ಡಾ. ಅಬ್ದುಲ್ ಕಲಾಂ ಅವರ ನುಡಿಮುತ್ತುಗಳು

ಭಾರತದ 11 ನೇ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನೋತ್ಸವ. ಅಬ್ದುಲ್ ಕಲಾಂ 2002 ರಲ್ಲಿ  ಭಾರತದ 11 ನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು.
 

  • Oct 15, 2018, 12:57 PM IST

ಭಾರತದ ಕ್ಷಿಪಣಿ ಪಿತಾಮಹ, ವಿಜ್ಞಾನಿ ಅಬ್ದುಲ್ ಕಲಾಂ ಅವರ ಜೀವನ ಸಾಧನೆಗಳ ಬಗ್ಗೆ ಹೇಳುವುದು ಏನೂ ಉಳಿದಿಲ್ಲ. ಇವರು ತಮಿಳುನಾಡಿನ ರಾಮೇಶ್ವರಂನಲ್ಲಿ ಅಕ್ಟೋಬರ್ 15, 1931ರಲ್ಲಿ ಜನಿಸಿದರು. 
 

1 /12

ಅಬ್ದುಲ್ ಕಲಾಂ ಅವರ ಜೀವನ ಎಲ್ಲಾ ಯುವ ಜನರಿಗೆ ಸ್ಫೂರ್ತಿ ಎಂದು ಪರಿಗಣಿಸಲಾಗುತ್ತದೆ. ಇಂದಿಗೂ ಸಹ, ಯುವ ಜನರು ತಮ್ಮ ಮಾರ್ಗದರ್ಶನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮೀನುಗಾರನ ಮಗ ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ದೇಶದ ರಾಷ್ಟ್ರಪತಿಯಾಗುವುದು ಸುಲಭದ ಮಾತಲ್ಲ. ಡಾ ಕಲಾಂ ಜೀವನದ ಕಠಿಣ ಹೋರಾಟ ಮತ್ತು ಅವರ ಧನಾತ್ಮಕ ಹೋರಾಟ ಮುಂದುವರಿಸುತ್ತಾ ಅವರು ಒಂದು ದೇಶದ ರಾಷ್ಟ್ರಪತಿ ಆಗುವ ಹಂತವನ್ನು ತಲುಪಿದರು.

2 /12

ಡಾ. ಕಲಾಂ ಯಾವಾಗಲೂ ತನ್ನ ಕನಸನ್ನು ನಂಬುವ ಬಗ್ಗೆ ಮಾತನಾಡುತ್ತಿದ್ದರು. ಅವರು ತಮ್ಮ ಕನಸಿನಲ್ಲಿ ನಂಬಿಕೆ ಇಟ್ಟಿದ್ದರು. ಪ್ರಾಯಶಃ ಅದಕ್ಕಾಗಿಯೇ ಜೀವನದಲ್ಲಿ ವಿರುದ್ಧ ಪರಿಸ್ಥಿತಿಗಳ ನಡುವೆಯೂ, ಅವರು ಉತ್ತುಂಗಕ್ಕೇರಿದರು. ವಿಶ್ವದ ಕೆಲವೇ ಜನರು ತಲುಪಲು ಸಾಧ್ಯವಾಗುವ ಹಂತವನ್ನು ತಲುಪಿದರು. ಡಾ. ಕಲಾಂ ಮಾತನಾಡುವ ಪ್ರಮುಖ ವಿಷಯಗಳು ನಮಗೆ ಮುಂದುವರೆಯಲು ಪ್ರೇರೇಪಿಸುವಂತಹವು.  

3 /12

"ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು." (ಫೋಟೋ ಕ್ರೆಡಿಟ್: @PratishtaJain)

4 /12

"ನೀವು ಅಭಿವೃದ್ಧಿ ಬಯಸಿದರೆ, ದೇಶದಲ್ಲಿ ಶಾಂತಿ ಪರಿಸ್ಥಿತಿ ಅವಶ್ಯಕ"

5 /12

"ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ. ಹೀಗಾಗಿ ಕಷ್ಟ, ಕೋಟಲೆಗಳ ಭಯವೇಕೆ?" 

6 /12

"ಒಂದು ದೇಶ ಭ್ರಷ್ಟಾಚಾರ ಮುಕ್ತವಾದರೆ ಆ ದೇಶದಲ್ಲಿ ಸುಂದರ ಚಿಂತನೆಗಳನ್ನು ಕಾಣಬಹುದು. ಸಮಾಜವನ್ನು ಮೂವರು ಮಾತ್ರ ನಿರ್ಮಾಣ ಮಾಡಬಲ್ಲರು, ಅವರೆಂದರೆ ತಂದೆ,ತಾಯಿ ಮತ್ತು ಗುರು."

7 /12

"ಜ್ಞಾನ ಎಂಬುದು ಎಂದಿಗೂ ನಿಂತ ನೀರಾಗಬಾರದು. ಸದಾ ಹೆಚ್ಚುತ್ತಲೇ ಇರಬೇಕು. ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಪಡೆಯಲು ಬೇಕಾದ ಪ್ರಮುಖ ಅಸ್ತ್ರ."

8 /12

"ಪ್ರತಿಯೊಬ್ಬರೂ ಜೀವನದಲ್ಲಿ ದುಃಖವನ್ನು ಅನುಭವಿಸುತ್ತಾರೆ, ಈ ದುಃಖವು ಎಲ್ಲರಲ್ಲೂ ತಾಳ್ಮೆಯನ್ನು ಪರೀಕ್ಷಿಸುತ್ತದೆ."

9 /12

"ಜೀವನದಲ್ಲಿ ಕಠಿಣ ಪರಿಶ್ರಮದಿಂದ ಪಡೆದ ಸುಖವು ಸಂತೋಷದ ಅನುಭವವನ್ನು ನೀಡುತ್ತದೆ."

10 /12

"ದೇಶದಲ್ಲಿನ ಅತ್ಯುತ್ತಮ ಮಿದುಳುಗಳನ್ನು ತರಗತಿ ಕೊಠಡಿಗಳ ಕೊನೆಯ ಬೆಂಚುಗಳಲ್ಲಿ ಕಾಣಬಹುದು".

11 /12

"ಯಾರೂ ಪರಿಶ್ರಮ ಜೀವಿಯೋ ಆತನಿಗೆ ದೇವರು ಸದಾ ಸಹಾಯ ಮಾಡುತ್ತಾನೆ."  

12 /12

"ನಿಮ್ಮ ಗುರಿಯೆಡೆಗೆ ಸಾಗಬೇಕು ಎಂದಾದರೆ ಒಂದೆ ದೃಷ್ಟಿಯ ಯೋಚನೆ ಧ್ಯೆಯ ಬೆನ್ನ ಹಿಂದೆ ಇರಲಿ"