Way to Keep Your Child Away From Mobile : ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ಗೆ ತುಂಬಾ ಅಡಿಕ್ಟ್ ಆಗುತ್ತಿದ್ದಾರೆ.. ನಿಮ್ಮ ಮಕ್ಕಳಿಗೂ ಮೊಬೈಲ್ ಬಳಸುವ ಅಭ್ಯಾಸವಿದ್ದರೆ ಅದನ್ನು ನಿಲ್ಲಿಸಲು ನೀವು ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಮೊಬೈಲ್ ಅಭ್ಯಾಸವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಪದೇ ಪದೇ ಹೇಳುತ್ತಾರೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಹ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ.. ಮಕ್ಕಳ ಮೊಬೈಲ್ ಅಭ್ಯಾಸವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಮ್ಮೆ ಮಕ್ಕಳು ಮೊಬೈಲ್ ಅಡಿಕ್ಟ್ ಆದರೆ ಅದರಿಂದ ಅವರನ್ನು ಹೊರ ತರುವುದು ತುಂಬಾ ಕಷ್ಟ.. ಅನೇಕ ಪೋಷಕರು ತಮ್ಮ ಮಗು ಇಡೀ ದಿನ ಮೊಬೈಲ್ನಲ್ಲಿ ಬ್ಯುಸಿಯಾಗಿರುತ್ತದೆ ಅಂತ ದೂರುತ್ತಾರೆ.. ಇದರು ಸರಿಯಾದ ಕ್ರಮವಲ್ಲ..
ಕೆಲವು ಪಾಲಕರು ಕೂಡ ದಿನವಿಡೀ ಮೊಬೈಲ್ ನಲ್ಲಿ ಬ್ಯುಸಿಯಾಗಿರುತ್ತಾರೆ. ಕುಟುಂಬ ಮತ್ತು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಬದಲು, ಮೊಬೈಲ್ನಲ್ಲಿ ಮುಳುಗಿರುತ್ತಾರೆ. ಇದನ್ನು ನೋಡಿ ಮಕ್ಕಳು ಸಹ ಮೊಬೈಲ್ಗೆ ದಾಸರಾಗುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮೊಬೈಲ್ ಕೊಡಬೇಡಿ : ಮೊದಲನೆಯದಾಗಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಕೊಡಬೇಡಿ. ನಿಮ್ಮ ಮಗು ನಿಮ್ಮೊಂದಿಗಿರುವಾಗ ಮೊಬೈಲ್ ನಿಂದ ಬಳಸಬೇಡಿ. ಏಕೆಂದರೆ ನೀವು ಮೊಬೈಲ್ನಲ್ಲಿ ಬ್ಯುಸಿಯಾಗಿದ್ದರೆ ಮಕ್ಕಳು ಕೂಡ ನಿಮ್ಮನ್ನು ನೋಡಿದ ಮೊಬೈಲ್ ಕೈಗೆತ್ತಿಕೊಳ್ಳುತ್ತಾರೆ.
ಊಟ ಮಾಡುವ ಮುನ್ನ ಮೊಬೈಲ್ ಕೊಡಬೇಡಿ: ಮಕ್ಕಳು ಊಟ ಮಾಡುವಾಗ ಮೊಬೈಲ್ ಕೊಡಬೇಡಿ. ಹಾಗೆ ಮಾಡಿದರೆ ಪ್ರತಿ ಬಾರಿ ಊಟಕ್ಕೂ ಮುನ್ನ ಮೊಬೈಲ್ ಕೊಡಬೇಕಾಗಿ ಬರುತ್ತದೆ. ಇಲ್ಲದಿದ್ದರೆ ಅವರು ತಿನ್ನಲು ಸಾಧ್ಯವಿಲ್ಲ. ಆದ್ದರಿಂದ ಮೊಬೈಲ್ ಅನ್ನು ದೂರವಿಡಿ.
ಆಟಗಳತ್ತ ಗಮನಹರಿಸಿ: ಮಕ್ಕಳನ್ನು ಮೊಬೈಲ್ ಫೋನ್ಗಳಿಂದ ದೂರವಿಡುವುದೇ ಉತ್ತಮ ಪರಿಹಾರ. ಅದಕ್ಕಾಗಿ ಹೊರಾಂಗಣ ಆಟಗಳು ಅಥವಾ ಇತರೆ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳಿ. ನೀವು ಮಗುವನ್ನು ಸೈಕ್ಲಿಂಗ್ಗೆ ಕರೆದೊಯ್ಯಬಹುದು.. ಅವರ ಜೊತೆ ವಾಕ್ ಮಾಡಬಹುದು..
ಇಂಟರ್ನೆಟ್ ಅಥವಾ ವೈಫೈ ಆಫ್ ಮಾಡಿ: ನಿಮ್ಮ ಮೊಬೈಲ್ನಲ್ಲಿ ಕೆಲಸ ಮುಗಿದ ನಂತರ ನೀವು ಇಂಟರ್ನೆಟ್ ಅಥವಾ ವೈಫೈ ಅನ್ನು ಆಫ್ ಮಾಡಿ. ಹೀಗೆ ಮಾಡುವುದರಿಂದ ಮಕ್ಕಳು ಮೊಬೈಲ್ ಬಳಸುವುದಿಲ್ಲ. ನಿಮ್ಮ ಅನುಮತಿಯಿಲ್ಲದೆ ಮೊಬೈಲ್ ಬಳಸದಂತೆ ಪಾಸ್ವರ್ಡ್ ಇರಿಸಿ.
ಮೊಬೈಲ್ ಕಿತ್ತುಕೊಳ್ಳಬೇಡಿ: ಮಗುವಿನ ಕೈಯಲ್ಲಿ ಫೋನ್ ಕಂಡರೆ ತಕ್ಷಣ ತೆಗೆದುಕೊಂಡು ಹೋಗಬೇಡಿ. ಇದರಿಂದ ಅವರಿಗೆ ಕೋಪ ಬರುತ್ತದೆ. ಶಾಂತವಾಗಿ ವಿವರಿಸಿ ಮತ್ತು ಅವರಿಂದ ಫೋನ್ ತೆಗೆದುಕೊಳ್ಳಿ.. ಅಲ್ಲದೆ ಅದರಿಂದ ಅಪಾಯವಾಗುತ್ತೆ ಎನ್ನುವುದನ್ನ ಮನವರಿಕೆ ಮಾಡಲು ಪ್ರಯತ್ನಿಸಿ..
ಟಿವಿ ವೀಕ್ಷಣೆಗೂ ಸಮಯ ಕೊಡಿ: ಮನೆಯಲ್ಲಿ ಮಕ್ಕಳು ಟಿವಿ ನೋಡುವುದು, ಪುಸ್ತಕಗಳನ್ನು ಓದುವುದು, ಸ್ಪೀಕರ್ನಲ್ಲಿ ಹಾಡುಗಳನ್ನು ಕೇಳುವುದು ಮುಂತಾದವುಗಳಿಂದ ಮನರಂಜಿಸಲು ಪ್ರೋತ್ಸಾಹಿಸಿ. ಮಕ್ಕಳು ಟಿವಿ ವೀಕ್ಷಿಸಲು ಸರಿಯಾದ ಸಮಯವನ್ನು ನಿಗದಿಪಡಿಸಿ. ಅತೀಯಾಗಿ ಟಿವಿ ನೋಡುವುದರಿಂದ ಮಕ್ಕಳ ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ ಎಚ್ಚರ..