New Viruses In China: ಚೀನಾದಲ್ಲಿ ದೊರೆತೆ ವಿಧ್ವಂಸಕ ವೈರಸ್, ಹಿಮದಲ್ಲಿ ಹುದುಗಿವೆ ಈ ಅಪಾಯಕಾರಿ ವೈರಸ್

New Viruses In China: ಚೀನಾದ (China) ವುಹಾನ್‌ (Wuhan)ನಿಂದ ಹುಟ್ಟಿದ ಕರೋನವೈರಸ್‌ ವಿರುದ್ಧ ಪ್ರಸ್ತುತ ಇಡೀ ಜಗತ್ತೇ ಹೋರಾಡುತ್ತಿದೆ. ಇದುವರೆಗೆ ಕರೋನಾ (Coronavirus) ಲಕ್ಷಾಂತರ ಜನರ ಪ್ರಾಣವನ್ನು ತೆಗೆದುಕೊಂಡಿದೆ ಮತ್ತು ಇನ್ನೂ ಹಾನಿಯನ್ನುಂಟು ಮಾಡುತ್ತಿದೆ.

New Viruses In China: ಚೀನಾದ (China) ವುಹಾನ್‌ (Wuhan)ನಿಂದ ಹುಟ್ಟಿದ ಕರೋನವೈರಸ್‌ ವಿರುದ್ಧ ಪ್ರಸ್ತುತ ಇಡೀ ಜಗತ್ತೇ ಹೋರಾಡುತ್ತಿದೆ. ಇದುವರೆಗೆ ಕರೋನಾ (Coronavirus) ಲಕ್ಷಾಂತರ ಜನರ ಪ್ರಾಣವನ್ನು ತೆಗೆದುಕೊಂಡಿದೆ ಮತ್ತು ಇನ್ನೂ ಹಾನಿಯನ್ನುಂಟು ಮಾಡುತ್ತಿದೆ. ಏತನ್ಮಧ್ಯೆ, ವೈರಸ್ ಬಗೆಗಿನ ಮತ್ತೊಂದು ವರದಿ ಸಾಕಷ್ಟು ಕಳವಳಕಾರಿಯಾಗಿದೆ.. 15,000 ವರ್ಷಗಳಷ್ಟು ಹಳೆ ವೈರಸ್ ಗಳು ಮಂಜುಗಡ್ಡೆಯ (Glecier) ಕೆಳಗೆ ಹೂತಿವೆ ಎಂದು ವರದಿ ಹೇಳುತ್ತದೆ. ವೈರಸ್ ನ ಈ ಹಳೆ ರೂಪಾಂತರಿಗಳು ಇದೀಗ ಹೊರಬರಲು ಪ್ರಯತ್ನಿಸುತ್ತಿವೆ ಎಂದು ವರದಿ ಹೇಳಿದೆ.

 

ಇದನ್ನೂ ಓದಿ- Coronavirus Origin Investigation: ಕೊರೋನಾದ ಉತ್ಪತ್ತಿಯ ಕುರಿತಾದ ತನಿಖೆಯಲ್ಲಿ WHOಗೆ ಸಹಕರಿಸುವಂತೆ ಚೀನಾಗೆ ಸೂಚಿಸಿದ UN

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. 15 ಸಾವಿರ ವರ್ಷಗಳಷ್ಟು ಹಳೆ ವೈರಸ್ ಗಳು - ಇತ್ತೀಚೆಗಷ್ಟೇ Monkey B Virus(BV) ನಿಂದ ಸಾವನ್ನಪ್ಪಿದ ಮೊದಲ ಪ್ರಕರಣ ಚೀನಾದಲ್ಲಿ ವರದಿಯಾಗಿದೆ, ಈ ಮಧ್ಯೆ ಮೈಕ್ರೋಬೈಮ್ ಜರ್ನಲ್‌ನಲ್ಲಿ (Microbiome Journal) ಪ್ರಕಟವಾದ ಅಧ್ಯಯನವು ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ. ಅಧ್ಯಯನದ ಪ್ರಕಾರ, ಚೀನಾದ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ 15 ಸಾವಿರ ವರ್ಷಗಳಷ್ಟು ಹಳೆಯದಾದ ಮಂಜುಗಡ್ಡೆಯ ಮಾದರಿಗಳಲ್ಲಿ ವೈರಸ್‌ಗಳು ಕಂಡುಬಂದಿವೆ. ಸಮಸ್ಯೆಯೆಂದರೆ ವಿಜ್ಞಾನಿಗಳು ಸಹ ಈ ವೈರಸ್‌ಗಳ ಬಗ್ಗೆ ಸಂಪೂರ್ಣವಾಗಿ ಮರೆತುಹೋಗಿದ್ದಾರೆ.

2 /5

2. ಸಾವಿರಾರು ವರ್ಷಗಳ ಮೊದಲು ಭೂಮಿಯ ಮೇಲೆ ಸಕ್ರೀಯವಾಗಿದ್ದವು ಈ ವೈರಸ್ ಗಳು - ಈ ವೈರಸ್‌ಗಳು ಇಷ್ಟು ವರ್ಷಗಳ ಬಳಿಕ ಇದೆ ಮೊದಲ ಬಾರಿಗೆ ಕಾಣಿಸಿಕೊಂಡ ಕಾರಣ ವೈದ್ಯಕೀಯ ವಿಜ್ಞಾನವು ಅದರ ಬಗ್ಗೆ ಸಂಪೂರ್ಣವಾಗಿ ಅಜ್ಞಾನವಾಗಿದೆ. ಸಾವಿರಾರು ವರ್ಷಗಳ ಹಿಂದೆ ಈ ವೈರಸ್‌ಗಳು ಭೂಮಿಯ ಮೇಲೆ ಸಕ್ರಿಯವಾಗಿದ್ದವು, ನಂತರ ಅವು ಮಂಜುಗಡ್ಡೆಯಲ್ಲಿ ಹೆಪ್ಪುಗಟ್ಟಿದವು ಎಂದು ವರದಿಯಲ್ಲಿ ಹೇಳಲಾಗಿದೆ.

3 /5

3. ಹಲವು ವೈರಸ್ ಗಳು ಇನ್ನೂ ಜೀವಂತವಾಗಿವೆ - ಸಾವಿರಾರು ವರ್ಷಗಳ ನಂತರವೂ ಹಲವು ವೈರಸ್‌ಗಳು ಇನ್ನೂ ಜೀವಂತವಾಗಿವೆ ಎಂದು ವರದಿ ಹೇಳಿದ್ದು, ಇದುವರೆಗೆ ಪತ್ತೆಯಾದ ಎಲ್ಲಾ ವೈರಸ್‌ಗಳಿಗಿಂತ ಇವು ಸಂಪೂರ್ಣವಾಗಿ ಭಿನ್ನವಾಗಿವೆ ಎನ್ನಲಾಗಿದೆ. ಹೀಗಾಗಿ ಇದುವರೆಗೆ ನಡೆಸಲಾಗಿರುವ ಸಂಶೋಧನೆಗಳು ಈ ವೈರಸ್ ಅನ್ನು ತಡೆಯಲು ಎಷ್ಟು ಸಾಧ್ಯವಾಗುತ್ತವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಆದರೆ, ವೈರಸ್ ಪರೀಕ್ಷಿಸಲು ವಿಜ್ಞಾನಿಗಳು ಹೊಸ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

4 /5

4. ಚೀನಾದ ಪಶ್ಚಿಮ ಗ್ಲೆಶಿಯರ್ ಗಳ ಅಧ್ಯಯನ ಇನ್ನೂ ಬಾಕಿ ಇದೆ - ಹಿಮದ ಈ ಗ್ಲೆಶಿಯರ್ ಗಳು  ಕಾಲಾನಂತರದಲ್ಲಿ ಕ್ರಮೇಣ ರೂಪುಗೊಳ್ಳುತ್ತವೆ ಮತ್ತು ಅವುಗಳಲ್ಲಿ ಗಾಳಿ ಮತ್ತು ಧೂಳಿನ ಜೊತೆಗೆ ವೈರಸ್‌ಗಳು ಕೂಡ ಸಂಗ್ರಹವಾಗುತ್ತವೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಬ್ರಿಡ್ಜ್ ಪೋಲಾರ್ ಮತ್ತು ಹವಾಮಾನ ಸಂಶೋಧನಾ ಕೇಂದ್ರದ ಸಂಶೋಧನೆಯ ಪ್ರಮುಖ ಲೇಖಕ ಮತ್ತು ಸಂಶೋಧಕ ಝಿ-ಪಿಂಗ್-ಝೋoಗ್ ಅವರ ಪ್ರಕಾರ ಚೀನಾದ ಪಶ್ಚಿಮ ಗ್ಲೆಶಿಯರ್ ಗಳ ಅಧ್ಯಯನ ಇನ್ನೂ ಮಾಡಲಾಗಿಲ್ಲ ಎಂದಿದ್ದಾರೆ.

5 /5

5. ಹಿಮದಲ್ಲಿ ಮಂಜುಗಟ್ಟಿವೆ 33 ವೈರಸ್ ಗಳು - ಮಂಜುಗಡ್ಡೆಯಲ್ಲಿ ಹೆಪ್ಪುಗಟ್ಟಿದ 33 ವೈರಸ್‌ಗಳ ರೂಪಾಂತರಿಗಳನ್ನೂ ಸಂಶೋಧಕರು ಕಂಡುಹಿಡಿದಿದ್ದಾರೆ, ಅದರಲ್ಲಿ ನಾಲ್ಕು ವೈರಸ್‌ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಉಳಿದ 28 ವೈರಸ್ಗಳು ಇದೆ ಮೊದಲ ಬಾರಿಗೆ ಪತ್ತೆಯಾಗಿದ್ದು, ಅವುಗಳ ಕುರಿತು ಈ ಹಿಂದೆ ಎಂದಿಗೂ ವರದಿಯಾಗಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.