Sreeleela: ಭರಾಟೆ ಬೆಡಗಿ ಶ್ರೀಲೀಲಾ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

ಕಿಸ್, ಭರಾಟೆ ಸಿನಿಮಾಗಳಲ್ಲಿನ ತಮ್ಮ ಅದ್ಭುತ ಅಭಿನಯದಿಂದ ಸಿನಿಪ್ರೇಕ್ಷಕರ ಮನಸ್ಸು ಕದ್ದ ಈ ಬೆಡಗಿಗೆ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯಿದೆ

ಮುದ್ದುಮುಖದ ಚೆಲುವೆ ಶ್ರೀಲೀಲಾ(Sreeleela) ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟಿ. ನಟಿಸಿದ್ದು ಎರಡೇ ಚಿತ್ರವಾದರೂ ಭರ್ಜರಿ ಹವಾ ಸೃಷ್ಟಿಸಿದ್ದಾರೆ. ಕಿಸ್, ಭರಾಟೆ ಸಿನಿಮಾಗಳಲ್ಲಿನ ತಮ್ಮ ಅದ್ಭುತ ಅಭಿನಯದಿಂದ ಸಿನಿಪ್ರೇಕ್ಷಕರ ಮನಸ್ಸು ಕದ್ದ ಈ ಬೆಡಗಿಗೆ ಸದ್ಯ ಸ್ಯಾಂಡಲ್ ವುಡ್(Sandalwood) ನಲ್ಲಿ ಬಹುಬೇಡಿಕೆಯಿದೆ. ನಿರ್ದೇಶಕ ಎ.ಪಿ.ಅರ್ಜುನ್ ಅವರ ‘ಕಿಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀಲೀಲಾ ಸದ್ಯ ಬಜಾರ್ ಸ್ಟಾರ್ ಧನ್ವೀರ್ ಗೌಡ ಜೊತೆ ‘By Two ಲವ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗು ಚಿತ್ರಕ್ಕೂ ಎಂಟ್ರಿ ಕೊಟ್ಟಿರುವ ಶ್ರೀಲೀಲಾ ನಟ ಶ್ರೀಕಾಂತ್ ಅಭಿನಯದ ‘ಪೆಳ್ಳಿ ಸಂದಡಿ’ಯಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ರೆಬೆಲ್ ಸ್ಟಾರ್ ಅಂಬರೀಶ್ ಅವರ ತೋಳಲ್ಲಿ ಕ್ಯೂಟ್ ಕ್ಯೂಟ್ ಶ್ರೀಲೀಲಾ

2 /6

ಮೋಹಕ ಬೆಡಗಿ ಶ್ರೀಲೀಲಾ ಕನ್ನಡ ಚಿತ್ರರಂಗದಲ್ಲಿ ತನ್ನದೇಯಾದ ಹವಾ ಸೃಷ್ಟಿಸಿದ್ದಾರೆ. ಪಡ್ಡೆಹುಡುಗರ ನಿದ್ದೆಗೆಡಿಸಿರುವ ಶ್ರೀಲೀಲಾ ಕಡಿಮೆ ಅವಧಿಯಲ್ಲಿಯೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

3 /6

ನಟಿ ಶ್ರೀಲೀಲಾ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡತ್ ರೊಂದಿಗೆ ನಿಕಟಪೂರ್ವ ಸಂಬಂಧ ಹೊಂದಿದ್ದಾರೆ. ಯಶ್ ಮತ್ತು ರಾಧಿಕಾರಿಗೂ ಅಚ್ಚುಮೆಚ್ಚಾಗಿರುವ ಶ್ರೀಲೀಲಾ ಅವರನ್ನು ಜೀಜು-ಅಕ್ಕಾ ಎಂದೇ ಕರೆಯುತ್ತಾರೆ.

4 /6

ನಟಿ ಶ್ರೀಲೀಲಾ ಸ್ಯಾಂಡಲ್ ವುಡ್ ನ ಬ್ಯುಸಿ ನಟಿಯಾಗಿದ್ದಾರೆ. ಅವರ ಕೈಯಲ್ಲಿಗ ಅನೇಕ ಸಿನಿಮಾ ಆಫರ್ ಗಳಿವೆ. ಕನ್ನಡ ಮಾತ್ರವಲ್ಲದೆ ಟಾಲಿವುಡ್ ನಲ್ಲಿ ಅವರಿಗ ಬ್ಯುಸಿಯಾಗಿದ್ದಾರೆ.

5 /6

ವೈದ್ಯ ವೃತ್ತಿಯಲ್ಲಿ ಮುಂದುವರೆಯಬೇಕೆಂದುಕೊಂಡಿದ್ದ ಶ್ರೀಲೀಲಾರವರಿಗೆ ಸಿನಿಮಾದ ಬಗ್ಗೆ ವಿಶೇಷ ಸೆಳೆತವಿತ್ತು. ಸಿನಿಮಾಗಳಲ್ಲಿ ನಟಿಸಲು ಶ್ರೀಲೀಲಾರವರಿಗೆ ಆರಂಭದಲ್ಲಿ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಬಳಿಕ ಮನೆಯವರನ್ನು ಒಪ್ಪಿಸಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. 

6 /6

ತಮ್ಮ ವಿಶಿಷ್ಟ ನಟನೆಯ ಮೂಲಕ ಶ್ರೀಲೀಲಾ ಕನ್ನಡ ಸಿನಿಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಕಿಸ್, ಭರಾಟೆ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.