Heart attack: ಚಳಿಗಾಲದಲ್ಲಿ ಹೃದಯಾಘಾತದಿಂದ ದೂರವಿರಲು ಈ ಆಹಾರ ಸೇವಿಸಿ

ಚಳಿಗಾಲದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತವೆ. ಹೀಗಾಗಿ ನಾವು ಈ ಋತುವಿನಲ್ಲಿ ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಹೃದಯಾಘಾತ ತಪ್ಪಿಸಲು ಚಳಿಗಾಲದಲ್ಲಿ ಯಾವ ಆಹಾರ ಸೇವಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ.

ನವದೆಹಲಿ: ಚಳಿಗಾಲದಲ್ಲಿ ಹೆಚ್ಚು ಹೃದಯಾಘಾತ ಪ್ರಕರಣಗಳು ಮುನ್ನೆಲೆಗೆ ಬರುತ್ತವೆ. ಚಳಿಗಾಲದ ದಿನಗಳಲ್ಲಿ ರಕ್ತ ದಪ್ಪವಾಗುತ್ತದೆ. ಈ ದಿನಗಳಲ್ಲಿ ರಕ್ತ ಸಂಚಾರವೂ ಸರಿಯಾಗಿ ಆಗುವುದಿಲ್ಲ. ರಕ್ತ ಹೆಪ್ಪುಗಟ್ಟುವುದರಿಂದ ಅನೇಕ ಬಾರಿ ಆಮ್ಲಜನಕ ಮತ್ತು ರಕ್ತ ಹೃದಯಕ್ಕೆ ಸರಿಯಾಗಿ ಪೂರೈಕೆಯಾಗದೆ ಹೃದಯಾಘಾತವಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹೃದಯಾಘಾತದಿಂದ ದೂರವಿರಲು ಈ ಆಹಾರಗಳನ್ನು ಸೇವಿಸುವುದು ಉತ್ತಮ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಅರಿಶಿನವು ನೈಸರ್ಗಿಕ ರಕ್ತ ತೆಳುವಾಗುವಂತೆ ಕೆಲಸ ಮಾಡುತ್ತದೆ. ಇದರಲ್ಲಿ ಕರ್ಕ್ಯುಮಿನ್ ಎಂಬ ಪೋಷಕಾಂಶವಿದ್ದು, ಅದು ರಕ್ತವನ್ನು ತೆಳುವಾಗಿಸುತ್ತದೆ. ಅರಿಶಿನ ಸೇವನೆಯಿಂದ ರಕ್ತ ಹೆಪ್ಪುಗಟ್ಟುವುದಿಲ್ಲ. ಬಿಸಿ ಹಾಲಿಗೆ ಅರಿಶಿನ ಬೆರೆಸಿ ಪ್ರತಿದಿನ ಕುಡಿಯುವುದು ಒಳ್ಳೆಯದು.

2 /5

ಶುಂಠಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಸ್ಯಾಲಿಸಿಲೇಟ್‌ಗಳು ಇದರಲ್ಲಿ ಕಂಡುಬರುತ್ತವೆ, ಇದು ರಕ್ತ ತೆಳುವಾಗುವಂತೆ ಕಾರ್ಯನಿರ್ವಹಿಸುತ್ತದೆ. ಚಳಿಗಾಲದಲ್ಲಿ ಗಂಭೀರ ಕಾಯಿಲೆಗಳನ್ನು ತಪ್ಪಿಸಲು ಶುಂಠಿ ಸೇವನೆಯು ಪ್ರಯೋಜನಕಾರಿಯಾಗಿದೆ.

3 /5

ಬೆಳ್ಳುಳ್ಳಿಯಲ್ಲಿರುವ ಗುಣಗಳು ರಕ್ತವನ್ನು ತೆಳುವಾಗುವಂತೆ ಮಾಡುತ್ತದೆ. ಚಳಿಗಾಲದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ತಪ್ಪಿಸಲು ಬೆಳ್ಳುಳ್ಳಿಯನ್ನು ಸೇವಿಸಬೇಕು. ಬೆಳ್ಳುಳ್ಳಿಯ ಕಚ್ಚಾ ಮೊಗ್ಗುಗಳು ತುಂಬಾ ಪ್ರಯೋಜನಕಾರಿ.

4 /5

ದಾಲ್ಚಿನ್ನಿಯಲ್ಲಿ ಕೊಮರಿನ್ ಇರುತ್ತದೆ. ಇದು ರಕ್ತವನ್ನು ತೆಳುವಾಗಿಸುತ್ತದೆ. ದಾಲ್ಚಿನ್ನಿ ಸೇವಿಸುವುದರಿಂದ ರಕ್ತ ದಪ್ಪವಾಗುವುದನ್ನು ತಡೆಯುತ್ತದೆ. ದಾಲ್ಚಿನ್ನಿ ಕಷಾಯವನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ. 

5 /5

ಹಣ್ಣುಗಳು ಎಲ್ಲಾ ರೀತಿಯ ಆರೋಗ್ಯಕ್ಕೆ ಪ್ರಯೋಜನಕಾರಿ. ಹೃದಯಾಘಾತದ ಅಪಾಯ ತಪ್ಪಿಸಲು ದ್ರಾಕ್ಷಿ, ಕಿತ್ತಳೆ ಮತ್ತು ಬೆರ್ರಿಗಳಂತಹ ಹುಳಿ ಹಣ್ಣುಗಳನ್ನು ತಿನ್ನುವುದು ಪ್ರಯೋಜನಕಾರಿ. ಇಂತಹ ಹಣ್ಣುಗಳನ್ನು ನಿಮ್ಮ ಆಹಾರದ ಭಾಗವಾಗಿಸುವುದು ಉತ್ತಮ.