ಈ 5 ಕೆಲಸಗಳನ್ನು ಮಾಡಿದರೆ ಜೀವನದುದ್ದಕ್ಕೂ ಸಿಗಲಿದೆ ಗಣೇಶನ ಆಶೀರ್ವಾದ

. ಜ್ಯೋತಿಷ್ಯದಲ್ಲಿ, ಬುಧವನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಬುಧ ಗ್ರಹವು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ. 

ನವದೆಹಲಿ : ಗಣೇಶನ ಆಶೀರ್ವಾದ ಪಡೆಯಲು ಬುಧವಾರ ಅತ್ಯಂತ ಮಂಗಳಕರ ದಿನ. ಗಣೇಶನನ್ನು ಬುದ್ಧಿವಂತಿಕೆಯ ದೇವರು ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ, ಬುಧವನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಬುಧ ಗ್ರಹವು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ. ಅಲ್ಲದೆ, ಅವು ಭೂಮಿಯ ಅಂಶಕ್ಕೆ ಸಂಬಂಧಿಸಿವೆ. ಜಾತಕದಲ್ಲಿ ಬುಧ ಬಲವಾಗಿದ್ದರೆ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತದೆ. ಮತ್ತೊಂದೆಡೆ, ಬುಧ ದುರ್ಬಲನಾದರೆ ಒಬ್ಬ ವ್ಯಕ್ತಿಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದ್ದಕ್ಕಿದ್ದಂತೆ, ಜೀವನದಲ್ಲಿ ಎಲ್ಲವೂ ಹಾಳಾದಂತೆ ಭಾಸವಾಗುತ್ತದೆ. ಬುಧವಾರದಂದು ಈ ಐದು ಕ್ರಮಗಳನ್ನು ಮಾಡುವುದರಿಂದ ಬುಧ ಶಕ್ತಿಶಾಲಿಯಾಗುತ್ತಾನೆ. ಇದರೊಂದಿಗೆ ಬುದ್ಧಿವಂತಿಕೆಯ ದೇವರಾದ ಗಣಪತಿಯ ಆಶೀರ್ವಾದವೂ ಸಿಗುತ್ತದೆ.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ಗಣೇಶನಿಗೆ ಹಸಿರು ಗರಿಕೆ ಎಂದರೆ ಇಷ್ಟ. ಜೀವನದಲ್ಲಿ ಯಾವುದೂ ಮಂಗಳಕರವಾಗಿಲ್ಲದಿದ್ದರೆ,  ಬುಧವಾರದಂದು, ಗಣೇಶನಿಗೆ ಹಸಿರು ಗರಿಕೆ ಅರ್ಪಿಸಿ. ಹೀಗೆ ಮಾಡುವುದರಿಂದ ಗಣೇಶನ ವಿಶೇಷ ಕೃಪೆ ಸಿಗುತ್ತದೆ. ಇದರಿಂದ ಜೀವನ ಸುಖಮಯವಾಗಿರುತ್ತದೆ. ಬುಧವಾರದಂದು ಗಣೇಶನಿಗೆ 21 ಗರಿಕೆಯನ್ನು ಅರ್ಪಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. 

2 /5

ಬುಧದೋಷ ನಿವಾರಣೆಗೆ ಮನೆಯ ಪೂರ್ವ ದಿಕ್ಕಿನಲ್ಲಿ ಕೆಂಪು ಧ್ವಜ ಹಾಕಿದರೆ ಶೂಭ ಫಲ ಸಿಗುತ್ತದೆ. ಅಲ್ಲದೆ, ಬುಧ ಗ್ರಹದ ದುಷ್ಪರಿಣಾಮಗಳನ್ನು ತೊಡೆದುಹಾಕಲು ಚಿನ್ನದ ಆಭರಣಗಳನ್ನು ಧರಿಸಬೇಕು.   

3 /5

ಬುಧವಾರ ಹಸುವಿಗೆ ಹುಲ್ಲನ್ನು ತಿನ್ನಿಸುವುದರಿಂದ ಬುಧ ದೋಷದ ಅಶುಭ ಪರಿಣಾಮ ಕೊನೆಗೊಳ್ಳುತ್ತದೆ. ಬುಧವಾರದಂದು ಗಣಪತಿಗೆ ಸಿಂಧೂರವನ್ನು ಅರ್ಪಿಸಿದರೆ  ಗಣಪತಿಯು ಪ್ರಸನ್ನನಾಗುತ್ತಾನೆ. ಇದರಿಂದ  ಜೀವನದಲ್ಲಿ ಸಂತೋಷ ನೆಲೆಯಾಗುತ್ತದೆ. 

4 /5

ಶಾಸ್ತ್ರಗಳ ಪ್ರಕಾರ, ಬುಧವಾರದಂದು ಹಸಿರು ಬಣ್ಣದ ವಸ್ತುಗಳನ್ನು ಹೆಚ್ಚಾಗಿ ಬಳಸಬೇಕು. ಇದರಿಂದ ದುರ್ಬಲ ಬುಧ ಬಲಶಾಲಿಯಾಗುತ್ತಾನೆ. ಇದಲ್ಲದೆ, ಯಾವಾಗಲೂ ಹಸಿರು ಕರವಸ್ತ್ರವನ್ನು ಬಳಸಬೇಕು.  ಈ ದಿನ ಬಡವರಿಗೆ ಹೆಸರುಕಾಳು ದಾನಮಾಡಿ. 

5 /5

ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ಬಲಪಡಿಸಲು ಪಚ್ಚೆ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಬುಧವಾರದಂದು ಚಿಕ್ಕ ಬೆರಳಿಗೆ ಪಚ್ಚೆಯನ್ನು ಧರಿಸುವುದರಿಂದ ಬುಧದ ಅಶುಭ ಪರಿಣಾಮ  ಕೊನೆಗೊಳ್ಳುತ್ತದೆ.