ಪ್ರತಿಯೊಬ್ಬರೂ ಈ ಐದು ಲಸಿಕೆಗಳನ್ನು ಹಾಕಿಸಿಕೊಳ್ಳಲೇ ಬೇಕು , ಇಲ್ಲವಾದರೆ ತಪ್ಪಿದ್ದಲ್ಲ ಸಮಸ್ಯೆ

Vaccines for lifetime : ಕೋವಿಡ್-19 ಲಸಿಕೆ ಮಾತ್ರವಲ್ಲ, ನಿಮ್ಮ ಜೀವಿತಾವಧಿಯಲ್ಲಿ ನೀವು ಕೆಲವು ಲಸಿಕೆಗಳನ್ನು ಪಡೆಯಬೇಕು, ಅದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ.

Vaccines for lifetime : ನೀವು ಇಲ್ಲಿಯವರೆಗೆ ಯಾವ ಲಸಿಕೆಗಳನ್ನು ಪಡೆದುಕೊಂಡಿದ್ದೀರಿ? ಕೋವಿಡ್ ಅವಧಿಯಲ್ಲಿ ಲಸಿಕೆಯು ನಮ್ಮ ಜೀವಗಳನ್ನು ಉಳಿಸಲು ಎಷ್ಟು ಮುಖ್ಯ ಎಂಬುದನ್ನು ಸಾಬೀತುಪಡಿಸಿದೆ. ಕೋವಿಡ್-19 ಲಸಿಕೆ ಮಾತ್ರವಲ್ಲ, ನಿಮ್ಮ ಜೀವಿತಾವಧಿಯಲ್ಲಿ ನೀವು ಕೆಲವು ಲಸಿಕೆಗಳನ್ನು ಪಡೆಯಲೇಬೇಕು. ಅದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ . ಅಂತಹ 5 ಲಸಿಕೆಗಳ ಬಗ್ಗೆ ನಾವು ಹೇಳಲಿದ್ದೇವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕೋವಿಡ್ -19 ನಿಂದ ರಕ್ಷಣೆಗಾಗಿ ಲಸಿಕೆ ಬಹಳ ಮುಖ್ಯ. ಬೂಸ್ಟರ್ ಶಾಟ್‌ಗಳು ಸಹ ಅಗತ್ಯವಾಗಬಹುದು. ಈ ಲಸಿಕೆಗಳನ್ನು ಪಡೆಯಲು  ಸ್ವಲ್ಪವೂ ವಿಳಂಬ ಮಾಡಬಾರದು. ಈ ಲಸಿಕೆಯು ಕೋವಿಡ್ -19 ಗೆ ಕಾರಣವಾಗುವ ವೈರಸ್‌ ಣ ವಿರುದ್ದ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಗಂಭೀರವಾದ ಅನಾರೋಗ್ಯ ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ

2 /5

ಕೋವಿಡ್ -19 ಲಸಿಕೆ ಬಗ್ಗೆ ಜನರಿಗೆ ತಿಳಿದಿದ್ದರೂ ಸಹ, ಇನ್ಫ್ಲುಯೆನ್ಸ ಲಸಿಕೆ ಮಹತ್ವ ಮತ್ತು ಅಗತ್ಯದ ಬಗ್ಗೆ ಜನರಲ್ಲಿ ಇನ್ನೂ ಹೆಚ್ಕಚಿನ ಮಾಹಿತಿ ಇಲ್ಲ. ಜಾಗೃತಿ ಕೂಡಾ ಮೂಡಿಲ್ಲ. ಫ್ಲೂ ಒಂದು ರೀತಿಯ ಜ್ವರವಾಗಿದ್ದು, ಇಡೀ ವರ್ಷ ವ್ಯಕ್ತಿಯನ್ನು ಪೀಡಿಸಬಹುದು, ಆದ್ದರಿಂದ ಫ್ಲೂ ಲಸಿಕೆಯನ್ನು ಪಡೆಯುವುದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  

3 /5

ಹೆಪಟೈಟಿಸ್ ಬಿ ಲಸಿಕೆಯು ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂನ ಭಾಗವಾಗಿದೆ, ಆದರೆ ಕೇವಲ ಅರ್ಧದಷ್ಟು ಮಕ್ಕಳು ಮಾತ್ರ ಹೆಪಟೈಟಿಸ್ ಬಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ರೋಗವು ಯಕೃತ್ತಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.  . ಅದಕ್ಕಾಗಿಯೇ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಹೆಪಟೈಟಿಸ್ ವಿರುದ್ಧ ಲಸಿಕೆ ಹಾಕಬೇಕು ಇದರಿಂದ ಅವರು ಭವಿಷ್ಯದಲ್ಲಿ ಯಾವುದೇ ಗಂಭೀರ ಕಾಯಿಲೆಗಳನ್ನು ಎದುರಿಸುವುದಿಲ್ಲ.

4 /5

ನ್ಯುಮೊಕೊಕಲ್ ಲಸಿಕೆ (PVC) ನ್ಯುಮೋನಿಯಾವನ್ನು ತಡೆಗಟ್ಟಲು ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ.  ನ್ಯುಮೋನಿಯಾ ಇತರ ಯಾವುದೇ ಸಾಂಕ್ರಾಮಿಕ ರೋಗಗಳಿಗಿಂತ ಹೆಚ್ಚು ಮಕ್ಕಳನ್ನು ಬಾಧಿಸುತ್ತದೆ. 

5 /5

ಮಹಿಳೆಯರಿಗೆ ನೀಡಲಾಗುವ HPV ಲಸಿಕೆ ಗರ್ಭಕೋಶದ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ. ಕ್ಯಾನ್ಸರ್ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಕಮಿಟಿ ಆನ್ ಇಮ್ಯುನೈಸೇಶನ್ (IAPCOI) ಪ್ರಕಾರ, HPV ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ ಮತ್ತು ಈ ಲಸಿಕೆಯನ್ನು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ 6 ತಿಂಗಳ ಮಧ್ಯಂತರದಲ್ಲಿ ನೀಡಲಾಗುತ್ತದೆ.