ಇದು ವಿಶ್ವದ ಅತ್ಯಂತ ಶಕ್ತಿಶಾಲಿ ತರಕಾರಿ..! ಮಳೆಗಾಲದಲ್ಲಿ 90 ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ

Kantola Health benefits : ಮಾಡ ಹಾಗಲಕಾಯಿ ಔಷಧೀಯ ಗುಣಗಳುಲ್ಲ ತರಕಾರಿ. ಇದು 2 ರಿಂದ 3 ಸೆಂ.ಮೀ ಗಾತ್ರದ ಬಳ್ಳಿಗಳ ಮೇಲೆ ಬೆಳೆಯುತ್ತದೆ. ಹಸಿರು ಬಣ್ಣದ ಈ ತರಕಾರಿ ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾಗಲಕಾಯಿಯಂತೆಯೇ ಹೊರಭಾಗವನ್ನು ಸುಲಿದು ಇದನ್ನು ಅಡುಗೆ ಮಾಡಿ ಸೇವಿಸುತ್ತಾರೆ.. ಉತ್ತಮ ರುಚಿ, ಆರೋಗ್ಯಕ್ಕೂ ಅತ್ಯುತ್ತಮ. 
 

1 /7

ಮುಂಗಾರು ಆರಂಭವಾಗುತ್ತಿದ್ದಂತೆಯೇ ತಾಜಾ ಹಸಿರು ತರಕಾರಿಗಳು ಮಾರುಕಟ್ಟೆಗೆ ಬರಲಾರಂಭಿಸುತ್ತವೆ. ಈ ಸೀಸನಲ್ಲಿ ಕಾಣಿಸಿಕೊಳ್ಳುವ ಕೆಲವೇ ಕೆಲವು ತರಕಾರಿಗಳಲ್ಲಿ ಮಾಡ ಹಾಗಲಕಾಯಿಯೂ ಒಂದು. ಈ ತರಕಾರಿ ಹಾಗಲಕಾಯಿ ಜಾತಿಗೆ ಸೇರಿದೆ. ಆದರೆ, ಇದು ಅಷ್ಟೋಂದು ಕಹಿಯಾಗಿಲ್ಲ. ಇದೊಂದು ಔಷಧೀಯ ತರಕಾರಿ. ಇದು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ.. ಹಾಗಾದರೆ ಈ ತರಕಾರಿ ನಿಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳನ್ನು ನೀಡುತ್ತವೆ ಎಂಬುದನ್ನು ತಿಳಿಯಿರಿ.   

2 /7

ಆಯುರ್ವೇದದಲ್ಲಿ, ಈ ತರಕಾರಿಯನ್ನು ಅತ್ಯಂತ ಶಕ್ತಿಶಾಲಿ ತರಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ ಎಂದು ತಜ್ಞರು ಹೇಳುತ್ತಾರೆ. ಭಾರತೀಯ ತರಕಾರಿಗಳಲ್ಲಿ ಬಳಸುವ ಎಲ್ಲಾ ತರಕಾರಿಗಳಲ್ಲಿ, ಮಾಡ ಹಾಗಲಕಾಯಿ ಅತ್ಯಧಿಕ ಪ್ರೋಟೀನ್ ಅಂಶವನ್ನು ಹೊಂದಿದೆ. ಈ ತರಕಾರಿಗಳು ಮಾಂಸಕ್ಕಿಂತ 50 ಪ್ರತಿಶತ ಹೆಚ್ಚು ಪ್ರೋಟೀನ್ ಅನ್ನು ಹೊಂದಿರುತ್ತವೆ.  

3 /7

ಮಾಡ ಹಾಗಲಕಾಯಿ ಕಂಡುಬರುವ ಪೋಷಕಾಂಶಗಳು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು, ಫೈಬರ್, ಅನೇಕ ಖನಿಜಗಳು ಮಾಡ ಹಾಗಲಕಾಯಿ ಕಂಡುಬರುತ್ತವೆ. ಜೊತೆಗೆ, ಈ ತರಕಾರಿಗಳು ಆಸ್ಕೋರ್ಬಿಕ್ ಆಮ್ಲ, ಕ್ಯಾರೋಟಿನ್, ಥಯಾಮಿನ್, ರೈಬೋಫ್ಲಾವಿನ್ ಮತ್ತು ನಿಯಾಸಿನ್‌ನಂತಹ ಸಣ್ಣ ಪ್ರಮಾಣದ ಅಗತ್ಯ ಜೀವಸತ್ವಗಳನ್ನು ಹೊಂದಿರುತ್ತವೆ.    

4 /7

ಮಾಡ ಹಾಗಲಕಾಯಿ ತಿನ್ನುವುದರಿಂದ ಮೂಳೆಗಳು ಬಲಿಷ್ಠವಾಗುತ್ತವೆ. ಇದು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ನೋವನ್ನು ನಿವಾರಿಸುತ್ತದೆ. ಮೂಳೆ ಸಂಬಂಧಿ ಸಮಸ್ಯೆ ಇರುವವರು ಇದರನ್ನು ಸೇವಿಸಿದರೆ ಉತ್ತಮ.    

5 /7

ಕಂಕೋಡದಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ, ಇದು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುವುದರ ಜೊತೆಗೆ ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ. ಇದರ ಸೇವನೆಯು ಕಣ್ಣಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀವು ಸಹ ಕಣ್ಣುಗಳಲ್ಲಿ ದೌರ್ಬಲ್ಯವನ್ನು ಅನುಭವಿಸುತ್ತಿದ್ದರೆ, ಮಾಡ ಹಾಗಲಕಾಯಿ ತಿನ್ನಿ.  

6 /7

ಮಳೆಗಾಲದಲ್ಲಿ ಯಕೃತ್ತಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಇಂತಹ ಸ್ಥಿತಿಯಲ್ಲಿ ಸಂದರ್ಭದಲ್ಲಿ ಇದನ್ನು ಸೇವಿಸುವುದರಿಂದ ಲಿವರ್ ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಫ್ಲೇವನಾಯ್ಡ್ ಗಳು ಯಕೃತ್ತನ್ನು ನಿರ್ವಿಷಗೊಳಿಸಿ ಆರೋಗ್ಯವಾಗಿರಿಸುತ್ತದೆ. ಈ ತರಕಾರಿ ಸೇವಿಸುವುದರಿಂದ ಯಕೃತ್ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು.  

7 /7

ಆಂಟಿಆಕ್ಸಿಡೆಂಟ್‌ಗಳಾದ ಬೀಟಾ ಕ್ಯಾರೋಟಿನ್, ಆಲ್ಫಾ ಕ್ಯಾರೋಟಿನ್, ಲುಟೀನ್ ಮತ್ತು ಜಿಯಾಕ್ಸಾಂಥಿನ್‌ಗಳು ಮಾಡ ಹಾಗಲಕಾಯಿಯಲ್ಲಿ ಕಂಡುಬರುತ್ತವೆ. ಇವು ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ. ಮಾನ್ಸೂನ್‌ನಲ್ಲಿ ಈ ತರಕಾರಿಯನ್ನು ತಿನ್ನುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಅಲರ್ಜಿ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ತಿನ್ನಿ..