ಪ್ರತೀವರ್ಷ ಆಗಸ್ಟ್ 10ರಂದು ವಿಶ್ವ ಸಿಂಹ ದಿನವನ್ನಾಗಿ ಆಚರಿಸಲಾಗುತ್ತದೆ.
ಪ್ರತೀವರ್ಷ ಆಗಸ್ಟ್ 10ರಂದು ವಿಶ್ವ ಸಿಂಹ ದಿನವನ್ನಾಗಿ ಆಚರಿಸಲಾಗುತ್ತದೆ. ಕ್ಷೀಣಿಸುತ್ತಿರುವ ಸಿಂಹಗಳ ಸಂಖ್ಯೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಸಿಂಹ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಹೆಚ್ಚಾಗಿ ಏಷ್ಯಾಟಿಕ್ ಸಿಂಹವು ಗುರುತಿಸಲ್ಪಟ್ಟಿದೆ. ಕಾಡಿನ ರಾಜ ಸಿಂಹ ಧೈರ್ಯದ ಸಂಕೇತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಸಿಂಹದ ದಿನದ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಸಿಂಹಗಳ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
The lion is majestic and courageous. India is proud to be home to the Asiatic Lion. On World Lion Day, I convey my greetings to all those passionate about lion conservation. It would make you happy that the last few years have seen a steady increase in India’s lion population. pic.twitter.com/GaCEXnp7hG
— Narendra Modi (@narendramodi) August 10, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
‘ಸಿಂಹವು ಗಂಭೀರ ಮತ್ತು ಧೈರ್ಯಶಾಲಿ. ಏಷಿಯಾಟಿಕ್ ಸಿಂಹಕ್ಕೆ ತವರು ಎಂದು ಭಾರತ ಹೆಮ್ಮೆ ಪಡುತ್ತದೆ. ವಿಶ್ವ ಸಿಂಹ ದಿನದಂದು ಸಿಂಹ ಸಂರಕ್ಷಣೆಯ ಬಗ್ಗೆ ಆಸಕ್ತಿ ಹೊಂದಿರುವ ಎಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದ ಸಿಂಹಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ ಎಂದು ಹೇಳಲು ಸಂತೋಷವಾಗುತ್ತದೆ’ ಅಂತಾ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಗುಜರಾತ್ನಲ್ಲಿ ನಡೆದ ಗಣತಿಯ ಪ್ರಕಾರ ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡಿರುವುದು ತಿಳಿದು ಬಂದಿದೆ. ಭಾರತದಲ್ಲಿ 2015ರ ಗಣತಿಯ ಪ್ರಕಾರ 523 ಸಿಂಹಗಳು ಹಾಗೂ 2020ರಲ್ಲಿ ನಡೆದ ಗಣತಿಯ ಪ್ರಕಾರ ಒಟ್ಟು 674 ಸಿಂಹಗಳು ಇರುವುದು ತಿಳಿದುಬಂದಿದೆ. ಕಳೆದ 5 ವರ್ಷಗಳಲ್ಲಿ ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.
ಏಷ್ಯಾ, ಆಫ್ರಿಕಾ ಹಾಗೂ ಯುರೋಪಿನಾದ್ಯಂತ 3 ಮಿಲಿಯನ್ ವರ್ಷಗಳ ಹಿಂದೆಯೇ ಸಿಂಹಗಳು ಮುಕ್ತವಾಗಿ ಸಂಚರಿಸುತ್ತಿದ್ದವು. ಕಳೆದ 100 ವರ್ಷಗಳಲ್ಲಿ ಗಮನಿಸಿದರೆ ಶೇ.80ರಷ್ಟು ಕಣ್ಮರೆಯಾಗಿವೆ ಎಂದು ಅಂಕಿ-ಅಂಶಗಳು ತಿಳಿಸುತ್ತವೆ. ಇತ್ತೀಚಿಗಿನ ಸಮೀಕ್ಷೆಯೊಂದರ ಪ್ರಕಾರ ಸಿಂಹಗಳ ಸಂಖ್ಯೆ 30 ಸಾವಿರದಿಂದ 20 ಸಾವಿರಕ್ಕೆ ಇಳಿಕೆಯಾಗಿದೆ ಅಂತಾ ತಿಳಿದುಬಂದಿದೆ.
ಭಾರತದಲ್ಲಿ ಹೆಚ್ಚಾಗಿ ಏಷ್ಯಾಟಿಕ್ ಸಿಂಹಗಳು ಕಂಡುಬರುತ್ತವೆ. ಅವುಗಳು ನಿರ್ಬಂಧಿತ ಗಿರ್ ಅರಣ್ಯದಲ್ಲಿ ಮತ್ತು ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡು ಬರುತ್ತವೆ. ಹೀಗಾಗಿ ಏಷ್ಯಾಟಿಕ್ ಸಿಂಹಕ್ಕೆ ಭಾರತವೇ ತವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.
ಭಾರತದಲ್ಲಿ ಸಿಂಹಗಳು ವರ್ಣಚಿತ್ರ, ಸಾಹಿತ್ಯ ಮತ್ತು ರಾಜ ಲಾಂಛನಗಳ ಜೊತೆಗೆ ಸಾಂಸ್ಕೃತಿಕ ಗುರುತಿನ ಒಂದು ಭಾಗವಾಗಿದೆ. ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಸಿಂಹಗಳನ್ನು ದೊಡ್ಡ ಪ್ರಮಾಣದಲ್ಲಿ ಬೇಟಿಯಾಡಲಾಯಿತು. ಬಳಿಕ ಸಿಂಹಗಳ ಸಂಖ್ಯೆ ಇಳಿಕೆಯ ಹಾದಿ ಹಿಡಿಯಿತು ಅಂತಾ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಭಾರತ ಸರ್ಕಾರವು ಸಿಂಹಗಳನ್ನು ರಕ್ಷಣೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅರಣ್ಯ ನಾಶ, ಅತಿಯಾದ ಬೇಟೆಯಿಂದಾಗಿ ಕಾಡಿನಲ್ಲಿ ಒಂಟಿಯಾಗಿ ಅಲೆಯುವ ಸಿಂಹಗಳ ಘರ್ಜನೆ ದಿನೇ ದಿನೇ ಕ್ಷೀಣಿಸುತ್ತಿದೆ. ಹೀಗಾಗಿ ಸಿಂಹಗಳ ಸಂಖ್ಯೆಯಲ್ಲಿ ಕ್ರಮೇಣ ಇಳಿಕೆ ಕಂಡು ಬರುತ್ತಿದೆ. ಸಿಂಹಗಳ ಸಂರಕ್ಷಣೆ ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವಾಗಿದೆ. ಇರುವ ಅಲ್ಪಪ್ರಮಾಣದ ಸಿಂಹಗಳನ್ನು ರಕ್ಷಿಸುವ ಮಹತ್ತರ ಜವಾವ್ದಾರಿ ನಮ್ಮ ಮೇಲಿದೆ.