Atal Setu Bridge: ದೇಶದ ಅತೀ ಉದ್ದದ ಸೇತುವೆ, ದೇಶದ ಅತೀ ಉದ್ದದ ಸಮುದ್ರ ಸೇತುವೆ ಹಾಗೂ ವಿಶ್ವದ 12ನೇ ಅತೀ ಉದ್ದದ ಸಮುದ್ರ ಸೇತುವೆಯೆಂಬ ಕೀರ್ತಿಗೆ ಅಟಲ್ ಸೇತುವೆ ಪಾತ್ರವಾಗಿದೆ.
ನವದೆಹಲಿ: ಮುಂಬೈ ಟ್ರಾನ್ಸ್ ಮತ್ತು ಹಾರ್ಬರ್ ಲಿಂಕ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು(ಜನವರಿ 13) ಲೋಕಾರ್ಪಣೆ ಮಾಡಿದ್ದಾರೆ. ದೇಶದ ಅತೀ ಉದ್ದದ ಸೇತುವೆ, ದೇಶದ ಅತೀ ಉದ್ದದ ಸಮುದ್ರ ಸೇತುವೆ ಹಾಗೂ ವಿಶ್ವದ 12ನೇ ಅತೀ ಉದ್ದದ ಸಮುದ್ರ ಸೇತುವೆಯೆಂಬ ಕೀರ್ತಿಗೆ ಅಟಲ್ ಸೇತುವೆ ಪಾತ್ರವಾಗಿದೆ. ಅಟಲ್ ಸೇತುವೆಯ ಪ್ರಮುಖ ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ದೇಶದ ಅತೀ ಉದ್ದದ ಅಟಲ್ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ದೇಶದ ಅತೀ ಉದ್ದದ ಸೇತುವೆ, ದೇಶದ ಅತೀ ಉದ್ದದ ಸಮುದ್ರ ಸೇತುವೆ ಹಾಗೂ ವಿಶ್ವದ 12ನೇ ಅತೀ ಉದ್ದದ ಸಮುದ್ರ ಸೇತುವೆಯೆಂಬ ಕೀರ್ತಿಗೆ ಅಟಲ್ ಸೇತುವೆ ಪಾತ್ರವಾಗಿದೆ.
ಮುಂಬಯಿ- ನವಿಮುಂಬಯಿ ನಡುವೆ ಸಂಪರ್ಕ ಕಲ್ಪಿಸುವ ಈ ಸೇತುವೆ ಒಟ್ಟು 22 ಕಿ.ಮೀ ಉದ್ದವಿದೆ. ಸೇತುವೆಯ ಮಾರ್ಗ ಒಟ್ಟು 5.5 ಕಿ.ಮೀಯಷ್ಟು ಭೂಭಾಗದಲ್ಲಿ ಹಾದು ಹೋಗಿದೆ.
ಈ ಅಟಲ್ ಸೇತುವೆಯು ಸಮುದ್ರಮಟ್ಟದಿಂದ 15 ಮೀಟರ್ ಎತ್ತರವಿದ್ದು, 6 ರಸ್ತೆ ಪಥಗಳನ್ನು ಹೊಂದಿದೆ.
ಈ ಸೇತುವೆಯಿಂದ ಒಟ್ಟು 100 ನಿಮಿಷಗಳಷ್ಟು ಪ್ರಯಾಣದ ಸಮಯ ಉಳಿತಾಯವಾಗುತ್ತದೆ. ದಿನಂಪ್ರತಿ 70 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುವ ನಿರೀಕ್ಷೆ ಇದೆ.
ಈ ಮುಂಬೈ ಟ್ರಾನ್ಸ್ ಮತ್ತು ಹಾರ್ಬರ್ ಲಿಂಕ್ ಸೇತುವೆಯ ಜೀವಿತಾವಧಿ ಬರೋಬ್ಬರಿ 100 ವರ್ಷಗಳಾಗಿವೆ ಎಂದು ವರದಿಯಾಗಿದೆ.
ಈ ಸೇತುವೆಯ ಯೋಜನಾ ವೆಚ್ಚ ಬರೋಬ್ಬರಿ 18,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಈ ಸೇತುವೆ ನಿರ್ಮಾಣಕ್ಕೆ 1.7 ಲಕ್ಷ ಮೆಟ್ರಿಕ್ ಟನ್ ಉಕ್ಕು ಬಳಕೆ ಮಾಡಲಾಗಿದೆ.
ಈ ಸೇತುವೆ ನಿರ್ಮಾಣಕ್ಕೆ 5.04 ಲಕ್ಷ ಮೆಟ್ರಿಕ್ ಟನ್ ಸಿಮೆಂಟ್ ಬಳಕೆ ಮಾಡಲಾಗಿದೆ.
ಒಟ್ಟು 5,403 ಎಂಜಿನಿಯರ್ ಮತ್ತು ಕಾರ್ಮಿಕರು ಈ ಸೇತುವೆ ನಿರ್ಮಾಣದ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.