Fat Burn Tips : ಈ ನೀರು ಕೇವಲ 2 ರಿಂದ 3 ವಾರಗಳಲ್ಲಿ ಹೊಟ್ಟೆಯನ್ನು ಚಪ್ಪಟೆ ಆಕಾರಕ್ಕೆ ತರಲು ಸಹಾಯ ಮಾಡುತ್ತದೆ.
ಬೆಂಗಳೂರು : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮತ್ತು ಜೇನುತುಪ್ಪವನ್ನು ಕುಡಿಯುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಹೊಟ್ಟೆ ಭಾಗದ ಬೊಜ್ಜು ಕರಗಿಸಲು ನಿಂಬೆ ನೀರಿಗಿಂತ ಹೆಚ್ಚು ಪ್ರಯೋಜನಕಾರಿಯಾದ ಪಾನೀಯವೊಂದಿದೆ. ಈ ನೀರು ಕೇವಲ 2 ರಿಂದ 3 ವಾರಗಳಲ್ಲಿ ಹೊಟ್ಟೆಯನ್ನು ಚಪ್ಪಟೆ ಆಕಾರಕ್ಕೆ ತರಲು ಸಹಾಯ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಬೊಜ್ಜು ಸೇರಿಕೊಂಡರೆ ಅದು ದೇಹದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಯಾವ ಬಟ್ಟೆ ಧರಿಸಿದರೂ ಅಸಹ್ಯವಾಗಿಯೇ ಕಾಣುತ್ತದೆ. ಈ ಬೊಜ್ಜು ಕರಗಿಸಲು ಸುಲಭ ಉಪಾಯ ಇಲ್ಲಿದೆ.
ತೂಕ ನಷ್ಟಕ್ಕೆ ಪ್ರಯತ್ನಿಸುವವರಿಗೆ ಜೀರಿಗೆ ನೀರು ಅಮೃತ ಇದ್ದ ಹಾಗೆ. 1 ಟೀಚಮಚ ಜೀರಿಗೆ ಕೇವಲ 7 ಕ್ಯಾಲೊರಿಗಳನ್ನು ಹೊಂದಿರುತ್ತದೆ.ಜೀರಿಗೆ ನೀರು ದೇಹದ ಚಯಾಪಚಯ ದರವನ್ನು ಹೆಚ್ಚಿಸುತ್ತದೆ.ಇದು ಫ್ಯಾಟ್ ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಜೀರಿಗೆಯಲ್ಲಿ ಥೈಮೋಲ್ ಎಂಬ ರಾಸಾಯನಿಕವು ಕಂಡುಬರುತ್ತದೆ.ಇದು ಕಿಣ್ವಗಳು ಮತ್ತು ಪಿತ್ತರಸವನ್ನು ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸುತ್ತದೆ.ಇಡೀ ದೇಹದಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬು ಸರಿಯಾಗಿ ಜೀರ್ಣವಾಗಲು ಇದು ಸಹಾಯ ಮಾಡುತ್ತದೆ.
ಜೀರಿಗೆ ನೀರು ಚಯಾಪಚಯ ದರ ಮತ್ತು ಲಿಪಿಡ್ ಪ್ರೊಫೈಲ್ ಅನ್ನು ಸುಧಾರಿಸುವ ಮೂಲಕ BMI ಅನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ.
2 ಗ್ಲಾಸ್ ನೀರಿಗೆ 1 ಚಮಚ ಜೀರಿಗೆ ಹಾಕಿ 5 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಸಿ. ನಂತರ ಈ ನೀರನ್ನು ಫಿಲ್ಟರ್ ಮಾಡಿ ಇದಕ್ಕೆ ಜೇನುತುಪ್ಪ ಅಥವಾ ನಿಂಬೆರಸ ಸೇರಿಸಿ ಕುಡಿಯಬಹುದು.
1 ಚಮಚ ಜೀರಿಗೆಯನ್ನು 1 ಲೋಟ ನೀರಿನಲ್ಲಿ ಹಾಕಿ ರಾತ್ ಪೂರ್ತಿ ನೆನೆಯಲು ಬಿಡಿ. ಮರುದಿನ ಬೆಳಿಗ್ಗೆ, ನೀರನ್ನು ಫಿಲ್ಟರ್ ಮಾಡಿ ಮತ್ತು ಜೀರಿಗೆ ಬೀಜಗಳನ್ನು ಬೇರ್ಪಡಿಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.