ಮಾರುತಿ ಸುಜುಕಿಯ ಅಗ್ಗದ ಕಾರು ಅಂದರೆ ಆಲ್ಟೋ. ಆದರೆ, ಇದಕ್ಕಿಂತಲೂ ಅಗ್ಗದ ಕಾರು ಮಾರುಕಟ್ಟೆಗೆ ತರಲು ಹೊರಟಿದೆ ಕಂಪನಿ.
ನವದೆಹಲಿ : Maruti Cheapest Car : ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಅಗ್ಗದ ಕಾರನ್ನು ಮಾರುಕಟ್ಟೆಗೆ ತರಲು ಹೊರಟಿದೆ. ಈ ಕಾರಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮಾರುತಿ ಆಲ್ಟೊಗಿಂತಲೂ ಕಡಿಮೆ ಬೆಲೆಗೆ ಈ ಕಾರು ಸಿಗಲಿದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮಾರುತಿ ಸುಜುಕಿಯ ಅಗ್ಗದ ಕಾರು ಅಂದರೆ ಆಲ್ಟೋ. ಆದರೆ, ಇದಕ್ಕಿಂತಲೂ ಅಗ್ಗದ ಕಾರು ಮಾರುಕಟ್ಟೆಗೆ ತರಲು ಹೊರಟಿದೆ ಕಂಪನಿ. ಈ ಹೊಸ ಕಾರಿನ ಬೆಲೆ ಸುಮಾರು 4 ಲಕ್ಷ ಎನ್ನಲಾಗಿದೆ.
ಇದು ಆಲ್ಟೊ ಕಾರಿನ ರಿಪ್ಲೇಸ್ ಮೆಂಟ್ ಅಥವಾ ಆಲ್ಟೋದ ಹೊಸ ಆವೃತಿಯಾಗಿರಲಿದೆ ಎನ್ನಲಾಗಿದೆ. ಹೊಸ ಲುಕ್ ನೊಂದಿಗೆ ಈ ಕಾರು ರಸ್ತೆಗಿಳಿಯಲಿದೆ.
ಮಾರುತಿಯ ಈ ಹೊಸ ಕಾರು ಮಾರುತಿ ಆಲ್ಟೊಗಿಂತ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಮಾರುತಿ ಈ ಕಾರಿನ ತಯಾರಿಯಲ್ಲಿ ನಿರತರಾಗಿದ್ದು, ಶೀಘ್ರದಲ್ಲೇ ಕಾರಿನ ಬಿಡುಗಡೆಯ ಬಗ್ಗೆ ಪ್ರಕಟಿಸಬಹುದು. ಮಾರುತಿ ಆಲ್ಟೊದ ಟಾಪ್ ಮಾಡೆಲ್ 4.16 ಲಕ್ಷ ರೂಗಳಿಗೆ ಲಭ್ಯವಿದೆ.
ಮಾರುತಿ ತನ್ನ ವಾಹನಗಳನ್ನು ಹರ್ಟೆಕ್ಟ್ ಪ್ಲಾಟ್‌ಫಾರ್ಮ್‌ಗೆ ವರ್ಗಾಯಿಸುತ್ತಿರುವುದರಿಂದ ಮಾರುತಿ ಸುಜುಕಿ ಈ ಹೊಸ ಕಾರನ್ನು ಆಲ್ಟೊದ ಹೊಸ ಆವೃತ್ತಿಯಾಗಿ ಬಿಡುಗಡೆ ಮಾಡಬಹುದು ಎನ್ನಲಾಗಿದೆ.
ಈ ಕಾರು 1000 ಸಿಸಿ ಎಂಜಿನ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ ಟಾಪ್ ವೇರಿಯೆಂಟ್ ಪವರ್ ವಿಂಡೋಸ್‌ನಂತಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಅಲ್ಲದೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಕಾರಿನಲ್ಲಿ ನೀಡಬಹುದು. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಂಪರ್ಕವನ್ನು ಈ ಹೊಸ ಕಾರಿನಲ್ಲಿ ಕಾಣಬಹುದು.