ತಂದೆಯ ವಯಸ್ಸಿನ ಆ ವ್ಯಕ್ತಿ ನನ್ನ ಜೊತೆ...! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಸ್ಟಾರ್‌ ನಟಿ

Casting Couch : ಹಲವು ನಾಯಕಿಯರು ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿತ್ತುದ್ದಾರೆ.. ತಾವು ಎದುರಿಸಿದ ಕಹಿ ಅನುಭವಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲ ಸ್ಟಾರ್ ಹೀರೋಯಿನ್‌ಗಳು ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಮಾತುಗಳನ್ನಾಡಿದ್ದಾರೆ. ಸಧ್ಯ ಹಾಸನ್ಯ ನಟಿಯೊಬ್ಬರು ನೀಡಿರುವ ಹೇಳಿಕೆ ಸಿನಿ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ..
 

1 /6

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಬಹಳ ದಿನಗಳಿಂದ ವದಂತಿಗಳಿವೆ. ಈಗಾಗಲೇ ಈ ಕುರಿತು ಹಲವರು ನಟಿಯರು ಬಹಿರಂಗವಾಗಿ ಮಾತನಾಡಿದ್ದಾರೆ. ತಾವು ಎದುರಿಸಿದ ಕಹಿ ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕೆಲ ಸ್ಟಾರ್ ಹೀರೋಯಿನ್ ಗಳು ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ವಿಚಾರಗಳನ್ನು ರಿವೀಲ್‌ ಮಾಡಿದ್ದಾರೆ.. 

2 /6

ಈ ನಡುವೆ ಇತ್ತೀಚೆಗೆ ಜಬರ್ದಸ್ತ್ ನಟಿಯೊಬ್ಬರು ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ವಿಷಯ ಹೇಳಿದ್ದಾರೆ. ಆಫರ್ ಗಳಿಗೆ ಕಮಿಟ್‌ಮೆಂಟ್ ಕೇಳುತ್ತಾರೆ ಅಂತ ಶಾಕ್ ವಿಚಾರವನ್ನು ಬಯಲಿಗೆಳೆದಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ಜಬರ್ದಸ್ತ್‌ ಶೋ ನಟಿ ರೋಹಿಣಿ.. 

3 /6

ಹೌದು.. ಇಂಡಸ್ಟ್ರಿಯಲ್ಲಿ ಹಲವಾರು ಹಾಸ್ಯ ನಟರು ಮತ್ತು ಪಾತ್ರ ಕಲಾವಿದರು ತಮ್ಮ ಪ್ರತಿಭೆಯನ್ನು ತೋರಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.. ಒಳ್ಳೆಯ ಮನ್ನಣೆ ಗಳಿಸಿದ್ದಾರೆ. ಸಿನಿಮಾದಲ್ಲಿ ಬರೀ ಗಂಡಸರೇ ಅಲ್ಲ.. ಎಷ್ಟೋ ಹೆಂಗಸರೂ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.   

4 /6

ಉಮಾಶ್ರಿ, ಕೋವೈ ಸರಳಾ, ಹೇಮಾ, ಸುರೇಖಾ ವಾಣಿ, ಗೀತಾ ಸಿಂಗ್ ಈಗಾಗಲೇ ಅನೇಕ ಲೇಡಿ ಕಾಮಿಡಿಯನ್‌ಗಳು ಸಿನಿ ಉದ್ಯಮದಲ್ಲಿ ಮಿಂಚುತ್ತಿದ್ದಾರೆ. ಅವರಲ್ಲಿ ರೋಹಿಣಿ ಸಹ ಒಬ್ಬರು. ಜನಪ್ರಿಯ ಟಿವಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಜಬರ್ದಸ್ತ್ ಕಾಮಿಡಿ ಶೋ ಮೂಲಕ ರೋಹಿಣಿ ಹೆಸರುವಾಸಿಯಾಗಿದ್ದಾರೆ.  

5 /6

ತಮ್ಮ ಕಾಮಿಡಿ ಟೈಮಿಂಗ್‌ನಿಂದ ಜನಪ್ರಿಯತೆ ಗಳಿಸಿದ ರೋಹಿಣಿ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೇವ್ ದಿ ಟೈಗರ್ಸ್ ಸೀರೀಸ್ ಹಾಗೂ ಹನುಮಾನ್ ಸಿನಿಮಾಗಳಲ್ಲಿ ತನ್ನ ಅಭಿನಯದಿಂದ ಜನ ಮನ ಗೆದ್ದಿದ್ದಾರೆ. ಇತ್ತೀಚೆಗಷ್ಟೇ ನಟಿ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್‌ ಕಾಮೆಂಟ್ ಮಾಡಿದ್ದಾರೆ.   

6 /6

ವೃತ್ತಿಜೀವನದ ಆರಂಭದಲ್ಲಿ ಆಫರ್‌ಗಳಿಗಾಗಿ ಅನೇಕರನ್ನು ಸಂಪರ್ಕ ಮಾಡುತ್ತಿದ್ದೆ, ಆ ಸಮಯದಲ್ಲಿ ಕೆಲವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದರು. ಅಲ್ಲದೇ ಒಮ್ಮೆ ಆಡಿಷನ್‌ಗೆ ಹೋದಾಗ ನನ್ನ ತಂದೆಯ ವಯಸ್ಸಿನ ವ್ಯಕ್ತಿಯೊಬ್ಬ ನನ್ನ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದ. ವೃತ್ತಿ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರೂ ತಪ್ಪು ದಾರಿ ಹಿಡಿಯಲಿಲ್ಲ ಎಂದು ರೋಹಿಣಿ ಹೇಳಿದ್ದಾರೆ.