ಕಿಚ್ಚನ ಲವ್ ಸ್ಟೋರಿ.. ಇಲ್ಲಿದೆ ಸುದೀಪ್ ಅವರ ಇಂಟರೆಸ್ಟಿಂಗ್‌ ಪ್ರೇಮ ಕಹಾನಿ

Kiccha Sudeep Love Story: ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಸೌತ್ ಸ್ಟಾರ್ ಸುದೀಪ್‌ ಅವರ ಲವ್ ಲೈಫ್ ಬಗ್ಗೆ ಇಲ್ಲಿ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳಿವೆ. 

Kiccha Sudeep Love Story: ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಸೌತ್ ಸ್ಟಾರ್ ಸುದೀಪ್‌ ಅವರ ಲವ್ ಲೈಫ್ ಬಗ್ಗೆ ಇಲ್ಲಿ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳಿವೆ. ಕಿಚ್ಚ ಸುದೀಪ್ 2000ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಪ್ರಿಯಾ ರಾಧಾಕೃಷ್ಣ ಅವರನ್ನು ಭೇಟಿಯಾಗಿದ್ದರು. 1 ವರ್ಷದ ನಂತರ ದಂಪತಿಗಳು 2001 ರಲ್ಲಿ ವಿವಾಹವಾದರು. ಮದುವೆಗೂ ಮುನ್ನ ಪ್ರಿಯಾ ವಿಮಾನಯಾನ ಸಂಸ್ಥೆ ಮತ್ತು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸುದೀಪ್-‌ಪ್ರಿಯಾ ದಂಪತಿಗೆ ಸಾನ್ವಿ ಎಂಬ ಮಗಳಿದ್ದಾಳೆ. 

1 /8

ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಸೌತ್ ಸ್ಟಾರ್ ಸುದೀಪ್‌ ಅವರ ಲವ್ ಲೈಫ್ ಬಗ್ಗೆ ಇಲ್ಲಿ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳಿವೆ. 

2 /8

ಕಿಚ್ಚ ಸುದೀಪ್ 2000ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಪ್ರಿಯಾ ರಾಧಾಕೃಷ್ಣ ಅವರನ್ನು ಭೇಟಿಯಾಗಿದ್ದರು. 1 ವರ್ಷದ ನಂತರ ದಂಪತಿಗಳು 2001 ರಲ್ಲಿ ವಿವಾಹವಾದರು. ಮದುವೆಗೂ ಮುನ್ನ ಪ್ರಿಯಾ ವಿಮಾನಯಾನ ಸಂಸ್ಥೆ ಮತ್ತು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸುದೀಪ್-‌ಪ್ರಿಯಾ ದಂಪತಿಗೆ ಸಾನ್ವಿ ಎಂಬ ಮಗಳಿದ್ದಾಳೆ.  

3 /8

ಕಿಚ್ಚ ಸುದೀಪ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ ಪರಿಣಾಮ, 2015 ರಲ್ಲಿ ದಂಪತಿಗಳು ಬೇರ್ಪಟ್ಟರು. ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.  

4 /8

ವರದಿಗಳ ಪ್ರಕಾರ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು ಅವರು 4 ವರ್ಷಗಳ ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ, ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾಗಲೂ ಅವರು ತಮ್ಮ ಮಗಳಿಗಾಗಿ ಒಟ್ಟಿಗೆ ಸೇರುತ್ತಿದ್ದರು. 

5 /8

ತನ್ನ ವೈವಾಹಿಕ ಜೀವನದ ಸಮಸ್ಯೆಗಳನ್ನು ಸುದೀಪ್‌ ಯಾರಿಗೂ ತಿಳಿಸುತ್ತಿರಲಿಲ್ಲ. ಸುದೀಪ್ ಪತ್ನಿಯಿಂದ ಮಗಳ ಕಸ್ಟಡಿ ಪಡೆಯದಿರಲು ನಿರ್ಧರಿಸಿದ್ದರು. ನಟ ವಿಚ್ಛೇದನ ಪಡೆದರೆ 19 ಕೋಟಿ ಕೊಡಬೇಕಾಗುತ್ತಿತ್ತು ಎಂಬ ಚರ್ಚೆ ನಡೆದಿತ್ತು. 

6 /8

ಅದೃಷ್ಟವಶಾತ್ ಇಬ್ಬರೂ ಬೇರ್ಪಡಲಿಲ್ಲ. ಕಿಚ್ಚ ಮತ್ತು ಪ್ರಿಯಾ ತಮ್ಮ ಸಂಬಂಧಕ್ಕೆ ಮತ್ತೊಂದು ಅವಕಾಶ ನೀಡಿದರು. ಒಂದು ವರ್ಷದ ನಂತರ, ಇಬ್ಬರೂ ತಮ್ಮ ಮಗಳ ಸಲುವಾಗಿ ವಿಚ್ಛೇದನ ಪಡೆಯದಿರಲು ನಿರ್ಧರಿಸಿದರು. 

7 /8

ಮತ್ತೆ ಒಂದಾದ ನಂತರ ಅವರ ಬಾಂಧವ್ಯ ಮೊದಲಿಗಿಂತ ಗಟ್ಟಿಯಾಗಿದೆ. ಅವರು ಈಗ ಒಟ್ಟಿಗೆ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

8 /8

ಕಿಚ್ಚ ಮತ್ತು ಪ್ರಿಯಾ ಸದಾ ಜೊತೆಯಲ್ಲಿರಲಿ ಎಂಬುದು ನಮ್ಮ ಪ್ರಾರ್ಥನೆ. ಅವರ ಈ ಬಾಂಧವ್ಯ ಎಂದಿಗೂ ದುರ್ಬಲವಾಗದಿರಲಿ ಎಂಬುದೇ ಎಲ್ಲರ ಆಶಯ.