Naga Chaitanya Sobhita marriage : ನಿನ್ನೆ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಬಾಲಿವುಡ್ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಪರಸ್ಪರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವಾರು ಆಪ್ತರು ಮತ್ತು ಕುಟುಂಬ ಸದಸ್ಯರು ಸಮ್ಮುಖದಲ್ಲಿ ಜೋಡಿ ಅದ್ಧೂರಿಯಾಗಿ ಸಪ್ತಪದಿ ತುಳಿದರು.. ಈ ವೇಳೆ ನಟ ರಾಣಾ ದಗ್ಗುಬಾಟಿ ಗಮನಸೆಳೆದರು.
ಇನ್ನು ನಾಗ ಚೈತನ್ಯ ಮದುವೆಯ ವಿಶೇಷ ಫೋಟೋವನ್ನು ಹಂಚಿಕೊಂಡಿರುವ ನಟ ರಾಣಾ ದಗ್ಗುಬಾಟಿ, "ಪೆಳ್ಳಿಕೊಡುಕು" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ.. ರಾಣಾಗೂ ಮತ್ತು ಚೈಗೂ ಇರುವ ಸಂಬಂಧದ ಕುರಿತು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ..
ರಾಣ ಮತ್ತು ಚೈ ನಡುವೆ ರಕ್ತ ಸಂಬಂಧ ಇದೆ. ಇಬ್ಬರೂ ಒಂದೇ ಕುಟುಂಬಕ್ಕೆ ಸೇರಿದವರು. ಚೈತನ್ಯ ತಾಯಿ ರಾಣಾಗೆ ಸೋದರ ಅತ್ತೆ ಆಗ್ಬೇಕು. ಹಾಗಾಗಿ ಅಕ್ಕಿನೇನಿ ಮತ್ತು ದಗ್ಗುಬಾಟಿ ಕುಟುಂಬಗಳು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಚೈ ಮತ್ತು ಶೋಭಿತಾ ಕಳೆದ ಒಂದೆರಡು ವರ್ಷಗಳ ಹಿಂದೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಅಂತಿಮವಾಗಿ ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡರು. ನಿನ್ನೆ ಗುರುಹಿರಿಯರ ನಡುವೆ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಇನ್ನು ಚೈತನ್ಯ ಮತ್ತು ಶೋಭಿತಾ ಮದುವೆಯಲ್ಲಿ ನಟ ರಾಣಾ ದಗ್ಗುಬಾಟಿ ಕಾಣಿಸಿಕೊಂಡಿದ್ದರು.. ಹಾಗಾಗಿ ಎಲ್ಲರೂ ರಾಣಾ ಮತ್ತು ಚೈ ನಡುವಿನ ಸಂಬಂಧದ ಕುರಿತು ಮಾತನಾಡುತ್ತಿದ್ದಾರೆ. ಅಸಲಿಗೆ ರಾಣಾ ತಂದೆ ದಗ್ಗುಬಾಟಿ ಸುರೇಶ್ ಬಾಬು ಮತ್ತು ಚಿಕ್ಕಪ್ಪ ನಟ ವಿಕ್ಟರಿ ವೆಂಕಟೇಶ್ ದಗ್ಗುಬಾಟಿ ಸಹೋದರಿ ಲಕ್ಷ್ಮಿ ದಗ್ಗುಬಾಟಿ ನಾಗ ಚೈತನ್ಯ ಅವರ ತಾಯಿ.
ಲಕ್ಷ್ಮಿ ದಗ್ಗುಬಾಟಿಗೆ ಮತ್ತು ನಟ ನಾಗಾರ್ಜುನ ಅವರಿಗೆ ಮದುವೆಯಾಗಿತ್ತು. ಇವರಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಹುಟ್ಟಿದ್ದೇ ನಾಗ ಚೈತನ್ಯ. ಕಾರಣಾಂತರದಿಂದ ಈ ಜೋಡಿ ವಿಚ್ಚೇಧನ ಪಡೆಯಿತು. ಆದರೆ ನಾಗ ಚೈತನ್ಯ ತಂದೆಯ ಕಡೆಯೇ ಬೆಳೆದರು.. ಸಧ್ಯ ನಾಗಾರ್ಜುನ ನಟಿ ಅಮಲಾ ಅವರನ್ನು ಮದುವೆಯಾಗಿದ್ದು, ಇವರಿಗೆ ಅಖಿಲ್ ಅಕ್ಕಿನೇನಿ ಎಂಬ ಮಗನಿದ್ದಾನೆ..