National Youth Day 2024 : ಪ್ರತಿ ವರ್ಷ ಜನವರಿ 12 ರಂದು ಸ್ವಾಮಿ ವಿವೇಕಾನಂದ ಜಯಂತಿಯಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು ಯುವಕರ ಮೇಲೆ ಗಾಢವಾದ ಪ್ರಭಾವ ಬೀರಿವೆ. ಅಷ್ಟೇ ಅಲ್ಲ, ಅವರಿಗೆ ಸ್ಫೂರ್ತಿ ನೀಡುತ್ತಿವೆ. ಈ ವಿಶೇಷ ದಿನದಂದು, ಈ ವಿಶೇಷ ಸ್ಪೂರ್ತಿದಾಯಕ ಸಿನಿಮಾಗಳನ್ನು ಮರೆಯದೇ ನೋಡಿ..
Inspiring movies 2024 : ರಾಷ್ಟ್ರೀಯ ಯುವ ದಿನದಂದು ನೀವು ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದರೆ, ಖಂಡಿತವಾಗಿಯೂ ನೀವು ಈ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಒಮ್ಮೆ ನೋಡಲೇಬೇಕು. ಬಹುಶಃ ಅವುಗಳನ್ನು ನೋಡುವ ಮೂಲಕ ನೀವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಉತ್ತಮ ಸ್ಫೂರ್ತಿಯನ್ನು ಪಡೆಯುತ್ತೀರಿ.
12 ಫೇಲ್ (12th fail) : ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ ಅಭಿನಯದ '12ನೇ ಫೇಲ್' ಚಿತ್ರವನ್ನು ನೀವು ನೋಡಲೇಬೇಕು. ಈ ಚಿತ್ರವು ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ನೈಜ ಕಥೆಯನ್ನು ಆಧರಿಸಿದೆ. ಡಿಸ್ನಿ ಪ್ಲಸ್ ಹಾಟ್ ಸ್ಟರ್ ನಲ್ಲಿ ಈ ಸಿನಿಮಾ ಲಭ್ಯವಿದೆ.
ಚಿಚೋರೆ (Chhichhore) : ದಿವಂಗತ ನಟ ಸುಶಾಂತ್ ಸಿಂಹ ರಾಜಪೂತ್ ಮತ್ತು ಶ್ರದ್ಧಾ ಕಪೂರ್ ಸ್ಟಾರ್ ನಟನೆಯ ಈ ಸಿನಿಮಾ ಡಿಜ್ನಿ ಪ್ಲಸ್‌ನಲ್ಲಿ ಲಭ್ಯ ವಿದೆ.
ತ್ರಿ-ಈಡಿಯಟ್ಸ್ (3-idiots) : ಬಹುತೇಕ ಜನರು ಈ ಸಿನಿಮಾವನ್ನು ನೋಡಿರಬೇಕು, ಯಾರು ನೋಡಿಲ್ಲ ತಪ್ಪದೆ ನೋಡಿ.. ಹಾಸ್ಯದ ಜೊತೆಗೆ ಗುರಿ ತಲುಪುವ ಮಾರ್ಗವನ್ನು ತಿಳಿಸಿ ಹೇಳುತ್ತದೆ. ಯೂಟ್ಯೂಬ್‌ನಲ್ಲಿ ಲಭ್ಯವಿದೆ.
ಧಕ-ಧಕ (Dhak Dhak) : ಈ ಸಿನಿಮಾವನ್ನು ನೀವು ಮಿಸ್ ಮಾಡ್ಬೇಡಿ, ನಿಮ್ಮ ಕನಸ್ಸನ್ನು ನನಸು ಮಾಡಲು ಈ ಚಿತ್ರ ಪ್ರೇರಣೆ ನೀಡುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.
ಪಂಚಾಯತ (Panchayat) : ಪ್ರೈಮ್ ವೀಡಿಯೋ ದಲ್ಲಿ ಈ ಸಿನಿಮಾ ಲಭ್ಯವಿದೆ. ವೆಬ್ ಸೀರೀಸ್ 'ಪಂಚಾಯತ್' ಹಳ್ಳಿಯಲ್ಲಿ ನಡೆಯುವ ಘಟನಾವಳಿಗಳನ್ನು ಆಧರಿಸಿದೆ. ಇದು ನಿಮ್ಮನ್ನು ಜಾಗೃತಗೊಳಿಸುತ್ತದೆ.
ಎಸ್ಪಿರೆಂಟ್ಸ್ (Aspirants) : ನಿಮ್ಮ ಕನಸನ್ನು ನನಸು ಮಾಡಿಕೊಳ್ಳುವ ಗುರಿ ನಿಮ್ಮಲ್ಲಿ ಇದ್ರೆ ಈ ಸಿನಿಮಾ ನಿಮಗೆ ಸ್ಪೂರ್ತಿ ನೀಡುತ್ತದೆ. ಈ ವೆಬ್ ಸೀರಿಸ್, ಯುಪಿಎಸ್ ಪಾಸ್ ಮಾಡ್ಬೇಕು ಅಂತ ಗುರಿಯಿಟ್ಟುಕೊಂಡಿರುವ ಯುವಕರಿಗೆ ಮಾದರಿಯಾಗಿದೆ. ಪ್ರೈಮ್ ವೀಡಿಯೋ ಸಿನಿಮಾ ಲಭ್ಯವಿದೆ.
ಕೋಟಾ ಫ್ಯಾಕ್ಟರಿ (Kota factory) : ಟಿವಿಎಫ್ ನಿರ್ಮಾಣದ ಈ ವೆಬ್ ಸೀರೀಸ್ ಶಿಕ್ಷಣದ ಬಗ್ಗೆ ಜಾಗೃತಿ ಮತ್ತು ಜೀವನದಲ್ಲಿ ಸ್ಪೂರ್ತಿ ನೀಡುತ್ತದೆ. ನೀವು ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.