ಅಂಚೆ ಕಚೇರಿ ಯೋಜನೆಗಳು ಬ್ಯಾಂಕ್ ಎಫ್‌ಡಿಗಳಿಗಿಂತ ಹೆಚ್ಚಿನ ಲಾಭವನ್ನು ನೀಡುತ್ತವೆ. ಲಾಭದ ಜೊತೆಗೆ, ಈ ಯೋಜನೆಗಳಲ್ಲಿ ಭದ್ರತೆಯೂ ಇದೆ.
ನವದೆಹಲಿ : ಹಣದುಬ್ಬರದ ಮಧ್ಯೆ, ಹೂಡಿಕೆಯ ಬಗ್ಗೆ ಜನರ ತಿಳುವಳಿಕೆ ಕೂಡಾ ಹೆಚ್ಚುತ್ತಿದೆ. ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಕಡಿಮೆಯಾಗಿವೆ. ಹೀಗಿರುವಾಗ ಅಂಚೆ ಕಚೇರಿ ಯೋಜನೆಗಳು ಬ್ಯಾಂಕ್ ಎಫ್‌ಡಿಗಳಿಗಿಂತ ಹೆಚ್ಚಿನ ಲಾಭವನ್ನು ನೀಡುತ್ತವೆ. ಲಾಭದ ಜೊತೆಗೆ, ಈ ಯೋಜನೆಗಳಲ್ಲಿ ಭದ್ರತೆಯೂ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ದೇಶದ ಪ್ರಮುಖ ಬ್ಯಾಂಕ್ ಎಸ್‌ಬಿಐನಲ್ಲಿ, 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಇರುವ ಎಫ್‌ಡಿ ದರ ಕೇವಲ 5 ಪ್ರತಿಶತವಾಗಿದೆ . 5 ವರ್ಷಗಳ ಬಡ್ಡಿದರವು ಶೇಕಡಾ 5.40 ಆಗಿದೆ. ಐಸಿಐಸಿಐ ಬ್ಯಾಂಕ್ 365 ರಿಂದ 389 ದಿನಗಳವರೆಗೆ 4.9 ಶೇಕಡಾವನ್ನು ಹೊಂದಿದ್ದರೆ, ಐದು ವರ್ಷಗಳವರೆಗೆ ಇದು 5.35 ಪ್ರತಿಶತದಷ್ಟಿದೆ. ಸಾಮಾನ್ಯವಾಗಿ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿನ ಎಫ್‌ಡಿ ದರಗಳು ಈ ವ್ಯಾಪ್ತಿಯಲ್ಲಿರುತ್ತವೆ. ಆದರೆ ಅಂಚೆ ಕಚೇರಿ ಇದಕ್ಕಿಂತ ಹೆಚ್ಚಿನ ಲಾಭವನ್ನು ನೀಡುತ್ತಿದೆ.
ಪೋಸ್ಟ್ ಆಫೀಸ್ ನ ಟೈಮ್ ಡಿಪೋಸಿಟ್ ಸ್ಕೀಮ್ ನಲ್ಲಿ ಬ್ಯಾಂಕ್ ಎಫ್ಡಿಗಿಂತ ಹೆಚ್ಚಿನ ಬಡ್ಡಿ ದರ ಸಿಗಲಿದೆ. ಇಲ್ಲಿ, ಐದು ವರ್ಷಗಳವರೆಗೆ 6.7 ಶೇಕಡಾ ಬಡ್ಡಿಯನ್ನು ಪಡೆಯಬಹುದು.
ಇನ್ನು ರಿಕರಿಂಗ್ ಡಿಪೋಸಿಟ್ ಸ್ಕೀಮ್ ನಲ್ಲಿ ಬ್ಯಾಂಕ್ ಎಫ್ಡಿಗಿಂತ ಹೆಚ್ಚಿನ ಬಡ್ಡಿ ಸಿಗುತ್ತದೆ. 5 ವರ್ಷಗಳವರೆಗೆ 5.8 ಶೇಕಡಾ ಬಡ್ಡಿಯನ್ನು ಪಡೆಯ ಬಹುದು.
ಅಂಚೆ ಕಚೇರಿಯ ಐದು ವರ್ಷಗಳ National Savings Certificatesನಲ್ಲಿ ನೀವು ಬ್ಯಾಂಕ್ ಎಫ್‌ಡಿಗಿಂತ ಹೆಚ್ಚು ಅಂದರೆ 6.8 ರಷ್ಟು ಬಡ್ಡಿ ಸಿಗಲಿದೆ.
ಬ್ಯಾಂಕ್ ಎಫ್‌ಡಿಯಲ್ಲಿ ಠೇವಣಿ ಇಟ್ಟ ಹಣವನ್ನು ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಬಹುದು. ಪ್ರಸ್ತುತ, ಅದರಲ್ಲಿ ಶೇಕಡಾ 7.1 ರಷ್ಟು ಬಡ್ಡಿ ಲಭ್ಯವಿದೆ. ಆದಾಗ್ಯೂ, ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದ ಹಣವು 15 ವರ್ಷಗಳ ಲಾಕ್-ಇನ್ ಮೋಡ್‌ಗೆ ಹೋಗುತ್ತದೆ. ಆದ್ದರಿಂದ ಇಲ್ಲಿ ಹೂಡಿಕೆ ಮಾಡುವ ಮೊದಲು ಒಮ್ಮೆ ಯೋಚಿಸಿ..
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ National Savings Monthly Income Account, MISನಲ್ಲಿ ಬ್ಯಾಂಕ್ ಎಫ್ಡಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. ಪ್ರಸ್ತುತ, ಇದು ಶೇಕಡಾ 6.6 ರಷ್ಟು ವಾರ್ಷಿಕ ಬಡ್ಡಿಯನ್ನು ನೀಡುತ್ತದೆ.
ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ, ಶೇಕಡಾ 6.9 ಅಂದರೆ ಬ್ಯಾಂಕ್ ಎಫ್ಡಿಗಿಂತ ಹೆಚ್ಚಿನ ಬಡ್ಡಿ ಪಡೆಯಬಹುದು. ಅಲ್ಲದೆ ಬ್ಯಾಂಕ್ ಎಫ್‌ಡಿ ಹಣವನ್ನು ಕೆವಿಪಿಯಲ್ಲಿ ಹೂಡಿಕೆ ಮಾಡಬಹುದು. ಇದು ನಿಮಗೆ ಸುರಕ್ಷಿತ ಮತ್ತು ಉತ್ತಮ ಲಾಭವನ್ನು ನೀಡುತ್ತದೆ.