Car Price Hike:ಕಾರು ಖರೀದಿ ಯೋಚನೆಯಿದ್ದರೆ ತಡ ಮಾಡಬೇಡಿ ಆಗಸ್ಟ್ ನಲ್ಲಿ ಏರಿಕೆಯಾಗಲಿದೆ ಕಾರು ಬೆಲೆ

Honda Car Price Hike:ಮಾರುತಿಯ ನಂತರ, ಈಗ Honda Cars India ಕೂಡ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಜಪಾನ್‌ನ ವಾಹನ ತಯಾರಕ ಕಂಪನಿಯು ಮುಂದಿನ ತಿಂಗಳುಗಳಿಂದ ಅಂದರೆ ಆಗಸ್ಟ್ 2021 ರಿಂದ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ

Honda Car Price Hike:ಮಾರುತಿಯ ನಂತರ, ಈಗ Honda Cars India ಕೂಡ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಜಪಾನ್‌ನ ವಾಹನ ತಯಾರಕ ಕಂಪನಿಯು ಮುಂದಿನ ತಿಂಗಳುಗಳಿಂದ ಅಂದರೆ ಆಗಸ್ಟ್ 2021 ರಿಂದ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ.  ನೀವು ಪ್ರಸ್ತುತ ಬೆಲೆಗೆ ಹೋಂಡಾ ಕಾರುಗಳನ್ನು ಖರೀದಿಸಲು ಬಯಸಿದರೆ, ಈ ತಿಂಗಳು ನಿಮ್ಮ ಆಯ್ಕೆಯ ಹೋಂಡಾ ಕಾರನ್ನು ನೀವು ಖರೀದಿಸಬಹುದಾಗಿದೆ. ನಂತರ ಈ ಕಾರುಗಳಿಗೆ ಹೆಚ್ಚಿನ ಬೆಲೆ ನೀಡಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ 2021 ರ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ.  ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ನಲ್ಲಿ ರೆಗ್ಯುಲೇಟರಿ ಫೈಲ್ಲಿಂಗ್  ಸಂದರ್ಭದಲ್ಲಿ ಮಾರುತಿ ಸುಜುಕಿ ಈ ಮಾಹಿತಿಯನ್ನು ನೀಡಿತ್ತು

2 /4

Honda Cars Indiaದ ಹಿರಿಯ ಅಧಿಕಾರಿಯೊಬ್ಬರು, ಕಚ್ಚಾ ವಸ್ತುಗಳ  ಬೆಲೆ ಹೆಚ್ಚಳದಿಂದಾಗಿ ಕಂಪನಿಯು ಈ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಕಾರುಗಳ ಉತ್ಪಾದನೆಯಲ್ಲಿ ಅನೇಕ ರೀತಿಯ ಕಚ್ಚಾ ವಸ್ತುಗಳು, ಅನೇಕ ಲೋಹಗಳನ್ನು ಬಳಸಲಾಗುತ್ತದೆ. ಆದರೆ, ಎಷ್ಟು ಬೆಲೆಗಳನ್ನು ಹೆಚ್ಚಿಸಲಾಗುವುದು ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ

3 /4

ಹೋಂಡಾ ಕಾರ್ಸ್ ಇಂಡಿಯಾದ ಕಾರುಗಳ ಬೆಲೆಯನ್ನು ವಿವಿಧ ಮಾದರಿಗಳು ಮತ್ತು ರೂಪಾಂತರಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕಂಪನಿಯು ಭಾರತದಲ್ಲಿ ಹೋಂಡಾ ಸಿಟಿ, ಹೋಂಡಾ ಅಮೇಜ್, ಹೋಂಡಾ BRV,ಹೋಂಡಾ WRV ಮತ್ತು ಹೋಂಡಾ CRV ಸೇರಿದಂತೆ ಬೇರೆ ಬೇರೆ ಮಾಡೆಲ್ ಗಳನ್ನೂ  ಮಾರಾಟ ಮಾಡುತ್ತದೆ. 

4 /4

ಕಚ್ಚಾ ವಸ್ತುಗಳಾದ ಉಕ್ಕು, ಅಲ್ಯೂಮಿನಿಯಂ ಮತ್ತು ಲೋಹಗಳ ಬೆಲೆ ಹೆಚ್ಚಾಗಿದೆ ಎಂದು ಹೋಂಡಾ ಕಾರ್ಸ್ ಇಂಡಿಯಾದ ಮಾರ್ಕೆಟಿಂಗ್ ಮತ್ತು ಸೇಲ್ಸ್ ನ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕ ರಾಜೇಶ್ ಗೋಯೆಲ್ ಹೇಳಿದ್ದಾರೆ. ಕೆಲವು ಸರಕುಗಳ ಬೆಲೆಗಳು ಗರಿಷ್ಠ ಮಟ್ಟವನ್ನು ತಲುಪಿವೆ. ಈ ಹಿನ್ನೆಲೆಯಲ್ಲಿ ಉತ್ಪಾದನಾ ವೆಚ್ಚದಲ್ಲೂ ಹೆಚ್ಚಳ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.