ಅನೇಕ ದೊಡ್ಡ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ತಮ್ಮ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), HDFC ಬ್ಯಾಂಕ್, ICICI ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ (BOB) ಹಿರಿಯ ನಾಗರಿಕರಿಗೆ ವಿಶೇಷ FD ಯೋಜನೆಗಳನ್ನು ನೀಡುತ್ತವೆ.
ನವದೆಹಲಿ : ಅನೇಕ ದೊಡ್ಡ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ತಮ್ಮ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), HDFC ಬ್ಯಾಂಕ್, ICICI ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ (BOB) ಹಿರಿಯ ನಾಗರಿಕರಿಗೆ ವಿಶೇಷ FD ಯೋಜನೆಗಳನ್ನು ನೀಡುತ್ತವೆ. ಇವುಗಳಲ್ಲಿ, ಐಸಿಐಸಿಐ ಬ್ಯಾಂಕ್ ಹೊರತುಪಡಿಸಿ, ಎಲ್ಲಾ ಬ್ಯಾಂಕುಗಳಲ್ಲಿ ಈ ಯೋಜನೆಯ ಗಡುವು 30 ಸೆಪ್ಟೆಂಬರ್ 2021 ಆಗಿದೆ. ಐಸಿಐಸಿಐ ಬ್ಯಾಂಕ್ ತನ್ನ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್ಡಿಯ ಗಡುವನ್ನು 7 ಅಕ್ಟೋಬರ್ 2021 ರವರೆಗೆ ವಿಸ್ತರಿಸಿದೆ. ಠೇವಣಿಗಳ ಮೇಲಿನ ಬಡ್ಡಿದರಗಳು ಕಡಿಮೆಯಾಗುತ್ತಿರುವ ನಡುವೆ, ವಿಶೇಷ ಎಫ್ಡಿಗಳು ನಿವೃತ್ತಿ ಜೀವನದಲ್ಲಿ ಸುರಕ್ಷಿತ ಮತ್ತು ಖಚಿತವಾದ ಆದಾಯದ ಉತ್ತಮ ಮೂಲವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಎಸ್ಬಿಐನ (SBI) ವಿಶೇಷ ಎಫ್ಡಿ ಯೋಜನೆ 'ವಿ ಕೇರ್' ನಲ್ಲಿ (We Care), ಹಿರಿಯ ನಾಗರಿಕರು 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ 0.30 ಶೇಕಡಾ ಹೆಚ್ಚು ಬಡ್ಡಿ ಪಡೆಯುತ್ತಾರೆ. ಎಸ್ಬಿಐ ಪ್ರಸ್ತುತ 5 ವರ್ಷಗಳ ಎಫ್ಡಿಗಳ ಮೇಲೆ ಸಾಮಾನ್ಯ ಜನರಿಗೆ 5.4% ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರು ವಿಶೇಷ ಎಫ್ಡಿ ಯೋಜನೆಯಲ್ಲಿ ಠೇವಣಿ ಮಾಡಿದರೆ ವಾರ್ಷಿಕ 6.20 ಬಡ್ಡಿ ಲಭ್ಯವಿರುತ್ತದೆ. ವಿ ಕೇರ್ ಯೋಜನೆಯಲ್ಲಿ, ಹಿರಿಯ ನಾಗರಿಕರು 0.50 ಶೇಕಡಾ ಹೆಚ್ಚು ಬಡ್ಡಿಯ ಜೊತೆಗೆ 0.30 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ.
ಎಚ್ಡಿಎಫ್ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ ತನ್ನ ಎಚ್ಡಿಎಫ್ಸಿ ಸೀನಿಯರ್ ಸಿಟಿಜನ್ ಕೇರ್ ಎಫ್ಡಿ ಯೋಜನೆಯಲ್ಲಿ ಠೇವಣಿಗಳ ಮೇಲೆ 0.75 ಶೇಕಡಾ ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ 5 ವರ್ಷಗಳಿಗಿಂತ ಹೆಚ್ಚು ಕಾಲ ಠೇವಣಿ ಇಟ್ಟರೆ, ಅವರು ಎಫ್ಡಿಗೆ 6.25 ಶೇಕಡಾ ವಾರ್ಷಿಕ ಬಡ್ಡಿಯನ್ನು ಪಡೆಯುತ್ತಾರೆ. ಸಾಮಾನ್ಯ ಜನರು 5 ವರ್ಷಗಳ ಎಫ್ಡಿ ಮೇಲೆ 5.50 ಶೇಕಡಾ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಇದರಲ್ಲಿ, 0.50 ಪ್ರತಿಶತ ಹಿರಿಯ ನಾಗರಿಕರ ಪ್ರಯೋಜನ ಮತ್ತು 0.25 ಶೇಕಡಾ ವಿಶೇಷ ಯೋಜನೆ ಅಂದರೆ ಒಟ್ಟು 0.75 ರಷ್ಟು ಹೆಚ್ಚುವರಿ ಬಡ್ಡಿ ಪಡೆಯುತ್ತಾರೆ.
ಐಸಿಐಸಿಐ ಬ್ಯಾಂಕ್ನ ವಿಶೇಷ ಎಫ್ಡಿ ಯೋಜನೆ ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ಡಿ ಯೋಜನೆಯಲ್ಲಿ, ಹಿರಿಯ ನಾಗರಿಕರು 0.80 ಶೇಕಡಾ ಹೆಚ್ಚು ಬಡ್ಡಿಯನ್ನು ಪಡೆಯುತ್ತಾರೆ. ಇದರಲ್ಲಿ, ಬ್ಯಾಂಕ್ ಹಿರಿಯ ನಾಗರಿಕರಿಗೆ 5 ವರ್ಷಗಳಿಗಿಂತ ಹೆಚ್ಚು ಮತ್ತು 10 ವರ್ಷಗಳವರೆಗಿನ ಠೇವಣಿಗಳ ಮೇಲೆ ವಾರ್ಷಿಕವಾಗಿ 6.30 ಶೇಕಡಾ ಬಡ್ಡಿಯನ್ನು ನೀಡುತ್ತಿದೆ. ಈ ಬ್ಯಾಂಕಿನಲ್ಲಿ, ಸಾಮಾನ್ಯ ಜನರು 5 ವರ್ಷಗಳಿಗಿಂತ ಹೆಚ್ಚಿನ ಠೇವಣಿಗಳಿಗೆ 5.50 ಶೇಕಡಾ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಲ್ಲಿ ಠೇವಣಿ ಇಟ್ಟರೆ, 0.50 ಶೇಕಡಾ ಹೆಚ್ಚು ಬಡ್ಡಿಯ ಜೊತೆಗೆ, ಹಿರಿಯ ನಾಗರಿಕರಿಗೆ 0.30 ಶೇಕಡಾ ಹೆಚ್ಚುವರಿ ಬಡ್ಡಿ ಸಿಗುತ್ತದೆ.
ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರೀಕರ ವಿಶೇಷ ಯೋಜನೆಯಲ್ಲಿ ಠೇವಣಿಗಳ ಮೇಲೆ 1.0 ಶೇಕಡಾ ಹೆಚ್ಚಿನ ಬಡ್ಡಿದರವನ್ನು ನೀಡುತ್ತಿದೆ. ಹಿರಿಯ ನಾಗರಿಕರು ವಿಶೇಷ ಎಫ್ಡಿ ಯೋಜನೆಯಲ್ಲಿ 5 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಮತ್ತು 10 ವರ್ಷಗಳವರೆಗೆ ಠೇವಣಿ ಇರಿಸಿದರೆ, ವಾರ್ಷಿಕ 6.25 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ.