Mughal Harem dark secret: ನಾವು ಪಠ್ಯ ಪುಸ್ತಕಗಳಲ್ಲಿ ಮೊಘಲ್ ಸಾಮ್ರಾಜ್ಯದ ಆಳ್ವಿಕೆ ಬಗ್ಗೆ ಓದಿರುತ್ತೇವೆ. ಆದರೆ ಎಂದಾದರೂ ಅಲ್ಲಿ ನಡೆಯುತ್ತಿದ್ದ ಮಹಿಳಾ ದೌರ್ಜನ್ಯದ ಬಗ್ಗೆ ಕೇಳಿದ್ದೀರಾ? ಈ ಮೊಘಲ್ ಅರಸರು ಹೆಣ್ಣುಮಕ್ಕಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದರು ಎಂಬೆಲ್ಲಾ ವಿಚಾರದ ಬಗ್ಗೆ ಈ ಹಿಂದೆ ಮಾಹಿತಿಯನ್ನು ನೀಡಿದ್ದೆವು.
ಇತಿಹಾಸ ಪ್ರೇಮಿಗಳು ಮೊಘಲ್ ಅವಧಿಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಹೀಗಾಗಿ ಇಂದು ನಾವು ನಿಮಗೆ ಮೊಘಲ್ ಹರಾಮ್ ಬಗ್ಗೆ ಆಸಕ್ತಿದಾಯಕ ವಿಷಯವನ್ನು ಹೇಳಲಿದ್ದೇವೆ. ಮೊಘಲ್ ಚಕ್ರವರ್ತಿಗಳು ಕಾಮೋತ್ತೇಜಕವಾಗಿ, ಮಾವನ್ನು ತಿನ್ನುತ್ತಿದ್ದರಂತೆ.
ಮೊಘಲ್ ದೊರೆ ಅಲ್ಲಾವುದ್ದೀನ್ ಖಿಲ್ಜಿ ಮಾವಿನ ಹಣ್ಣುಗಳು ಮತ್ತು ಅದರ ಭಕ್ಷ್ಯಗಳನ್ನು ತುಂಬಾ ಇಷ್ಟಪಡುತ್ತಿದ್ದ ಎಂದು ಉಲ್ಲೇಖಗಳಿವೆ. ಅನೇಕ ಇತಿಹಾಸಕಾರರು ಈ ಬಗ್ಗೆ ತಮ್ಮ ಪುಸ್ತಕಗಳಲ್ಲಿ ಬರೆದಿದ್ದಾರೆ.
ಔರಂಗಜೇಬ್ ಕೂಡ ಮಾವಿನ ಹಣ್ಣನ್ನು ಬಹಳಷ್ಟು ಇಷ್ಟಪಟ್ಟು ತಿನ್ನುತ್ತಿದ್ದನಂತೆ. ಈ ಬಗ್ಗೆಯೂ ಅನೇಕ ಕಥೆಗಳು ಸಾಕ್ಷಿ ಹೇಳುತ್ತವೆ. ಜಹನಾರಾ ಮತ್ತು ಔರಂಗಜೇಬ್ ಮಾವಿನ ವಿಚಾರದಲ್ಲಿಯೇ ಶಾಂತಿ ಒಪ್ಪಂದವಾಗಿತ್ತು ಎಂದು ಹೇಳಲಾಗುತ್ತದೆ.
ಔರಂಗಜೇಬ್, ಬುದ್ಧಿವಂತ ಮತ್ತು ಕಠೋರ ರಾಜ. ಆದರೆ ಆತ ಮಾವಿನ ಹಣ್ಣುಗಳನ್ನು ತಿನ್ನುವಾಗ ಸೌಮ್ಯವಾಗಿರುತ್ತಾನೆ ಎಂದು ಹೇಳಲಾಗುತ್ತದೆ. ಔರಂಗಜೇಬನಿಗೆ ಸುಧಾರಸ್ ಮತ್ತು ರಸ್ನಾ ವಿಲಾಸ್ ಮಾವು ಎಂದರೆ ಬಹಳ ಇಷ್ಟವಾಗಿತ್ತಂತೆ. ಇದಕ್ಕೆ ಈ ಹೆಸರುಗಳನ್ನು ಖುದ್ದಾಗಿ ಆತನೇ ಇಟ್ಟಿದ್ದನು ಎಂದು ಹೇಳಲಾಗುತ್ತದೆ.