ಪಿಎಂ ಸ್ವಾನಿಧಿ ಯೋಜನೆ: ಯಾವುದೇ ಗ್ಯಾರಂಟಿ ಇಲ್ಲದೆ ಸರ್ಕಾರದಿಂದ ಪಡೆಯಿರಿ ಸಾಲ ಸೌಲಭ್ಯ

                 

  • Nov 20, 2020, 08:34 AM IST

ಕೇಂದ್ರ ಸರ್ಕಾರವು ಸ್ವಾವಲಂಬಿ ಭಾರತ ಅಭಿಯಾನದಡಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ 50 ಲಕ್ಷ ಜನರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ.
 

1 /7

ನವದೆಹಲಿ: ಕೊರೊನಾವೈರಸ್‌ನಿಂದಾಗಿ ದೇಶದಲ್ಲಿ ಲಾಕ್‌ಡೌನ್‌ ಜಾರಿಗೆ ಬಂದಾಗಿನಿಂದ ಬೀದಿ ಬದಿ ವ್ಯಾಪಾರಿಗಳ ಬೆನ್ನನ್ನು ಮುರಿದಂತಾಗಿದೆ. ಅಂತಹ ಜನರಿಗೆ ಸಹಾಯ ಮಾಡಲು ಮೋದಿ ಸರ್ಕಾರ ಸ್ವಾನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಕರೋನಾ ಬಿಕ್ಕಟ್ಟಿನ ಮಧ್ಯೆ ಜನರು ಈ ಯೋಜನೆಯ ಲಾಭವನ್ನು ದೊಡ್ಡ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿದ್ದಾರೆ.  

2 /7

ಪಿಎಂ ಸ್ವಾನಿಧಿ ಯೋಜನೆಯನ್ನು ಜುಲೈ 2 ರಂದು ಪ್ರಾರಂಭಿಸಲಾಯಿತು. ಕೇಂದ್ರ ಸರ್ಕಾರವು ಸ್ವಾವಲಂಬಿ ಭಾರತ ಅಭಿಯಾನದಡಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ 50 ಲಕ್ಷ ಜನರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಯೋಜನೆಯಡಿ ಸಾಲ ತೆಗೆದುಕೊಳ್ಳಲು ಯಾವುದೇ ಗ್ಯಾರಂಟಿ ನೀಡುವ ಅಗತ್ಯವಿಲ್ಲ.  

3 /7

ಸ್ವಾನಿಧಿ ಯೋಜನೆಯಡಿ ಇದುವರೆಗೆ 25 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈಗಾಗಲೇ 12 ಲಕ್ಷ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು ಸುಮಾರು 5.35 ಲಕ್ಷ ಮೌಲ್ಯದ ಸಾಲಗಳನ್ನು ವಿತರಿಸಲಾಗಿದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.   ಪಿಎಂ ಸ್ವಾನಿಧಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಿರಿ

4 /7

ಪಿಎಂ ಸ್ವಾನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ 10,000 ರೂ. ಸಾಲಕ್ಕೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲ. ಈ ಯೋಜನೆಯ ಉದ್ದೇಶ ಕೇವಲ ಸಾಲ ನೀಡುವುದು ಮಾತ್ರವಲ್ಲ, ಬೀದಿ ಬದಿ ವ್ಯಾಪಾರಿಗಳ ಒಟ್ಟಾರೆ ಅಭಿವೃದ್ಧಿ ಮತ್ತು ಆರ್ಥಿಕ ಉನ್ನತಿಯ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು ಎಂದು ಪಿಎಂ ಮೋದಿ ಹೇಳುತ್ತಾರೆ. PM Kisan: ಮುಂದಿನ ತಿಂಗಳು ಯಾವ ರೈತರಿಗೆ ಸಿಗಲಿದೆ 2000ರೂ., ನಿಮ್ಮ ಹೆಸರನ್ನು ಹೀಗೆ ಪರಿಶೀಲಿಸಿ

5 /7

ಉತ್ತರ ಪ್ರದೇಶದಲ್ಲಿ 6 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಈ ಪೈಕಿ 3.27 ಲಕ್ಷ ಅರ್ಜಿಗಳನ್ನು ಅನುಮೋದಿಸಲಾಗಿದೆ. ಉತ್ತರಪ್ರದೇಶದಲ್ಲಿ, ಸ್ವಾನಿಧಿ ಯೋಜನೆಯ ಸಾಲ ಒಪ್ಪಂದಕ್ಕಾಗಿ ಸ್ಟಾಂಪ್ ಡ್ಯೂಟಿ ಮನ್ನಾ ಮಾಡಲಾಗಿದೆ.

6 /7

ನೀವೂ ಕೂಡ ಸ್ವ ಉದ್ಯೋಗ/ಸ್ವ ವ್ಯವಹಾರ ಪ್ರಾರಂಭಿಸಲು ನಿಮಗೆ ಬಂಡವಾಳದ ಕೊರತೆ ಇದ್ದರೆ ಯಾವುದೇ ಖಾತರಿ ಇಲ್ಲದೆ ನೀವು ಪಿಎಂ ಸ್ವಾನಿಧಿ ಯೋಜನೆಯಡಿ 10,000 ರೂ.ವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ನಿಮ್ಮ ಹತ್ತಿರದ ಬ್ಯಾಂಕ್‌ಗೆ ಹೋಗಿ 10 ಸಾವಿರ ರೂಪಾಯಿಗಳ ಸಾಲವನ್ನು ತೆಗೆದುಕೊಳ್ಳುವ ಮೂಲಕ ನೀವು ವ್ಯವಹಾರವನ್ನು ಪ್ರಾರಂಭಿಸಬಹುದು.

7 /7

ಸಾಲಗಾರನು ಅದನ್ನು ಒಂದು ವರ್ಷದಲ್ಲಿ ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕಾಗುತ್ತದೆ. ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವವರಿಗೆ ವಾರ್ಷಿಕ 7 ಪ್ರತಿಶತದಷ್ಟು ಬಡ್ಡಿ ಸಬ್ಸಿಡಿ ನೀಡಲಾಗುವುದು. 1200 ರೂ.ವರೆಗೆ ಕ್ಯಾಶ್‌ಬ್ಯಾಕ್ ಕೂಡ ಇದೆ.