ಆಲಿಯಾ ಭಟ್ ಅವರು ರಣಬೀರ್ ಕಪೂರ್ ಜೊತೆಗಿನ 3 ಫೋಟೋಗಳನ್ನು ಚಿತ್ರಗಳನ್ನು ತಮ್ಮ ಅಧಿಕೃತ Instagram ಖಾತೆಯಲ್ಲಿ ಇಂದು ಅಂದರೆ ಶನಿವಾರ ಹಂಚಿಕೊಂಡಿದ್ದಾರೆ.
ಬೆಂಗಳೂರು : ಕಳೆದ ತಿಂಗಳ 14 ರಂದು, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಇಂದಿಗೆ ಇವರ ವಿವಾಹವಾಗಿ ಒಂದು ತಿಂಗಳು ಆಗಿದೆ. ಇದೇ ಕಾರಣಕ್ಕೆ ಆಲಿಯಾ ಸೋಶಿಯಲ್ ಮೀಡಿಯಾದಲ್ಲಿ ಪತಿ ರಣಬೀರ್ ಕಪೂರ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಆಲಿಯಾ ಭಟ್ ಅವರು ರಣಬೀರ್ ಕಪೂರ್ ಜೊತೆಗಿನ 3 ಫೋಟೋಗಳನ್ನು ಚಿತ್ರಗಳನ್ನು ತಮ್ಮ ಅಧಿಕೃತ Instagram ಖಾತೆಯಲ್ಲಿ ಇಂದು ಅಂದರೆ ಶನಿವಾರ ಹಂಚಿಕೊಂಡಿದ್ದಾರೆ. ಪರ್ಫೆಕ್ಟ್ ಜೋಡಿಯ ಪರ್ಫೆಕ್ಟ್ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.
ಆಲಿಯಾ ಭಟ್ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರಣಬೀರ್ ಕಪೂರ್ ಜೊತೆ ರೊಮ್ಯಾಂಟಿಕ್ ಪೋಸ್ ನೀಡಿರುವುದನ್ನು ಕಾಣಬಹುದು. ಇದು ಅವರ ಮಾಡುವೆ ಸಮಾರಂಭದ ಫೋಟೋ ಎನ್ನಲಾಗಿದೆ.
ಮತ್ತೊಂದು ಫೋಟೋದಲ್ಲಿಯೂ ಆಲಿಯಾ ಮತ್ತು ರಣಬೀರ್ ರೊಮ್ಯಾಂಟಿಕ್ ಪೋಸ್ ನೀಡಿದ್ದಾರೆ. ಇದರಲ್ಲಿ ಆಲಿಯಾ ಹಿಂದೆ ರಣಬೀರ್ ನಿಂತಿರುವುದು ಕಾಣಿಸುತ್ತಿದೆ. ಇವರಿಬ್ಬರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದಾರೆ.
ರಣಬೀರ್ ಜೊತೆಗಿನ ಚಿತ್ರಗಳನ್ನು ಹಂಚಿಕೊಳ್ಳುವಾಗ ಎಮೋಜಿಗಳನ್ನು ಶೀರ್ಷಿಕೆಯಲ್ಲಿ ನೀಡಿದ್ದಾರೆ. ಆಲಿಯಾ ಮತ್ತು ರಣಬೀರ್ ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರು ಮಾತ್ರ ಹಾಜರಿದ್ದರು.
ಆಲಿಯಾ ಭಟ್ ಶೀಘ್ರದಲ್ಲೇ ರಣವೀರ್ ಸಿಂಗ್ ಅವರೊಂದಿಗೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಅಯಾನ್ ಮುಖರ್ಜಿಯವರ ಬಹು ನಿರೀಕ್ಷಿತ ಚಿತ್ರ 'ಬ್ರಹ್ಮಾಸ್ತ್ರ'ದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.