Maruti Suzuki Wagon-R Features: ಮಾರುತಿ ಸುಜುಕಿ Wagon-R ಅನ್ನು ಮೊದಲ ಬಾರಿಗೆ 1999ರಲ್ಲಿ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಈ ಕಾರು ಮಾರಾಟವಾಗುತ್ತಿದೆ. ಈ ವಾಹನವನ್ನು Resell ಮಾಡಿದರೂ ಉತ್ತಮ ಬೆಲೆಗೆ ಕೊಂಡುಕೊಳ್ಳುವವರಿದ್ದಾರೆ. ಮಾರುತಿ Wagon-R ಪೆಟ್ರೋನ್‌ನಲ್ಲಿ 23-25KM ಮತ್ತು CNGಯಲ್ಲಿ 33KM ಮೈಲೇಜ್ ನೀಡುತ್ತದೆ.
Maruti Wagon-R: ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಜೆಟ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬಜೆಟ್ ಬೆಲೆ ಕಾರುಗಳ ಪೈಕಿ ಮಾರುತಿ 800, ಮಾರುತಿ Wagon-R ಅಗ್ರಸ್ಥಾನದಲ್ಲಿವೆ. ದೇಶಿಯ ಮಾರುಕಟ್ಟೆಯಲ್ಲಿ ಈ ಕಾರುಗಳು ಬಹಳ ಜನಪ್ರಿಯತೆ ಹೊಂದಿವೆ. 1999ರಲ್ಲಿ ಬಿಡುಗಡೆಯಾಗಿದ್ದ ಮಾರುತಿ ವ್ಯಾಗನ್-ಆರ್‌ಗೆ ಇಂದಿಗೂ ಬೇಡಿಕೆ ಕಡಿಮೆಯಾಗಿಲ್ಲ. 24 ವರ್ಷ ಕಳೆದರೂ ಇಂದಿಗೂ ಮಾರಾಟದಲ್ಲಿ ಇದು ಅಗ್ರಸ್ಥಾನದಲ್ಲಿದೆ. ಕಂಪನಿಯು ಪ್ರತಿತಿಂಗಳು 15,000ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುತ್ತಿದೆ. ಕಡಿಮೆ ಬಜೆಟ್‌ನಲ್ಲಿ ಉತ್ತಮ ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚವೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದು ಮಧ್ಯಮ ವರ್ಗದ ಫೆವರಿಟಿ ಎನ್ನಿಸಿಕೊಂಡಿದ್ದು, ಸಾಮಾನ್ಯರಿಂದ ಹಿಡಿದು ವೈದ್ಯರು ಮತ್ತು ಇಂಜಿನಿಯರ್‌ಗಳು ಸಹ ಇದನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಈ ಕಾರಿನ ಅದ್ಭುತ ವೈಶಿಷ್ಟ್ಯತೆಗಳ ಬಗ್ಗೆ ತಿಳಿದುಕೊಳ್ಳಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಮಾರುತಿ Wagon-R ಕೇವಲ 6-8 ಲಕ್ಷ ರೂ. ಬಜೆಟ್‌ನಲ್ಲಿ ಸಿಗುತ್ತದೆ. ಐವರು ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶ ಹೊಂದಿದೆ. ಇದರ ಜೊತೆಗೆ ಈ ಕಾರಿನಲ್ಲಿ ಲೆಗ್‌ರೂಮ್ & ಹೆಡ್‌ರೂಮ್ ಉತ್ತಮವಾಗಿದೆ. ಬೂಟ್ ಸ್ಪೇಸ್ & ಗ್ರೌಂಡ್ ಕ್ಲಿಯರೆನ್ಸ್ ಸಹ ಸಾಕಷ್ಟು ಉತ್ತಮವಾಗಿದೆ. ಹೀಗಾಗಿ ಇದು ದೀರ್ಘ ಪ್ರಯಾಣಕ್ಕೆ ಉತ್ತಮ ಕಾರಾಗಿದೆ.
ಮಾರುತಿ Wagon-R ಪ್ರಯಾಣಿಕರ ಅನುಕೂಲಕ್ಕೆ ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ. 7 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೋ ಕಂಟ್ರೋಲ್ & ಸ್ಮಾರ್ಟ್‌ಫೋನ್ ನ್ಯಾವಿಗೇಷನ್‌ನಂತಹ ವೈಶಿಷ್ಟ್ಯ ಹೊಂದಿದೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ABS, ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್-ಹೋಲ್ಡ್ ಅಸಿಸ್ಟ್ (AMT ರೂಪಾಂತರ ಮಾತ್ರ) ಇವೆ.
ಕಂಪನಿಯು Wagon-R ಮೂಲ ಮಾದರಿಯಲ್ಲಿ 1.0 ಲೀಟರ್ K-ಸೀರಿಸ್ ಎಂಜಿನ್ ನೀಡುತ್ತದೆ. ಉನ್ನತ ಮಾದರಿಯನ್ನು 1.2 ಲೀಟರ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಈ ಕಾರು 1.0 ಲೀಟರ್ ಎಂಜಿನ್‌ನಲ್ಲಿ CNG ಆಯ್ಕೆಯೊಂದಿಗೆ ಲಭ್ಯವಿದೆ. 1.2 ಲೀಟರಿನ ಪೆಟ್ರೋಲ್ ಎಂಜಿನ್ 88.5 BHP ಪವರ್ ಹಾಗೂ 113 NM ಟಾರ್ಕ್ ಉತ್ಪಾದಿಸುತ್ತದೆ. ಇದರ ಮೈಲೇಜ್ ಕೂಡ ಉತ್ತಮವಾಗಿದ್ದು, ಪೆಟ್ರೋಲ್‌ನಲ್ಲಿ 25KM ಮತ್ತು CNGಯಲ್ಲಿ 35KMವರೆಗೆ ಮೈಲೇಜ್ ನೀಡುತ್ತದೆ. ಮೈಲೇಜ್ ಅಂಕಿಅಂಶಗಳು ARAI ಪ್ರಮಾಣೀಕೃತವಾಗಿವೆ.
Wagon-Rಅನ್ನು LXI, VXI, ZXI ಮತ್ತು ZXI+ ಎಂಬ 4 ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. LXI ಮತ್ತು VXI ಟ್ರಿಮ್‌ಗಳು ಕಾರ್ಖಾನೆಯಲ್ಲಿ ಅಳವಡಿಸಿದ CNG ಕಿಟ್ ಆಯ್ಕೆಯೊಂದಿಗೆ ಬರುತ್ತವೆ. ಮಾರುತಿ Wagon-R ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂನಲ್ಲಿ 5.54 ಲಕ್ಷ ರೂ.ನಿಂದ 7.42 ಲಕ್ಷ ರೂ.ಇದೆ.
ಮಾರುತಿ ಸುಜುಕಿ Wagon-R ಅನ್ನು ಮೊದಲ ಬಾರಿಗೆ 1999ರಲ್ಲಿ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಈ ಕಾರು ಮಾರಾಟವಾಗುತ್ತಿದೆ. ಈ ವಾಹನವನ್ನು Resell ಮಾಡಿದರೂ ಉತ್ತಮ ಬೆಲೆಗೆ ಕೊಂಡುಕೊಳ್ಳುವವರಿದ್ದಾರೆ. ಮಾರುತಿ Wagon-R ಪೆಟ್ರೋನ್‌ನಲ್ಲಿ 23-25KM ಮತ್ತು CNGಯಲ್ಲಿ 33KM ಮೈಲೇಜ್ ನೀಡುತ್ತದೆ.