ಸಾಯಿ ಪಲ್ಲವಿ ಟು ನಯನತಾರಾ... ಸಿನಿಮಾಗಾಗಿ ಹೆಸರು ಬದಲಿಸಿಕೊಂಡ ಸೌತ್‌ ನಟಿಯರಿವರು!

South Actress: ಬಹುತೇಕ ನಾಯಕಿಯರ ಹೆಸರು ಒರಿಜಿನಲ್ ಅಲ್ಲ. ಇದಕ್ಕೆ ನಾನಾ ಕಾರಣಗಳಿರಬಹುದು.. ಸದ್ಯ ತೆರೆಮೇಲೆ ಸ್ಟಾರ್ ಹೀರೋಯಿನ್‌ ಎಂದು ಗುರುತಿಸಿಕೊಂಡ ನಯನತಾರಾ ಅವರಿಂದ ಹಿಡಿದು ಸಾಯಿ ಪಲ್ಲವಿಯವರೆಗೆ.. ಈ ಸೆಲೆಬ್ರಿಟಿಗಳ ನಿಜವಾದ ಹೆಸರು ಏನು ಗೊತ್ತಾ? 
 

1 /5

ನಯನತಾರಾ: ಕಾಲಿವುಡ್‌ನ ಉದಯೋನ್ಮುಖ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್... ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ, ಮಲಯಾಳಂ ನಿರ್ದೇಶಕರು ಅವರ ಹೆಸರನ್ನು ನಯನತಾರಾ ಎಂದು ಬದಲಾಯಿಸಿದರು.  

2 /5

ಸಾಯಿ ಪಲ್ಲವಿ: ಪ್ರೇಮಂ ಚಿತ್ರದ ಮೂಲಕ ಪಾದಾರ್ಪಣೆ ಮಾಡಿ ಇದೀಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಸಾಯಿ ಪಲ್ಲವಿ ಕೂಡ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅವರ ನಿಜವಾದ ಹೆಸರು ಸಾಯಿ ಪಲ್ಲವಿ ಸೆಂತಾಮರೈ.    

3 /5

ಅನುಷ್ಕಾ ಶೆಟ್ಟಿ: ಅನುಷ್ಕಾ ಅವರ ನಿಜವಾದ ಹೆಸರು ಸ್ವೀಟಿ ಶೆಟ್ಟಿ. ಇಂಡಸ್ಟ್ರಿಯಲ್ಲಿ ಈಗಲೂ ಇವರನ್ನು ಸ್ವೀಟಿ ಎಂದು ಕರೆಯುತ್ತಾರೆ. ಇವರು ಸ್ಕ್ರೀನ್ ನೇಮ್ ನ್ನು ಅನುಷ್ಕಾ ಎಂದು ಬದಲಾಯಿಸಿಕೊಂಡರು.   

4 /5

ಸ್ನೇಹಾ:ನಟಿ ಸ್ನೇಹಾ ಸೌತ್ ಚಿತ್ರರಂಗದಲ್ಲಿ ಸ್ಮೈಲ್ ಕ್ವೀನ್ ಎಂದು ಹೆಸರು ಗಳಿಸಿದ್ದಾರೆ. ಆದರೆ ತೆರೆಯ ಮೇಲೆ ಸ್ನೇಹಾ ಎಂದು ಕರೆಯುವ ಆಕೆಯ ನಿಜವಾದ ಹೆಸರು ಸುಹಾಸಿನಿ.. ಆದರೆ ಸಿನಿಮಾಗಳಲ್ಲಿ ಸ್ನೇಹಾ ಎಂದೇ ಕರೆಯುತ್ತಾರೆ.   

5 /5

ಶ್ರುತಿ ಹಾಸನ್: ನಟ ಕಮಲ್ ಹಾಸನ್ ಅವರ ಹಿರಿಯ ಮಗಳು ಶ್ರುತಿ ಹಾಸನ್ ಕೂಡ ಚಿತ್ರಕ್ಕಾಗಿ ತಮ್ಮ ಹೆಸರನ್ನು ಬದಲಾಯಿಸಿದ್ದಾರೆ. ಆಕೆಯ ನಿಜವಾದ ಹೆಸರು ಶ್ರುತಿ ರಾಜಲಕ್ಷ್ಮಿ ಹಾಸನ್. ಅದನ್ನು ಶ್ರುತಿ ಹಾಸನ್ ಎಂದು ಬದಲಾಯಿಸಿದ್ದಾರೆ.