನ ಬೆಳಗ್ಗೆ ನಿಮ್ಮ ಕೈಯಲ್ಲಿ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ದೇಹದ ಮೇಲೆ ಉಜ್ಜಿಕೊಳ್ಳಿ, ಬಳಿಕ ನೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ಮನೆಯ ಋಣಾತ್ಮಕತೆ ದೂರವಾಗುತ್ತದೆ ಮತ್ತು ನೀವು ಬಯಸಿದ ಫಲಿತಾಂಶ ಪಡೆಯಲು ಇದು ಸಹಕಾರಿಯಾಗಲಿದೆ.
ಮಲಗುವ ಕೋಣೆಯಲ್ಲಿ 1 ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಉಪ್ಪು ಹಾಕಿ. ಈ ಉಪ್ಪು ನೀರನ್ನು ಪ್ರತಿದಿನ ಬದಲಾಯಿಸುತ್ತಿರಿ ಮತ್ತು ಹಳೆಯ ನೀರನ್ನು ವಾಶ್ರೂಮ್ ಅಥವಾ ಸಿಂಕ್ನಲ್ಲಿ ಹಾಕಿ. ಆದರೆ ಈ ಸಮಯದಲ್ಲಿ ಈ ನೀರು ನಿಮ್ಮ ದೇಹದ ಯಾವುದೇ ಭಾಗ ಅಥವಾ ಕೆಳಗೆ ಬೀಳಬಾರದು. ಹೀಗೆ ಮಾಡುವುದರಿಂದ ಮನೆಯ ಎಲ್ಲಾ ನೆಗೆಟಿವ್ ಎನರ್ಜಿ ಕೊನೆಗೊಳ್ಳುತ್ತದೆ.
ಮನೆಯ ನೆಲವನ್ನು ಕಾಲಕಾಲಕ್ಕೆ ಉಪ್ಪು ನೀರಿನಿಂದ ಒರೆಸಿರಿ. ಇದರಿಂದ ಋಣಾತ್ಮಕ ಶಕ್ತಿ ಹೊರಹೋಗುತ್ತದೆ. ಬಾತ್ರೂಮ್ನಲ್ಲಿ ಉಪ್ಪು ಅಥವಾ ಕಲ್ಲು ಉಪ್ಪನ್ನು ಬಳಸಿ. ಈ ಪರಿಹಾರವು ಸ್ನಾನಗೃಹದ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ನಿಮಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.
ಮನೆಯಲ್ಲಿಟ್ಟಿರುವ ಎಲ್ಲಾ ವಸ್ತುಗಳನ್ನು ಕಾಲಕಾಲಕ್ಕೆ ಉಪ್ಪು ನೀರಿನಿಂದ ಸ್ವಚ್ಛಗೊಳಿಸುತ್ತಿರಿ. ಈ ಕಾರಣದಿಂದ ಮನೆಯಲ್ಲಿ ಸಂಗ್ರಹವಾದ ಧೂಳು ಅಥವಾ ಕೊಳೆಯು ನಕಾರಾತ್ಮಕ ಶಕ್ತಿಯನ್ನು ಕೊನೆಗೊಳಿಸುತ್ತದೆ ಮತ್ತು ಧನಾತ್ಮಕ ಶಕ್ತಿ ಮನೆಯಲ್ಲಿ ಬರಲು ಪ್ರಾರಂಭಿಸುತ್ತದೆ. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)