Athiya Rahul Wedding Venue: ರಾಹುಲ್-ಅಥಿಯಾ ಶೆಟ್ಟಿ ಮದುವೆ ಮನೆಯ ಫೋಟೋಸ್ ವೈರಲ್: ಸಖತ್ ಆಗಿದೆ ಮಂಟಪ!

Athiya Rahul Wedding Venue Inside Photos: ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರು ಒಂದು ವಾರದೊಳಗೆ ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅಥಿಯಾ ಮತ್ತು ಕೆಎಲ್ ರಾಹುಲ್ ಮದುವೆಯಾಗುವುದು ಹೋಟೆಲ್‌ನಲ್ಲಿ ಅಲ್ಲ, ಬದಲಾಗಿ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ ನಲ್ಲಿ. ಈ ಫಾರ್ಮ್‌ಹೌಸ್‌ನ ಒಳಗಿನ ಫೋಟೋಗಳು ಸದ್ಯ ಸಖತ್ ವೈರಲ್ ಆಗಿದ್ದು, ಪ್ರಕೃತಿಯ ಮಡಿಲಿನಲ್ಲಿ ಈ ಮನೆಯನ್ನು ನೋಡಲು ಎರಡು ಕಣ್ಣು ಸಾಲದು ಎಂಬಂತಿದೆ.  

1 /6

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರು ಜನವರಿ 23, 2023 ರಂದು ವಿವಾಹವಾಗಲಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಸದ್ಯ ಈ ಮದುವೆಯ ಸುದ್ದಿಯನ್ನು ಜೋಡಿ ಅಥವಾ ಅವರ ಕುಟುಂಬದವರು ಖಚಿತಪಡಿಸಿಲ್ಲ.

2 /6

ಈ ಫಾರ್ಮ್‌ಹೌಸ್‌ನ ಒಳಗಿನ ಫೋಟೋಗಳು ಸದ್ಯ ಸಖತ್ ವೈರಲ್ ಆಗಿದ್ದು, ಪ್ರಕೃತಿಯ ಮಡಿಲಿನಲ್ಲಿ ಈ ಮನೆಯನ್ನು ನೋಡಲು ಎರಡು ಕಣ್ಣು ಸಾಲದು ಎಂಬಂತಿದೆ.  

3 /6

ಮಾಧ್ಯಮ ವರದಿಗಳ ಪ್ರಕಾರ, ಈ ಜೋಡಿ ಸುನಿಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಮದುವೆಯಾಗಲಿದ್ದಾರೆ. ಈ ಫೋಟೋದಲ್ಲಿ ಕಾಣುವ ಐಷಾರಾಮಿ ಮನೆ ಇವರಿಬ್ಬರ ಮದುವೆಯ ಸ್ಥಳವಾಗಿದೆ.

4 /6

ಸುನೀಲ್ ಶೆಟ್ಟಿಯವರ ಈ ಸುಂದರವಾದ ಫಾರ್ಮ್‌ಹೌಸ್ ಮುಂಬೈನಿಂದ ಸ್ವಲ್ಪ ದೂರದಲ್ಲಿರುವ ಖಂಡಾಲಾದಲ್ಲಿದೆ.

5 /6

ಅಥಿಯಾ ಮತ್ತು ಕೆಎಲ್ ಅವರ ಮದುವೆಯಲ್ಲಿ ಕ್ರಿಕೆಟ್ ಮತ್ತು ಸಿನಿಮಾ ಕ್ಷೇತ್ರದ ಟಾಪ್ ಸ್ಟಾರ್‌ಗಳು ಭಾಗವಹಿಸಲಿದ್ದಾರೆ ಎಂದು ವರದಿಗಳು ಹೇಳುತ್ತಿದ್ದವು. ಆದರೆ ಈಗ ಮದುವೆಯಲ್ಲಿ ಜೋಡಿಯ ಕುಟುಂಬ ಸದಸ್ಯರು ಮತ್ತು ಆಪ್ತರು ವಲಯ ಮಾತ್ರ ಪಾಲ್ಗೊಳ್ಳುತ್ತಿದೆ ಎನ್ನಲಾಗಿದೆ.

6 /6

ಇತ್ತೀಚಿಗೆಷ್ಟೇ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತನ್ನ ಮನೆಯಲ್ಲಿಯೇ ಸಿಂಪಲ್ ಆಗಿ ಮದುವೆಯಾಗಿದ್ದರು. ಈ ಜೋಡಿ ಸಹ ಅವರಂತೆಯೇ ಮನೆಯಲ್ಲಿಯೇ ಸಣ್ಣಮಟ್ಟಿಗೆ ಮದುವೆಯಾಗಲಿದೆ ಎಂದು ಹೇಳಲಾಗುತ್ತಿದೆ.