ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ಜಾರಿಗೆ ತರಲಾಗುತ್ತಿದ್ದು, ಪ್ರಸ್ತುತ ಕೇಂದ್ರದ ನರೇಂದ್ರ ಮೋದಿ ಸರ್ಕಾರವು 8ನೇ ವೇತನ ಆಯೋಗ ಜಾರಿಗೆ ತರುವ ತಯಾರಿಯಲ್ಲಿದೆ.
8th Pay Commission : 8ನೇ ವೇತನ ಆಯೋಗ ರಚನೆಯಾದರೆ ಮತ್ತು ಕಾರ್ಮಿಕ ಸಂಘಟನೆಗಳ ಬೇಡಿಕೆಗಳನ್ನು ಅಂಗೀಕರಿಸಿದರೆ, ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿದಾರರ ಪಿಂಚಣಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗದ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಸರ್ಕಾರ ಇನ್ನೇನು ಆದೇಶ ನೀಡಲಿದೆ ಎನ್ನಲಾಗಿದೆ.
7ನೇ ವೇತನ ಆಯೋಗವನ್ನು 2016ರ ಜನವರಿ 1ರಿಂದ ದೇಶಾದ್ಯಂತ ಜಾರಿಗೆ ತರಲಾಗಿದೆ. ಇದಕ್ಕಾಗಿ ತಯಾರಿ 2014ರಲ್ಲಿಯೇ ಆರಂಭಿಸಲಾಗಿತ್ತು.ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗವನ್ನು ಜಾರಿಗೊಳಿಸುವುದರಿಂದ,ಇದೀಗ 8 ನೇ ವೇತನ ಆಯೋಗ ಜಾರಿ ಮಾಡುವ ಸಮಯ.
8ನೇ ವೇತನ ಆಯೋಗ ಜಾರಿಯಾದಾಗ ಕನಿಷ್ಠ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಪ್ರಮುಖ ಬದಲಾವಣೆಗಳಾಗುವ ನಿರೀಕ್ಷೆಯಿದೆ.ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ಮಾಸಿಕ ವೇತನ ಹಾಗೂ ಪಿಂಚಣಿದಾರರ ಪಿಂಚಣಿಯಲ್ಲಿ ಭಾರಿ ಏರಿಕೆಯಾಗಲಿದೆ.
ಇನ್ನು 6ನೇ ವೇತನ ಶ್ರೇಣಿಯಿಂದ 7ನೇ ವೇತನ ಶ್ರೇಣಿಗೆ ಪರಿವರ್ತನೆಯಾಗುವ ಸಂದರ್ಭದಲ್ಲಿ ವೇತನ ಪರಿಷ್ಕರಣೆಯಲ್ಲಿನ ಫಿಟ್ಮೆಂಟ್ ಅಂಶವನ್ನು 3.68ಕ್ಕೆ ಇಡಬೇಕು ಎಂದು ನೌಕರರ ಸಂಘ ಒತ್ತಾಯಿಸಿದೆ. ಆದರೆ ಸರಕಾರ ಅದಕ್ಕೆ ಕಿವಿಗೊಡಲಿಲ್ಲ. ಫಿಟ್ಮೆಂಟ್ ಅಂಶವನ್ನು 2.57 ರಂತೆ ಮುಂದುವರಿಸಲಾಗಿತ್ತು. ಫಿಟ್ಮೆಂಟ್ ಅಂಶದ ಮೂಲಕ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ರೂ.7000ದಿಂದ ರೂ.18 ಸಾವಿರಕ್ಕೆ ಹೆಚ್ಚಿಸಲಾಗಿದೆ.
ಇದಲ್ಲದೇ ಕನಿಷ್ಠ ಪಿಂಚಣಿ ಕೂಡ 3500 ರೂ.ನಿಂದ 9000 ರೂ.ಗೆ ಏರಿಕೆಯಾಗಿದೆ. ಸೇವೆ ಸಲ್ಲಿಸುತ್ತಿರುವ ನೌಕರರ ಗರಿಷ್ಠ ವೇತನ 2.50 ಲಕ್ಷಕ್ಕೆ ಬದಲಾಗಿದ್ದು, ಗರಿಷ್ಠ ಪಿಂಚಣಿ 1.25 ಲಕ್ಷಕ್ಕೆ ಬದಲಾಗಿದೆ.
8ನೇ ವೇತನ ಆಯೋಗ ರಚನೆಯಾದರೆ ಮತ್ತು ಕಾರ್ಮಿಕ ಸಂಘಟನೆಗಳ ಬೇಡಿಕೆಗಳನ್ನು ಅಂಗೀಕರಿಸಿದರೆ, ಫಿಟ್ಮೆಂಟ್ ಅಂಶವು 3.68 ಕ್ಕೆ ಏರಬಹುದು.2.57 ಫಿಟ್ಮೆಂಟ್ ಅಂಶದ ಆಧಾರದ ಮೇಲೆ ನೌಕರರ ಕನಿಷ್ಠ ವೇತನ 18,000 ರೂ . ಆದರೆ ಫಿಟ್ ಮೆಂತಂಶ 3.68 ಆದರೆ ಕನಿಷ್ಠ ಮೂಲ ವೇತನವನ್ನು 26,000 ರೂಪಾಯಿಗೆ ಏರಿಸಲಾಗುವುದು. ಇದರಿಂದ ವೇತನದಲ್ಲಿ ಶೇ.44ರಷ್ಟು ಹೆಚ್ಚಳವಾಗಲಿದೆ.
ಫಿಟ್ ಮೆಂಟ್ ಅಂಶವನ್ನು 3.68ಕ್ಕೆ ಹೆಚ್ಚಿಸಿದರೆ ನೌಕರರ ಮೂಲ ವೇತನ ರೂ. 26,000 ಹೆಚ್ಚಾಗಲಿದೆ.ಪ್ರಸ್ತುತ, ಉದ್ಯೋಗಿಯ ಕನಿಷ್ಠ ವೇತನವು ರೂ.18,000 ಆಗಿದ್ದರೆ, ಭತ್ಯೆಗಳನ್ನು ಹೊರತುಪಡಿಸಿ 2.57 ರ ಫಿಟ್ಮೆಂಟ್ ಅಂಶದ ಆಧಾರದ ಮೇಲೆ ರೂ.46,260 (18,000 X 2.57 = 46,260) ಪಡೆಯುತ್ತಾನೆ. ಫಿಟ್ಮೆಂಟ್ ಅಂಶವನ್ನು 3.68 ಕ್ಕೆ ಹೆಚ್ಚಿಸಿದರೆ ವೇತನವು 95,680 ರೂ.ಗೆ (26000X3.68 = 95,680) ಹೆಚ್ಚಾಗುತ್ತದೆ.
8ನೇ ವೇತನ ಆಯೋಗ ರಚನೆಯಾದರೆ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಬದಲಾವಣೆಯಾಗಲಿದೆ. ಇದಲ್ಲದೆ, ತುಟ್ಟಿಭತ್ಯೆ (ಡಿಎ), ಮನೆ ಬಾಡಿಗೆ ಭತ್ಯೆ (ಎಚ್ಆರ್ಎ), ಸಾರಿಗೆ ಭತ್ಯೆ (ಟಿಎ) ನಂತಹ ವಿವಿಧ ಸವಲತ್ತುಗಳು ಮತ್ತು ಭತ್ಯೆಗಳು ಸಹ ಹೆಚ್ಚಾಗುವುದರಿಂದ ನೌಕರರಿಗೆ ಬಂಪರ್ ವೇತನ ಏರಿಕೆಯಾಗುವ ನಿರೀಕ್ಷೆಯಿದೆ.
ಹೊಸ ವೇತನ ಆಯೋಗವನ್ನು ಜನವರಿ 1, 2026 ರಿಂದ ಜಾರಿಗೆ ತರುವ ನಿರೀಕ್ಷೆಯಿದೆ. ವೇತನ ಆಯೋಗವನ್ನು ಜಾರಿಗೆ ತರಲು ಕನಿಷ್ಠ 1 1/2 - 2 ವರ್ಷಗಳು ಬೇಕಾಗುವುದರಿಂದ, 2024 ರಲ್ಲಿ ಅಂದರೆ ಈ ವರ್ಷ ಅಧಿಸೂಚನೆ ಬಂದರೆ 2026 ರಲ್ಲಿ ಅದನ್ನು ಜಾರಿಗೆ ತರುವುದು ಸುಲಭ.
ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್ಸೈಟ್ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.