Ileana D'cruz : ಮೊದಲ ಬಾರಿಗೆ ತನ್ನ ಗಂಡನ ಬಗ್ಗೆ ಮಾತನಾಡಿದ ಇಲಿಯಾನಾ..! ಮದುವೆ ರಹಸ್ಯ ಮುಚ್ಚಿಟ್ಟ ನಟಿ

Ileana D'cruz : ಮೊದಲ ಬಾರಿಗೆ ಇಲಿಯಾನಾ ಡಿಕ್ರೂಜ್‌ ತನ್ನ ಪತಿ ಮೈಕೆಲ್‌ ಡೋಲನ್‌ ಬಗ್ಗೆ ಮಾತನಾಡಿದ್ದಾರೆ. ಮೈಕೆಲ್‌ ವ್ಯಕ್ತಿತ್ವವನ್ನು ಹೊಗಳಿರುವ ನಟಿ ತಮ್ಮ ಗಂಡ ತುಂಬಾ ಒಳ್ಳೆಯವರು, ತಮ್ಮನ್ನು ಚನ್ನಾಗಿ ನೋಡಿಕೊಳ್ಳುತ್ತಾರೆ ಅಂತ ತಿಳಿಸಿದ್ದಾರೆ.

1 /8

ಇಲಿಯಾನಾ ಡಿಕ್ರೂಜ್ ಭಾರತೀಯ ಸಿನಿರಂಗದ ಸ್ಟಾರ್‌ ನಟಿಯರಲ್ಲಿ ಒಬ್ಬರು.   

2 /8

ಸಿನಿಮಾಗಳಿಂದ ದೂರ ಉಳಿದಿರುವ ನಟಿ ಇತ್ತೀಚಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.  

3 /8

ಇಲಿಯಾನಾ ಇತ್ತೀಚಿಗೆ ತನ್ನ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದರು. ಮಗುವಿಗೆ ಫೀನಿಕ್ಸ್ ಡೋಲನ್ ಎಂದು ಹೆಸರಿಟ್ಟಿದ್ದಾರೆ.  

4 /8

ಮದುವೆ ಮತ್ತು ಗಂಡನ ಬಗ್ಗೆ ರಹಸ್ಯವಾಗಿರುವ ಇಲಿಯಾನಾ ಕೊನೆಗೂ ತನ್ನ ಪತಿಯೊಂದಿಗಿರುವ ಫೋಟೋವನ್ನು ಹಂಚಿಕೊಂಡಿದ್ದರು.  

5 /8

ಆದರೆ ಇಲಿಯಾನ ತನ್ನ ಗಂಡನ ಬಗ್ಗೆ ಯಾವುದೇ ವಿವರಗಳನ್ನು ನೀಡಿದಲ್ಲ. ಮದುವೆಯಾಗಿರುವ ಬಗ್ಗೆಯೂ ಸಹ ಮಾಹಿತಿ ನೀಡಿಲ್ಲ.   

6 /8

ಸಂದರ್ಶನದಲ್ಲಿ ಮದುವೆ ಬಗ್ಗೆ ಕೇಳಿದಾಗ ಅದನ್ನು ರಹಸ್ಯವಾಗಿಡಲು ತಮಗೆ ಇಷ್ಟ ಎಂದು, ಆ ವಿಚಾರವಾಗಿ ಮಾತನಾಡಲು ಇಲಿಯಾನಾ ಇಷ್ಟಪಡಲಿಲ್ಲ.  

7 /8

ಇದೀಗ ಮೊದಲ ಬಾರಿಗೆ ಇಲಿಯಾನಾ ತನ್ನ ಪತಿಯ ಬಗ್ಗೆ ಮಾತನಾಡಿದ್ದು, ಮೈಕೆಲ್‌ ಡೋಲನ್‌ ತುಂಬಾ ಒಳ್ಳೆಯ ವ್ಯಕ್ತಿ, ಅವರು ನನ್ನೊಂದಿಗೆ ಇರುವುದು ನನ್ನ ಅದೃಷ್ಟ ಎಂದು ಪತಿಯನ್ನು ಹೊಗಳಿದ್ದಾರೆ.  

8 /8

ಅಲ್ಲದೆ, ಇಲಿಯಾನಾ ಮಗು ಹುಟ್ಟಿದ ಮೇಲೆ ತುಂಬಾ ಖಿನ್ನತೆಗೆ ಒಳಗಾಗಿದ್ದರಂತೆ. ಅಲ್ಲದೆ ಅಂತಹ ಸಂದರ್ಭದಲ್ಲಿ ಮೈಕೆಲ್‌ ನನ್ನ ಜೊತೆಯಾಗಿದ್ದು, ಸಮಾಧಾನ ಮಾಡಿದರು ಎಂದು ತಿಳಿಸಿದ್ದಾರೆ.