Name Astrology: ಈ ಅಕ್ಷರದಿಂದ ಹೆಸರು ಆರಂಭವಾಗುವವರು ವಿಶೇಷ ವ್ಯಕ್ತಿತ್ವ ಹೊಂದಿರುತ್ತಾರೆ

ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಹೆಸರು ಕೂಡಾ ಮುಖ್ಯವಾಗಿರುತ್ತದೆ. ಇದರಲ್ಲಿ ಹೆಸರಿನ ಮೊದಲ ಅಕ್ಷರದಿಂದಲೇ ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು. ಎ, ಕೆ, ಟಿ, ಪಿ, ಎಸ್, ಆರ್, ವಿ ಮತ್ತು ವೈ ಅಕ್ಷರಗಳೊಂದಿಗೆ ಹೆಸರು ಪ್ರಾರಂಭವಾಗುವ ಜನರ ಗುಣಲಕ್ಷಣಗಳ ಬಗ್ಗೆ  ಇಲ್ಲಿದೆ ಮಾಹಿತಿ. 

Name Astrology: ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಹೆಸರು ಕೂಡಾ ಮುಖ್ಯವಾಗಿರುತ್ತದೆ. ಇದರಲ್ಲಿ ಹೆಸರಿನ ಮೊದಲ ಅಕ್ಷರದಿಂದಲೇ ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು. ಎ, ಕೆ, ಟಿ, ಪಿ, ಎಸ್, ಆರ್, ವಿ ಮತ್ತು ವೈ ಅಕ್ಷರಗಳೊಂದಿಗೆ ಹೆಸರು ಪ್ರಾರಂಭವಾಗುವ ಜನರ ಗುಣಲಕ್ಷಣಗಳ ಬಗ್ಗೆ  ಇಲ್ಲಿದೆ ಮಾಹಿತಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

Y ಯಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಅಹಂಕಾರಿಗಳಾಗಿರುತ್ತಾರೆ. ಯಶಸ್ಸನ್ನು ಪಡೆಯಲು, ಏನು ಮಾಡಲು ಸಾಧ್ಯವೋ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ತಮ್ಮ ಕೆಲಸದಲ್ಲಿ  ಯಶಸ್ವಿಯಾದ ನಂತರವೇ ನಿಟ್ಟುಸಿರು ಬಿಡುತ್ತಾರೆ.  ಪ್ರೀತಿಯ ವಿಷಯದಲ್ಲಿ, ಇಲ್ಲ-ಇಲ್ಲ ಎನ್ನುತ್ತಲೇ ಮುಂದುವರಿಯುತ್ತಾರೆ.   

2 /8

V ಯಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ತಮಾಷೆಯ ಸ್ವಭಾವದವರಾಗಿರುತ್ತಾರೆ. ಈ ಜನರು ತುಂಬಾ ರೋಮ್ಯಾಂಟಿಕ್ ಮತ್ತು ತಮ್ಮ ಸಂಗಾತಿಯ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರು ಸ್ವಲ್ಪ ಸೋಮಾರಿಗಳು ಕೂಡಾ ಆಗಿರುತ್ತಾರೆ. ತಮ್ಮ ಮನಸ್ಸಿನಲ್ಲಿರುಅವ ಭಾವನೆಯನ್ನು ಮುಚ್ಚಿಡುವುದರಲ್ಲಿ ನಿಸ್ಸೀಮರು. 

3 /8

S ನಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಶ್ರಮಶೀಲರು ಮತ್ತು ಬುದ್ಧಿವಂತರು. ಅವರಲ್ಲಿ ಕಲ್ಮಶವಿರುವುದಿಲ್ಲ. ಜನರಿಗೆ ಸಹಾಯ ಮಾಡುತ್ತಿರುತ್ತಾರೆ. ಆದರೆ ಅವರ ಸಂಭಾಷಣೆಯ ಶೈಲಿಯು ಅವರ ಇಮೇಜ್ ಅನ್ನು ಹಾಳುಮಾಡುತ್ತದೆ. ಅವರು ತುಂಬಾ ರೋಮ್ಯಾಂಟಿಕ್ ಮತ್ತು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. 

4 /8

 ಆರ್ ಅಕ್ಷರದಿಂದ  ಹೆಸರು ಆರಂಭವಾಗುವ ಜನರು ಸ್ವಲ್ಪ ಅಂತರ್ಮುಖಿಯಾಗಿರುತ್ತಾರೆ. ಅವರಿಗೆ ಓದು ಬರಹದಲ್ಲಿ ಅಷ್ಟಾಗಿ ಆಸಕ್ತಿ ಇರುವುದಿಲ್ಲ. ಆದರೆ, ಅವರ ಸ್ವಭಾವದಿಂದಾಗಿ ಅವರನ್ನು ಜನ ಬಹಳವಾಗಿ ಇಷ್ಟಪಡುತ್ತಾರೆ. ಈ ಹೆಸರಿನವರು ತಮ್ಮ ಸಂಗಾತಿಯ ಸಂತೋಷಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ.

5 /8

P ಯಿಂದ ಹೆಸರು ಪ್ರಾರಂಭವಾಗುವ ಜನರು ಸತ್ಯವಂತರು ಮತ್ತು ಪ್ರಾಮಾಣಿಕರು. ಅವರು ತುಂಬಾ ಕಲಾತ್ಮಕರು ಮತ್ತು ಯಾವಾಗಲೂ ನಗುತ್ತಾ ಇರುತ್ತಾರೆ. ತಮ್ಮ ಸಂಗಾತಿಯನ್ನು ಸಂತೋಷವಾಗಿರಿಸುತ್ತಾರೆ.

6 /8

T ಯಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಹಠಮಾರಿಗಳಾಗಿರುತ್ತಾರೆ. ಅವರು ಯಾವಾಗಲೂ ಗಂಭೀರವಾಗಿ ಕಾಣುತ್ತಾರೆ ಮತ್ತು ವಿರಳವಾಗಿ ನಗುತ್ತಾರೆ. ತಮ್ಮ ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಯಾವಾಗಲೂ ಉತ್ತಮ ವಿಷಯಗಳತ್ತ ಆಕರ್ಷಿತರಾಗುತ್ತಾರೆ. ತಮ್ಮ ಸಂಗಾತಿಯನ್ನು ಮನಃಪೂರ್ವಕವಾಗಿ ಪ್ರೀತಿಸುತ್ತಾರೆ ಮತ್ತು ತಮ್ಮ ಸಂಗಾತಿಯಿಂದ ಅದೇ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತಾರೆ. 

7 /8

K ಯಿಂದ ಹೆಸರು ಪ್ರಾರಂಭವಾಗುವ ಜನರು ಹರ್ಷಚಿತ್ತದಿಂದ ಇರು ತ್ತಾರೆ. ತಮ್ಮ ಜೀವನದಲ್ಲಿ ಬಹಳಷ್ಟು ಸಂತೋಷವನ್ನು ಪಡೆಯುತ್ತಾರೆ. ಅವರ ವ್ಯಕ್ತಿತ್ವದಲ್ಲಿ ಅದ್ಭುತವಾದ ಆಕರ್ಷಣೆ ಇರುತ್ತದೆ. ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ. ಅವರು ಸಾಕಷ್ಟು ವಿಶ್ವಾಸಾರ್ಹರಾಗಿರುತ್ತಾರೆ.  

8 /8

A ಯಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಶ್ರಮಶೀಲರು ಮತ್ತು ತಾಳ್ಮೆಯಿಂದಿರುತ್ತಾರೆ. ಕಹಿ ಸತ್ಯವಾದರೂ ನೇರವಾಗಿ ಮಾತನಾಡಲು ಇಷ್ಟಪಡುತ್ತಾರೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ.