ಇನ್ನು Unknown ನಂಬರ್ ಕಾಲ್ ಗಳು auto ರೆಕಾರ್ಡ್ ಆಗುತ್ತೆ, ಹೇಗೆ ತಿಳಿಯಿರಿ

ಇನ್ನು Unknown ನಂಬರ್ ನಿಂದ ಬಂದ ಕಾಲ್  ಸ್ವಯಂ ರೆಕಾರ್ಡ್ ಆಗುತ್ತೆ. ಗೂಗಲ್ ಫೋನ್ ಆಪ್ ನಲ್ಲಿದೆ ಹೊಸ ಫೀಚರ್

ನವದೆಹಲಿ : ಅನೇಕ ಬಾರಿ, ನಿಮ್ಮ ಮೊಬೈಲ್ ಫೋನ್‌ನಲ್ಲಿ Unknown ನಂಬರ್ ಗಳಿಂದ  ಕರೆಗಳು ಬರುತ್ತಿರುತ್ತವೆ.  ನಾವು ಅಂತಹ ಕರೆಗಳ ಬಗ್ಗೆ ಜಾಗರೂಕರಾಗಿರುತ್ತೇವೆ. ಆದರೆ ಅನೇಕ ಬಾರಿ ಇಂತಹ ಉದ್ದೇಶಪೂರ್ವಕ ಕರೆಗಳನ್ನು ರೆಕಾರ್ಡ್ (Call Recording) ಮಾಡುವುದು ಅಗತ್ಯವಾಗಿರುತ್ತದೆ. ಇತ್ತೀಚೆಗೆ, ಗೂಗಲ್ ಫೋನ್ ಅಪ್ಲಿಕೇಶನ್‌ನಲ್ಲಿ (Google phone app) ಈ ಬಗ್ಗೆ ವಿಶೇಷ ಪೀಚರ್ ಅಳವಡಿಸಲಾಗಿದೆ.  ಇದರಿಂದ  ಈ ಕೆಲಸವನ್ನು ಬಹಳ ಸುಲಭವಾಗಿ ಮಾಡಬಹುದು. ಅದನ್ನು  ಅಕ್ಟಿವೇಟ್ ಮಾಡುವುದು ಹೇಗೆ ಅನ್ನೋದು ತಿಳಿದುಕೊಳ್ಳೋಣ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಗೂಗಲ್ ಫೋನ್ ಆಪ್ (Google Phone App) ತನ್ನ ಹೊಸ  ಅಪ್ ಡೇಟ್ ನಲ್ಲಿ ಇಂತಹ ಕಾಲ್ ಗಳನ್ನು ರೆಕಾರ್ಡ್ ಮಾಡುವ ಪೀಚರ್ ಅಳವಡಿಸಿದೆ.   

2 /5

ಬಹುತೇಕ  ಅಂಡ್ರಾಯಿಡ್ ಫೋನ್ ಗಳಲ್ಲಿ ಕಾಲ್ ರೆಕಾಡಿಂಗ್ ಫೀಚರ್ ಇರುವುದಿಲ್ಲ. ಕಾಲ್ ರೆಕಾರ್ಡಿಂಗ್ ಮಾಡಬೇಕಾದರೆ, ಯಾವುದಾದರೂ ಥರ್ಡ್ ಪಾರ್ಟಿ ಆಪ್ ಡೌನ್ ಲೋಡ್ ಮಾಡಬೇಕಾಗುತ್ತದೆ. 

3 /5

ವರದಿಗಳ ಪ್ರಕಾರ, ಸ್ಟಾಕ್ ಆಂಡ್ರಾಯ್ಡ್ ಫೋನ್ ಅಥವಾ ಗೂಗಲ್ ಪಿಕ್ಸೆಲ್ ನಲ್ಲಿ ಮೊದಲಿನಿಂದಲೂ ಕಾಲ್ ರೆಕಾರ್ಡಿಂಗ್ ಫೀಚರ್  ಇದೆ.

4 /5

ಮೊದಲು Google Phone App ತೆರೆಯಿರಿ. ಈಗ ಇಲ್ಲಿ ಮೆನು ಬಟನ್ ಕ್ಲಿಕ್ ಮಾಡಿ. ಇಲ್ಲಿ ಕಾಲ್ ರೆಕಾರ್ಡಿಂಗ್ ಆಯ್ಕೆಯನ್ನು ನೋಡಬಹುದು. ಅದನ್ನು ಕ್ಲಿಕ್ ಮಾಡಿ. ಈಗ numbers not in your contacts ಮೇಲೆ ಟ್ಯಾಬ್ ಮಾಡಿ. ನಂತರ Always Record  ಮೇಲೆ ಕ್ಲಿಕ್ ಮಾಡಿ.

5 /5

ನಿಮ್ಮ ಮೊಬೈಲ್‌ನಲ್ಲಿ Unknown ಸಂಖ್ಯೆಯಿಂದ ಕರೆ ಬಂದ ಕೂಡಲೇ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ. ಇದಕ್ಕಾಗಿ, ನಿಮ್ಮ ಮೊಬೈಲ್‌ನಲ್ಲಿ ನೋಟಿಫಿಕೇಶನ್ ಕೂಡಾ ಬರುತ್ತದೆ.  ಕರೆ ಮಾಡುವವರಿಗೂ ಇಂಥಹದ್ದೇ ನೋಟಿಫಿಕೇಶನ್ ಸಿಗುತ್ತದೆ.