ಹೊಸ ವರ್ಷದಲ್ಲಿ ಈ ರಾಶಿಯವರನ್ನು ಅತಿಯಾಗಿ ಕಾಡುತ್ತಾನೆ ರಾಹು.! ಅತ್ಯಂತ ಎಚ್ಚರದಿಂದ ಇರಬೇಕು

2023 ರಲ್ಲಿ, ರಾಹು ಅಕ್ಟೋಬರ್ ವರೆಗೆ ರಾಹು ಮೇಷ ರಾಶಿಯಲ್ಲಿರುತ್ತಾನೆ. ನಂತರ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಹೊಸ ವರ್ಷದಲ್ಲಿ ರಾಹುವಿನಿಂದ ಹೆಚ್ಚು ತೊಂದರೆಗೊಳಗಾಗುವ ರಾಶಿಗಳು ಯಾವುವು ನೋಡೋಣ.
 

ಬೆಂಗಳೂರು : ಹೊಸ ವರ್ಷ ಬರಲಿದೆ. ಹೊಸತನದೊಂದಿಗೆ ಹೊಸ ವರ್ಷದ ಆಗಮನವಾಗಲಿ ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ 5 ರಾಶಿಯವರ ಕನಸನ್ನು ರಾಹು ಒಡೆದು ಹಾಕಲಿದ್ದಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹು ಯಾವಾಗಲೂ ಹಿಮ್ಮುಖವಾಗಿಯೇ ಚಲಿಸುವ ಗ್ರಹ. ನವಗ್ರಹಗಳ ಪೈಕಿ ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಇದಾದ ನಂತರ ರಾಹು. ಒಂದು ರಾಶಿಯಿಂದ  ಇನ್ನೊಂದು ರಾಶಿಗೆ ಬದಲಾಯಿಸಲು ಒಂದೂವರೆ ವರ್ಷಗಳ ಅವಧಿಯನ್ನು ತೆಗೆದುಕೊಳ್ಳುತ್ತಾನೆ. 2023 ರಲ್ಲಿ, ರಾಹು ಅಕ್ಟೋಬರ್ ವರೆಗೆ ರಾಹು ಮೇಷ ರಾಶಿಯಲ್ಲಿರುತ್ತಾನೆ. ನಂತರ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಹೊಸ ವರ್ಷದಲ್ಲಿ ರಾಹುವಿನಿಂದ ಹೆಚ್ಚು ತೊಂದರೆಗೊಳಗಾಗುವ ರಾಶಿಗಳು ಯಾವುವು ನೋಡೋಣ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ ರಾಶಿ : ರಾಹುವು ಮೇಷ ರಾಶಿಯವರ ಬುದ್ದಿಯನ್ನು ಸ್ವಲ್ಪ ಮಟ್ಟಿಗೆ ಗೊಂದಲಗೊಳಿಸುತ್ತಾನೆ. ಕೆಲಸದಲ್ಲಿ ತೆಗೆದುಕೊಳ್ಳುವ ಆತುರದ ನಿರ್ಧಾರದಿಂದ ಸಮಸ್ಯೆಗಳು ಉಂಟಾಗಬಹುದು. ಜನರ ಪಿತೂರಿಗೆ ಬಲಿಯಾಗಬೇಕಾಗಬಹುದು. ಕೆಲಸದ ಸ್ಥಳದಲ್ಲಿ ಜಗಳಗಳು ಮತ್ತು ಚರ್ಚೆಗಳು ನಡೆಯಬಹುದು.   

2 /5

ವೃಷಭ ರಾಶಿ : ಈ ಅವಧಿಯಲ್ಲಿ ರಾಹು ದೈಹಿಕ ನೋವನ್ನು ನೀಡಬಹುದು. ನಿಷ್ಪ್ರಯೋಜಕ ಕೆಲಸಗಳಿಗೆ ಹಣ ವ್ಯಯವಾಗಲಿದೆ. ಈ ಸಮಯದಲ್ಲಿ ಮಾನಸಿಕವಾಗಿ ತೊಂದರೆಗೊಳಗಾಗಬಹುದು. ಶಾರ್ಟ್‌ಕಟ್ ರೀತಿಯಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ, ತೊಂದರೆಗೊಳಗಾಗಬಹುದು.    

3 /5

ತುಲಾ ರಾಶಿ : ಉದ್ಯೋಗಸ್ಥರು ಈ ಅವಧಿಯಲ್ಲಿ ಜಾಗರೂಕರಾಗಿರಬೇಕು. ಕಚೇರಿಯಲ್ಲಿ ಜನರೊಂದಿಗೆ ವಾಗ್ವಾದ ಉಂಟಾಗಬಹುದು. ಪಾಲುದಾರರೊಂದಿಗೆ ವ್ಯಾಪಾರ ಮಾಡುವವರೂ ಜಾಗರೂಕರಾಗಿರಬೇಕು. ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಂಡರೆ ನಷ್ಟವನ್ನು ಉಂಟುಮಾಡುತ್ತದೆ. ಜನರೊಂದಿಗೆ ವೈಮನಸ್ಸು ಉಂಟಾಗಬಹುದು. .   

4 /5

ಮಕರ ರಾಶಿ : ವೈವಾಹಿಕ ಜೀವನದಲ್ಲಿ ತೊಡಕುಗಳು ಹೆಚ್ಚಾಗಲಿವೆ. ಹೊಂದಾಣಿಕೆ ಮಾಡಿಕೊಳ್ಳಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಶಾಂತಚಿತ್ತದಿಂದ ಇರಿ. ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿ ಅಹಿತಕರ ವಾತಾವರಣ ನೆಲೆಯಾಗಬಹುದು. ಜೀವನದಲ್ಲಿ ಏರಿಳಿತಗಳಿರಬಹುದು. 

5 /5

ಮೀನ ರಾಶಿ : ಈ ಅವಧಿ ಎರಡು ಅಲಗಿನ ಕತ್ತಿಯಂತೆ ಇರುತ್ತದೆ. ಅಪಾರ ಹಣ ಸಿಗುತ್ತದೆ. ಆದರೆ ಹಣಕ್ಕೆ ಹತ್ತಿರವಾಗುತ್ತಿದ್ದಂತೆ ಕುಟುಂಬದಿಂದ ದೂರವಾಗಬೆಕಾಗುತ್ತದೆ. ಸೇವಿಸುವ ಆಹಾರ ಪಾನೀಯದ ಬಗ್ಗೆ ಗಮನ ಹರಿಸಿ. ಇಲ್ಲದಿದ್ದರೆ ಆರೋಗ್ಯ ಹದಗೆಡಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.