Met Gala Look: ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಚೋಪ್ರಾರ ಚಿತ್ರ-ವಿಚಿತ್ರ ವೇಷಭೂಷಣ ಹೇಗಿವೆ ನೋಡಿ..!

ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಚೋಪ್ರಾ ಮಾತ್ರವಲ್ಲದೆ, ದೀಪಿಕಾ ಪಡುಕೋಣೆ ಕೂಡ ಕಾಣಿಸಿಕೊಂಡಿದ್ದರು.

ಅಮೆರಿಕದಲ್ಲಿ ಪ್ರತಿವರ್ಷವೂ ಮೆಟ್ ಗಾಲಾ(Met Gala Fashion Show) ಸಮಾರಂಭವು ನಡೆಯುತ್ತದೆ. ಇಲ್ಲಿ ದೇಶ-ವಿದೇಶಗಳ ನಟ-ನಟಿಯರು ಭಾಗವಹಿಸುತ್ತಾರೆ. ಈ ಹಿಂದೆ ಅನೇಕ ಮೆಟ್ ಗಾಲಾ ಸಮಾರಂಭಗಳಲ್ಲಿ ಭಾಗವಹಿಸಿದ್ದ ಖ್ಯಾತ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಚಿತ್ರ-ವಿಚಿತ್ರ ಉಡುಗೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.

ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಚೋಪ್ರಾ ಮಾತ್ರವಲ್ಲದೆ, ದೀಪಿಕಾ ಪಡುಕೋಣೆ ಕೂಡ ಕಾಣಿಸಿಕೊಂಡಿದ್ದರು. ಅನೇಕ ಹಾಲಿವುಡ್ ಖ್ಯಾತ ನಟ-ನಟಿಯರು ವಿಚಿತ್ರ ವೇಷಭೂಷಣದಲ್ಲಿ ಕಾಣಿಸಿಕೊಂಡು ನೋಡುಗರ ಗಮನ ಸೆಳೆಯುತ್ತಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಸ್ (Nick Jonas) 2019 ರಲ್ಲಿ ವಿಚಿತ್ರ ವೇಷಭೂಷಣ ತೊಟ್ಟು ಗಮನ ಸೆಳೆದಿದ್ದರು. ಪ್ರಿಯಾಂಕಾರ ವೇಷ ಕಂಡು ಅನೇಕರು ಹೆದರಿದ್ದರು. ಭಯಾನಕ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾರನ್ನು ಅನೇಕರು ಟ್ರೋಲ್ ಮಾಡುವ ಮೂಲಕ ಗೇಲಿ ಮಾಡಿದ್ದರು.  

2 /5

2017ರ ಮೆಟ್ ಗಾಲಾ ಸಮಾರಂಭದಲ್ಲಿ ಉದ್ದನೆಯ ನಿಲುವಂಗಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ಪ್ರಿಯಾಂಕಾ ಚೋಪ್ರಾ ಗಮನ ಸೆಳೆದಿದ್ದರು. ಅವರ ವಿಚಿತ್ರ ವೇಷಭೂಷಣ ಕಂಡು ನೆಟಿಜನ್ ಗಳು ಟ್ರೋಲ್ ಮಾಡಿದ್ದರು. ಪ್ರಿಯಾಂಕಾರ ಡ್ರೆಸ್ ಕಸ ಗೂಡಿಸುವ ರೀತಿಯಲ್ಲಿದೆ ಎಂದು ವ್ಯಂಗ್ಯವಾಡಿದ್ದರು.   

3 /5

2018ರ ಮೆಟ್ ಗಾಲಾ ಸಮಾರಂಭದಲ್ಲಿ ಸರಳ ಉಡುಪು ಧರಿಸಿದ್ದ ಪ್ರಿಯಾಂಕಾ ಚೋಪ್ರಾ ತಮ್ಮ ತಲೆಯಿಂದ ಕುತ್ತಿಗೆವರೆಗೂ ಬೆರಗುಗೊಳಿಸುವ ಚಿನ್ನದ ಆಭರಣ ತೊಟ್ಟಿದ್ದರು. ಅತ್ಯಂತ ಬೆಲೆಬಾಳುವ ಚಿನ್ನಾಭರಣ ತೊಟ್ಟು ರೆಡ್ ಕಾರ್ಪೆಟ್ ಮೇಲೆ ನಡೆದು ಬಂದ ಪ್ರಿಯಾಂಕಾ ವಿಶೇಷ ಗಮನ ಸೆಳೆದಿದ್ದರು.   

4 /5

ಕೊರೊನಾ ಸಾಂಕ್ರಾಮಿಕದ ಕಾರಣ 2020ರ ಮೆಟ್ ಗಾಲಾ ಸಮಾರಂಭವನ್ನು ರದ್ದುಗೊಳಿಸಲಾಗಿತ್ತು. ಆರಂಭದಲ್ಲಿ ಈ ವಾರ್ಷಿಕ ಕಾರ್ಯಕ್ರಮವನ್ನು ಮೇ 4 ರಂದು ನಿಗದಿಪಡಿಸಲಾಗಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತ ವ್ಯಾಪಿಸಿದ ಪರಿಣಾಮ ರದ್ದುಗೊಳಿಸಲಾಗಿತ್ತು.

5 /5

ಇಂದು (ಸೆಪ್ಟೆಂಬರ್ 13) 2021ನೇ ಸಾಲಿನ ಮೆಟ್ ಗಾಲಾ ಸಮಾರಂಭ ನಡೆಯಲಿದೆ. ಮೊದಲ ಬಾರಿಗೆ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಈ ಸಮಾರಂಭವನ್ನು ಲೈವ್ ಸ್ಟ್ರೀಮ್ ಮಾಡುತ್ತಿದೆ. ಇದು ಪ್ರಪಂಚದಾದ್ಯಂತ ಅಭಿಮಾನಿಗಳಿಗೆ ಅತಿದೊಡ್ಡ ಫ್ಯಾಷನ್ ಈವೆಂಟ್ ವೀಕ್ಷಿಸಲು ಅನುವು ಮಾಡಿಕೊಡಲಿದೆ.