PMMVY - ದೇಶಾದ್ಯಂತ ಇರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಹಿರಿಯ ನಾಗರಿಕರಿಗಾಗಿ ಮೋದಿ ಸರ್ಕಾರ ವಿವಿಧ ಯೋಜನೆಗಳನ್ನು ನಡೆಸುತ್ತಿದೆ. ಬಿಪಿಎಲ್ ಕುಟುಂಬಗಳಿಗೆ (BPL Families) ಹಲವು ಯೋಜನೆಗಳಡಿ ನೆರವು ನೀಡಲಾಗುತ್ತದೆ.
PMMVY - ದೇಶಾದ್ಯಂತ ಇರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಹಿರಿಯ ನಾಗರಿಕರಿಗಾಗಿ ಮೋದಿ ಸರ್ಕಾರ ವಿವಿಧ ಯೋಜನೆಗಳನ್ನು ನಡೆಸುತ್ತಿದೆ. ಬಿಪಿಎಲ್ ಕುಟುಂಬಗಳಿಗೆ (BPL Families) ಹಲವು ಯೋಜನೆಗಳಡಿ ನೆರವು ನೀಡಲಾಗುತ್ತದೆ. ಕೇಂದ್ರ ಸರ್ಕಾರದ ವತಿಯಿಂದ ಇಂತಹುದೇ ಒಂದು ಯೋಜನೆಯನ್ನು ಕೇಂದ್ರ ಸರ್ಕಾರ (Modi Govt Financial Aid To Mothers) ನಡೆಸುತ್ತಿದ್ದು, ಈ ಯೋಜನೆಯಡಿ ಮನೆಯಲ್ಲಿ ಶಿಶುವಿನ ಜನನದ ನಂತರ ಧನಸಹಾಯ ಒದಗಿಸಲಾಗುತ್ತಿದೆ.
1. ಜನವರಿ 1, 2017ರಲ್ಲಿ ಈ ಯೋಜನೆ ಆರಂಭಗೊಂಡಿದೆ - ಕೇಂದ್ರ ಸರ್ಕಾರ ನಡೆಸುತ್ತಿರುವ ಈ ಯೋಜನೆಯ ಹೆಸರು 'ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ' (Pradhan Mantri Matritva Vandana Yojana). ಇದರ ಅಡಿಯಲ್ಲಿ 5000 ರೂ.ಗಳ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಈ ಯೋಜನೆಯನ್ನು 1 ಜನವರಿ 2017 ರಂದು ಪ್ರಾರಂಭಿಸಲಾಗಿದೆ.
2. ಯಾರಿಗೆ ಈ ಸಹಾಯಧನ ಒದಗಿಸಲಾಗುತ್ತದೆ? - 'ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ' ಅಡಿಯಲ್ಲಿ, ಮೊದಲ ಬಾರಿಗೆ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು 'ಪ್ರಧಾನ ಮಂತ್ರಿ ಗರ್ಭಾವಸ್ಥೆಯ ನೆರವು ಯೋಜನೆ' ಎಂದೂ ಕೂಡ ಕರೆಯಲಾಗುತ್ತದೆ.
3. ಮೂರು ಕಂತುಗಳಲ್ಲಿ ಈ ಹಣ ನೀಡಲಾಗುತ್ತದೆ - ಯೋಜನೆಯ ಲಾಭ ಪಡೆಯಲು, ಮೊದಲ ಬಾರಿಗೆ ಗರ್ಭವತಿಯಾದಾಗ ನೋಂದಣಿಗಾಗಿ, ಗರ್ಭಿಣಿ ಮತ್ತು ಅವರ ಪತಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಫೋಟೋಸ್ಟಾಟ್ ಹೊಂದಿರುವುದು ಅವಶ್ಯಕ. ಬ್ಯಾಂಕ್ ಖಾತೆ ಜಂಟಿಯಾಗಿರಬಾರದು. ಯೋಜನೆಯಡಿ ಗರ್ಭಿಣಿಯರಿಗೆ 3 ಕಂತುಗಳಲ್ಲಿ 5000 ರೂ. ಸಹಾಯ ಧನ ಒದಗಿಸಲಾಗುತ್ತದೆ.
4.ಮಹಿಳೆಯರ ಖಾತೆಗೆ ನೇರ ಹಣ ವರ್ಗಾವಣೆ - ಮೊದಲ ಬಾರಿಗೆ ತಾಯಿಯಾಗುವ ಮಹಿಳೆಗೆ ಪೋಷಣೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ 5000 ರೂ.ಗಳಲ್ಲಿ ಮೊದಲ ಕಂತು 1000 ರೂ.ಗಳದ್ದಾಗಿದ್ದರೆ, ಎರಡನೇ ಕಂತು 2000 ರೂ.ಗಳು ಮತ್ತು ಮೂರನೇ ಕಂತು 2000 ರೂ.ಗಳದ್ದಾಗಿರುತ್ತದೆ. ಸರ್ಕಾರಿ ನೌಕರಿಯಲ್ಲಿ ನಿರತರಾಗಿರುವ ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ. ಈ ಯೋಜನೆಯಲ್ಲಿ ಹಣ ನೇರವಾಗಿ ಮಹಿಳೆಯರ ಖಾತೆಗೆ ವರ್ಗಾವಣೆಯಾಗುತ್ತದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು? - ನೀವು ASHA ಅಥವಾ ANM ಮೂಲಕ PM Matritva Vandana Yojana ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಆನ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಆಗಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿಯೇ ಆಗಲಿ, ಯೋಜನೆಯ ಪ್ರಯೋಜನವನ್ನು ಎಲ್ಲಾ ಮಹಿಳೆಯರಿಗೆ ಒದಗಿಸಲಾಗುತ್ತದೆ.