ಸಾವಿರಾರು ಕೋಟಿ ಆಸ್ತಿ, ಲಕ್ಸುರಿ ಬಂಗಲೆ; ಮಾಧುರಿ-ಅಶ್ನೀರ್ ಐಷಾರಾಮಿ ಜೀವನ ಹೇಗಿದೆ ನೋಡಿ

ಹಣಕಾಸು ಅಕ್ರಮಗಳ ಆರೋಪದ ಮೇಲೆ ಭಾರತ್‌ಪೇ ಸಂಸ್ಥೆಯ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್​ ಪತ್ನಿ ಮಾಧುರಿ ಜೈನ್ ಅವರನ್ನು ವಜಾ ಮಾಡಲಾಗಿದೆ.

ಭಾರತ್‌ಪೇ(BharatPe) ಫಿನ್‌ಟೆಕ್ ಸಂಸ್ಥೆಯ ಪರವಾಗಿ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ (Ashneer Grover) ಅವರನ್ನು ದೀರ್ಘ ರಜೆಯ ಮೇಲೆ ಕಳುಹಿಸಿದ ಬಳಿಕ ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ (Madhuri Jain Grover)ರನ್ನು ಹಣಕಾಸು ಅಕ್ರಮಗಳ ಆರೋಪದ ಮೇಲೆ ವಜಾಗೊಳಿಸಲಾಗಿದೆ. ಫೋರ್ಬ್ಸ್ ಪ್ರಕಾರ ಅಶ್ನೀರ್ ಬರೋಬ್ಬರಿ 21,300 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಅಶ್ನೀರ್ ಇಂದು ಈ ಹಂತಕ್ಕೆ ಬೆಳೆಯಲು ಅವರ ಪತ್ನಿ ಮಾಧುರಿಯವರ ಶ್ರಮವೂ ಇದೆ. ಕೊಟಕ್ ಮಹೀಂದ್ರಾ ಬ್ಯಾಂಕ್‌ನ ವಿಪಿ ಆದ ನಂತರ ಅಶ್ನೀರ್ ಮಾಧುರಿ ಜೈನ್ ಅವರನ್ನು ವಿವಾಹವಾದರು. ಮಾಧುರಿ ಕೂಡ ವೃತ್ತಿಯಲ್ಲಿ ಉದ್ಯಮಿ. NIFT ದೆಹಲಿಯಿಂದ ಪದವಿ ಪಡೆದಿರುವ ಮಾಧುರಿ ಬ್ಯುಸಿನೆಸ್ ಮಾಡುವ ಮೊದಲು ಸತ್ಯ ಪಾಲ್ ಮತ್ತು ಅಲೋಕ್ ಇಂಡಸ್ಟ್ರೀಸ್‌ನಂತಹ ದೊಡ್ಡ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡಿದ್ದಾರೆ.

2 /5

ಸಂದರ್ಶನವೊಂದರಲ್ಲಿ, ವೃತ್ತಿ ಆಯ್ಕೆಗೆ ನನ್ನ ಪೋಷಕರು ಹೆಚ್ಚು ಬೆಂಬಲ ನೀಡಲಿಲ್ಲ ಎಂದು ಅಶ್ನೀರ್ ಹೇಳಿದ್ದರು. ಆದರೆ ಮಾಧುರಿ ನನ್ನ ಪ್ರತಿ ನಿರ್ಧಾರದಲ್ಲೂ ಬೆಂಬಲಿಸಿದರು. ಅವರ ನಡವಳಿಕೆ ನನಗೆ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡಿತು ಅಂತಾ ಹೇಳಿಕೊಂಡಿದ್ದರು.

3 /5

ಅಶ್ನೀರ್ ‘ಶಾರ್ಕ್ ಟ್ಯಾಂಕ್ ಇಂಡಿಯಾ’ ತೀರ್ಪುಗಾರರಾಗಿ ಸಾಕಷ್ಟು ಪ್ರಸಿದ್ಧರಾಗಿದ್ದರು. ಅಶ್ನೀರ್ ಮತ್ತು ಮಾಧುರಿ ದಕ್ಷಿಣ ದೆಹಲಿಯ ಐಷಾರಾಮಿ ಪ್ರದೇಶವಾದ ಪಂಚಶೀಲ್ ಪಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಅವರ ಮನೆ 18 ಸಾವಿರ ಚದರ ಅಡಿಯಲ್ಲಿದ್ದು, ಅದರ ಬೆಲೆ ಸುಮಾರು 30 ಕೋಟಿ ರೂ. ಆಗಿದೆ.

4 /5

ಮಾಧುರಿ ಮತ್ತು ಅಶ್ನೀರ್ 2.5 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಎಸ್650 ಕಾರನ್ನು ಹೊಂದಿದ್ದಾರೆ. ಇದಲ್ಲದೆ 1.89 ಕೋಟಿ ರೂ. ಮೌಲ್ಯದ ಪೋರ್ಷೆ ಕೇಮನ್, 1.14 ಕೋಟಿ ರೂ. ಮೌಲ್ಯದ Mercedes Benz GLS 350 ಮತ್ತು 58.80 ಲಕ್ಷ ರೂ. ಮೌಲ್ಯದ Audi A6 ಅನ್ನು ಹೊಂದಿದ್ದಾರೆ.

5 /5

ಮಾಧುರಿ ಮತ್ತು ಅವರ ಪತ್ನಿ ಅಶ್ನೀರ್ ಗ್ರೋವರ್ ಪ್ರವಾಸ ಮಾಡಲು ತುಂಬಾ ಇಷ್ಟಪಡುತ್ತಾರೆ. ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ವಿದೇಶ ಪ್ರವಾಸದ ಫೋಟೋಗಳನ್ನು ತಮ್ಮ Instagramನಲ್ಲಿ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ.