ನವರಾತ್ರಿ ವೇಳೆಯಲ್ಲಿ ದುರ್ಗೆಗೆ ಈ ವಸ್ತುಗಳನ್ನು ಅರ್ಪಿಸಲೇಬಾರದು .!

ನವರಾತ್ರಿ ವೇಳೆ ಕೆಲವೊಂದು ಕೆಲಸಗಳನ್ನು ಮಾಡುವುದನ್ನು ಕೂಡಾ ನಿಷೇಧಿಸಲಾಗಿದೆ.

ಬೆಂಗಳೂರು : ನವರಾತ್ರಿಯ 9 ದಿನಗಳು  ದುರ್ಗಾ ದೇವಿಗೆ ಮೀಸಲಾಗಿವೆ. ಈ 9 ದಿನಗಳ ಪೂಜೆಯಲ್ಲಿ, ದುರ್ಗೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಈ ಪೂಜೆಯ ವೇಳೆ, ಕೆಲವೊಂದು ವಸ್ತುಗಳನ್ನು ತಪ್ಪಿಯೂ ದೇವಿಗೆ ಅರ್ಪಿಸಬಾರದು. ಅಷ್ಟೇ ಅಲ್ಲ, ನವರಾತ್ರಿ ವೇಳೆ ಕೆಲವೊಂದು ಕೆಲಸಗಳನ್ನು ಮಾಡುವುದನ್ನು ಕೂಡಾ ನಿಷೇಧಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /5

ನವರಾತ್ರಿಯಲ್ಲಿ, ಮಾತೆಯ ಆಶೀರ್ವಾದವನ್ನು ಪಡೆಯುವ ಸಲುವಾಗಿ ಭಕ್ತರು  ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಸಮಯದಲ್ಲಿ,  ದುರ್ಗೆ ಇಷ್ಟಪಡುವ  ವಸ್ತುಗಳನ್ನು ಅರ್ಪಿಸಲಾಗುತ್ತದೆ.  ಆದರೆ  ಜ್ಯೋತಿಷ್ಯದ ಪ್ರಕಾರ, ದುರ್ಗಾದೇವಿಗೆ ಅಹಿತಕರವಾದ ಹೂವುಗಳನ್ನು ಅರ್ಪಿಸಬೇಡಿ.   

2 /5

ನವರಾತ್ರಿಯ ಒಂಭತ್ತು ದಿನಗಳಲ್ಲಿ ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ತಾಯಿಯ ಪ್ರತಿಯೊಂದು ರೂಪಕ್ಕೂ ವಿವಿಧ ಹೂವುಗಳನ್ನು ಅರ್ಪಿಸಲಾಗುತ್ತದೆ. ಇದರಿಂದ ದುರ್ಗೆಯ ಕೃಪೆಗೆ ಪ್ರಾಪ್ತಿಯಾಗುತ್ತದೆ. ದೇವಿಗೆ ಯಾವಾಗಲೂ ತಾಜಾ, ಪರಿಮಳಯುಕ್ತ ಮತ್ತು ಕೆಂಪು ಹೂವುಗಳನ್ನು ಅರ್ಪಿಸಿ. ಬಾಡಿ ಹೋದ ಹೂವುಗಳನ್ನು ಯಾವುದೇ ಕಾರಣಕ್ಕೂ ದೇವಿಗೆ ಅರ್ಪಿಸಬಾರದು. 

3 /5

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವರಾತ್ರಿ ಪೂಜೆಯಲ್ಲಿ ಕೆಂಪು ಹೂವುಗಳನ್ನು ಬಳಸಲಾಗುತ್ತದೆ. ಈ ಸಮಯದಲ್ಲಿ,  ದೇವಿಗೆ ತಪ್ಪಿಯೂ ಕನೇರ್, ಧಾತುರಾ, ಪಾರಿಜಾತ , ಬಿಲ್ವ ಪತ್ರೆ ಮುಂತಾದ ಹೂವುಗಳನ್ನು ಅರ್ಪಿಸಬೇಡಿ. 

4 /5

ಹಿಂದೂ ಧರ್ಮದಲ್ಲಿ ಅಕ್ಷತೆಗೆ ವಿಶೇಷ ಸ್ಥಾನವಿದೆ. ಅಕ್ಷತೆ ಇಲ್ಲದೆ ಯಾವುದೇ ಪೂಜಾ ವಿಧಿಯು ಪೂರ್ಣವಾಗುವುದಿಲ್ಲ.  ಆರಾಧನೆಯಲ್ಲಿ ಅಕ್ಷತೆಗೆ ಪ್ರಮುಖ ಸ್ಥಾನವಿದೆ. ದುರ್ಗೆಗೆ ಅಕ್ಷತೆಯನ್ನು ಅರ್ಪಿಸುವಾಗ, ಮುರಿದ ಅಕ್ಕಿಯನ್ನು ಅರ್ಪಿಸಬೇಡಿ. ತಾಯಿಗೆ ಅರ್ಪಿಸುವ ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ.

5 /5

ಮಾ ದುರ್ಗೆಗೆ ಭೋಗ ಅರ್ಪಿಸುವಾಗ, ಸಾತ್ವಿಕ ಆಹಾರವನ್ನು ಮಾತ್ರ ನೀಡಿ. ಅಥವಾ ತಾಯಿಗೆ ಪ್ರಿಯವಾದ ವಸ್ತುಗಳನ್ನು ಮಾತ್ರ ಅರ್ಪಿಸಿ. ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇತ್ಯಾದಿಗಳನ್ನು ಬಳಸಬೇಡಿ. ಮನೆಯಲ್ಲಿ ತಯಾರಿಸಿದ ಹಾಲಿನ ಸಿಹಿತಿಂಡಿಗಳನ್ನು ತಾಯಿಗೆ ಅರ್ಪಿಸಿ.