Heart Attack Symptoms: ಇತರ ಕಾಯಿಲೆಗಳಲ್ಲಿಯೂ ಅಡಗಿವೆ ಹೃದಯಾಘಾತದ ಲಕ್ಷಣಗಳು, ತಪ್ಪು ತಿಳುವಳಿಕೆಯಿಂದ ಇಂದೇ ಹೊರಬನ್ನಿ

Heart Attack Symptoms: ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂಕಿಅಂಶಗಳನ್ನು ಪ್ರಕಾರ, ಪ್ರತಿ ವರ್ಷ ಸುಮಾರು 18 ಮಿಲಿಯನ್ ಜನರು ಹೃದ್ರೋಗದಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. 

Heart Attack Symptoms: ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂಕಿಅಂಶಗಳನ್ನು ಪ್ರಕಾರ, ಪ್ರತಿ ವರ್ಷ ಸುಮಾರು 18 ಮಿಲಿಯನ್ ಜನರು ಹೃದ್ರೋಗದಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಈ ರೋಗದ ಲಕ್ಷಣಗಳನ್ನು ನಾವು ಮುಂಚಿತವಾಗಿ ಗುರುತಿಸುವುದು ಉತ್ತಮ, ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಹೃದಯಾಘಾತ ಬರುವ ಮೊದಲು, ನಮ್ಮ ದೇಹವು ಕೆಲವು ಎಚ್ಚರಿಕೆ ಸಂಕೇತಗಳನ್ನು ನೀಡುತ್ತದೆ, ಆದರೆ ನಾವು ಅದನ್ನು ಬೇರೆ ಯಾವುದೋ ಕಾಯಿಲೆ ಇರಬಹದು ಎಂದು ತಪ್ಪಾಗಿ ಗ್ರಹಿಸುತ್ತೇವೆ. ಹೃದಯಾಘಾತದ ಅಪಾಯವನ್ನು ಸೂಚಿಸುವ ರೋಗಗಳು ಯಾವುವು ಎಂಬುದನ್ನು ತಿಳಿದುಕೊಂಡು, ತಪ್ಪು ತಿಳುವಳಿಕೆಯಿಂದ ಪಾರಾಗೋಣ ಬನ್ನಿ,

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ಓದಿ-Diet for Men : 40ರ ಬಳಿಕ ಪುರುಷರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಬೇಕು... ಇಲ್ದಿದ್ರೆ?

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ವಾಂತಿ: ಹಲವು ಬಾರಿ ಹೃದಯಾಘಾತವಾಗುವ ಮುನ್ನ ವಾಂತಿ, ವಾಕರಿಕೆ, ತಲೆಸುತ್ತು ಮುಂತಾದ ಸಂಕೇತಗಳು ಕಾಣಿಸಿಕೊಳ್ಳುತ್ತವೆ, ಸ್ವಲ್ಪ ಹೊತ್ತು ವಿಶ್ರಮಿಸಿದ ನಂತರ ಚಡಪಡಿಸುತ್ತೇವೆ, ಆದರೆ ಇದಕ್ಕೆ ಕಾರಣ ದೇಹದ ಹಲವು ಭಾಗಗಳಲ್ಲಿ ರಕ್ತ, ಸಂವಹನದಲ್ಲಿ ಅಡಚಣೆ ಉಂಟಾಗುತ್ತದೆ ಇದು ವಾಂತಿ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.  

2 /5

ಎದೆನೋವು: ಹೃದಯಾಘಾತದ ನೋವು ಎದೆಯ ಮಧ್ಯಭಾಗದ ಮೂಳೆಯಾಗಿರುವ 'ಸ್ಟರ್ನಮ್'ನಿಂದ  ಪ್ರಾರಂಭವಾಗುತ್ತದೆ , ಇದೊಂದು ಸಣ್ಣ ಪ್ರಮಾಣದ ಎದೆ ನೋವು ಎಂದು ನಾವು ಭಾವಿಸುತ್ತೇವೆ, ಇದರಲ್ಲಿ ಸ್ವಲ್ಪ ಸಮಯದವರೆಗೆ ಅಸ್ವಸ್ಥತೆಯ ಭಾವನೆ ಇರುತ್ತದೆ. ನಿಮಗೂ ಇದೇ ರೀತಿ ಅನುಭವವಾಗಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆಗೆ ಒಳಗಾಗಿ.  

3 /5

ಉಸಿರಾಟದ ತೊಂದರೆ: ಹಲವು ಬಾರಿ ನಾವು ವೇಗವಾಗಿ ಓಡುವಾಗ ಅಥವಾ ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆ ಅನುಭವಿಸಲು ಪ್ರಾರಂಭಿಸುತ್ತೇವೆ, ಹಾಗಿದ್ದಲ್ಲಿ, ಅದು ಹೃದ್ರೋಗದ ಕಡೆಗೆ ಸಂಕೇತಿಸುತ್ತದೆ. ಸಮಯಕ್ಕೆ ಅದರ ಚಿಕಿತ್ಸೆ ಅಗತ್ಯ.

4 /5

ಹಠಾತ್ ಬೆವರುವಿಕೆ: ಹಲವು ಬಾರಿ ವಾತಾವರಣದಲ್ಲಿ ಕಾವು ಇಲ್ಲದಿದ್ದಾಗ, ಕೆಲವರ ದೇಹವು ಇದ್ದಕ್ಕಿದ್ದಂತೆ ತಣ್ಣಗಾಗುತ್ತದೆ ಮತ್ತು ಬೆವರಲು ಪ್ರಾರಂಭಿಸುತ್ತಾರೆ. ನಿಮಗೂ ಇಂತಹ ಲಕ್ಷಣ ಕಂಡುಬಂದರೆ, ಅದನ್ನು ಎಂದಿಗೂ ಲಘುವಾಗಿ ಪರಿಗಣಿಸಬೇಡಿ.

5 /5

ಎದೆಯುರಿ: ಅನೇಕ ಬಾರಿ ತಿಂದ ನಂತರ ಹೊಟ್ಟೆ ಉರಿಯ ಸಂವೇದನೆಯಾಗುತ್ತದೆ. ಇದು ಜೀರ್ಣಕ್ರಿಯೆಯಿಂದ ಸಂಭವಿಸುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು  ಅದನ್ನು ನಿರ್ಲಕ್ಷಿಸುತ್ತೇವೆ, ಆದರೆ ಈ ಉರಿಯುವಿಕೆಯು ಎಲ್ಲೋ ಹೃದಯಾಘಾತದ ಅಪಾಯವಿದೆ ಎಂಬುದನ್ನು ಸಂಕೇತಿಸುತ್ತದೆ. ಎದೆಯುರಿ ಮತ್ತು ಹೃದಯಾಘಾತದ ಲಕ್ಷಣಗಳು ಕೆಲವೊಮ್ಮೆ ಒಂದೇ ಆಗಿರಬಹುದು, ಆದರೆ ಅಪಾಯದ ವಿಷಯಕ್ಕೆ ಬಂದಾಗ, ಎರಡೂ ಕಾಯಿಲೆಗಳು ಭಿನ್ನವಾಗಿವೆ ಎಂಬುದನ್ನು ನೆನಪಿನಲ್ಲಿಡಿ.