Mercury Transit 2022: ಡಿಸೆಂಬರ್ 3ರವರೆಗೆ ಈ ರಾಶಿಯವರಿಗೆ ಕೈತುಂಬಾ ಹಣ ನೀಡಲಿದ್ದಾನೆ ಬುಧ

Mercury Transit 2022: ಗ್ರಹಗಳ ರಾಜಕುಮಾರನಾದ ಬುಧ ಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದು ಡಿಸೆಂಬರ್ 3ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ರಾಶಿಚಕ್ರದ ಜನರು ಈ ಅವಧಿಯಲ್ಲಿ ವಿಶೇಷ ಲಾಭವನ್ನು ಪಡೆಯುತ್ತಾರೆ. 

Mercury Transit 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತವೆ. ಅಂತೆಯೇ, ನವ ಗ್ರಹಗಳಲ್ಲಿ ಯಾವುದೇ ಒಂದು ಗ್ರಹದಲ್ಲಿನ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಇದೀಗ, ಗ್ರಹಗಳ ರಾಜಕುಮಾರನಾದ ಬುಧ ಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದು ಡಿಸೆಂಬರ್ 3ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ರಾಶಿಚಕ್ರದ ಜನರು ಈ ಅವಧಿಯಲ್ಲಿ ವಿಶೇಷ ಲಾಭವನ್ನು ಪಡೆಯುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತವೆ. ಅಂತೆಯೇ, ನವ ಗ್ರಹಗಳಲ್ಲಿ ಯಾವುದೇ ಒಂದು ಗ್ರಹದಲ್ಲಿನ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಇದೀಗ, ಗ್ರಹಗಳ ರಾಜಕುಮಾರನಾದ ಬುಧ ಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದು ಡಿಸೆಂಬರ್ 3ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ರಾಶಿಚಕ್ರದ ಜನರು ಈ ಅವಧಿಯಲ್ಲಿ ವಿಶೇಷ ಲಾಭವನ್ನು ಪಡೆಯುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

2 /5

ವೃಷಭ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ,  ವೃಶ್ಚಿಕ ರಾಶಿಗೆ ಬುಧನ ಪ್ರವೇಶದಿಂದ ಈ ರಾಶಿಯವರಿಗೆ ಒಳ್ಳೆಯ ದಿನಗಳು ಶುರುವಾಗಿವೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಈ ಸಮಯವು ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ಇಷ್ಟೇ ಅಲ್ಲ, ಜೀವನದಲ್ಲಿ ಮುನ್ನಡೆಯಲು ಈ ಸಮಯದಲ್ಲಿ ಹಲವು ಅವಕಾಶಗಳು ದೊರೆಯುತ್ತವೆ. ಅದೇ ಸಮಯದಲ್ಲಿ, ಈ ರಾಶಿಚಕ್ರದ ಸ್ಥಳೀಯರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. 

3 /5

ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಸಂಕ್ರಮಣವು ಈ ರಾಶಿಯ ಸ್ಥಳೀಯರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ಆಸ್ತಿ ಇತ್ಯಾದಿಗಳನ್ನು ಸಹ ಖರೀದಿಸಬಹುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಇಷ್ಟೇ ಅಲ್ಲ ಬುಧ ಸಂಕ್ರಮಣದಿಂದ ಈ ರಾಶಿಯ ಸ್ಥಳೀಯರ ಆರ್ಥಿಕ ಸ್ಥಿತಿಗೆ ಅನುಕೂಲವಾಗಲಿದೆ. 

4 /5

ತುಲಾ ರಾಶಿ: ವೃಶ್ಚಿಕ ರಾಶಿಯಲ್ಲಿ ಬುಧ ಸಂಕ್ರಮಣ ಮಾಡುವುದರಿಂದ ತುಲಾ ರಾಶಿಯವರಿಗೆ ಈ ಸಮಯ ತುಂಬಾ ಲಾಭದಾಯಕ ಎಂದು ಹೇಳಲಾಗುತ್ತದೆ. ಈ ರಾಶಿಚಕ್ರದ ಒಂಬತ್ತು ಮತ್ತು ಹನ್ನೆರಡನೆಯ ಮನೆಯ ಅಧಿಪತಿ ಬುಧ. ಈ ಸಮಯದಲ್ಲಿ, ವಿದೇಶ ಪ್ರವಾಸಕ್ಕೆ ಬಲವಾದ ಅವಕಾಶಗಳಿವೆ. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಈ ಸಮಯವು ಅನುಕೂಲಕರವಾಗಿದೆ. ಕುಟುಂಬ ಸದಸ್ಯರ ನಡುವಿನ ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಮನೆಯ ಸದಸ್ಯರಿಗೆ ಸಂಪೂರ್ಣ ಬೆಂಬಲ ಸಿಗುತ್ತದೆ. 

5 /5

ವೃಶ್ಚಿಕ ರಾಶಿ: ನವೆಂಬರ್ ತಿಂಗಳಿನಲ್ಲಿ ಬುಧವು ಈ ರಾಶಿಯಲ್ಲಿ ಸಾಗಿ ಡಿಸೆಂಬರ್ 3 ರವರೆಗೆ ಇದೇ ರಾಶಿಯಲ್ಲಿ ಇರಲಿದ್ದಾನೆ.  ಈ ಸಮಯದಲ್ಲಿ, ಈ ರಾಶಿಚಕ್ರದ ಜನರು ಬುಧ ಸಂಕ್ರಮಣದಿಂದ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಸಮಯವು  ವೃಶ್ಚಿಕ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರಕ್ಕೆ ತುಂಬಾ ಒಳ್ಳೆಯದು. ವ್ಯಾಪಾರದಲ್ಲಿ ಭಾರೀ ಲಾಭ ಬರಬಹುದು. ಈ ಅವಧಿಯಲ್ಲಿ ಇತರ ಹಲವು ರೀತಿಯ ಲಾಭಗಳ ಸಾಧ್ಯತೆಯಿದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.