Home remedies for Constipation: ಮನುಷ್ಯನಿಗೆ ಆಹಾರ ಸೇವನೆ ಪ್ರಕ್ರಿಯೆ ಎಷ್ಟು ಸರಾಗವಾಗಿ ನಡೆಯುತ್ತದೆಯೋ ಅದೇ ರೀತಿ ದೇಹದಲ್ಲಿ ಆಹಾರ ಜೀರ್ಣವಾಗುವ ಪ್ರಕ್ರಿಯೆಯ ಜೊತೆಗೆ ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುವ ಪ್ರಕ್ರಿಯೆಯೂ ಸಹ ಸುಲಭವಾಗಿ ನಡೆಯಬೇಕು.
ನವದೆಹಲಿ: ಇಂದು ಅನೇಕರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಗರವಾಸಿಗಳಲ್ಲಿ ಜಡತ್ವ, ವ್ಯಾಯಾಮ ಮಾಡದಿರುವುದು ಮುಂತಾದ ಕಾರಣಗಳಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ವಾತ ಪ್ರಕೃತಿಯಲ್ಲಿ ಮಲವು ಒಣಗಿದಂತೆ, ಗಟ್ಟಿಯಾಗಿರುತ್ತದೆ. ಇಂತವರು ಹೆಚ್ಚಿನ ಪ್ರಮಾಣದಲ್ಲಿ ತುಪ್ಪ, ಎಣ್ಣೆ, ಹಾಲು ಸೇವನೆ, ಎಣ್ಣೆ ಮಾಲಿಶ್ ಇವುಗಳನ್ನು ಅನುಸರಿಸಬೇಕು. ಕಫ ಪ್ರಕೃತಿ ಇರುವವರಲ್ಲಿ ಮಲ ಪ್ರವೃತ್ತಿಯು ಕುಂಠಿತಗೊಂಡಿರುತ್ತದೆ. ಇಂತವರು ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಮತ್ತು ತೊಪ್ಪು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಮಲಬದ್ಧತೆ ಸಮಸ್ಯೆ ನಿವಾರಣೆಗೆ ಅದ್ಭುತ ಮನೆಮದ್ದುಗಳ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
2-5 ಬೀಜ ತೆಗೆದ ಖರ್ಜೂರ, 1-2 ಟೀ ಚಮಚ ಹಸುವಿನ ಬೆಣ್ಣೆ, 1-5 ಕಾಳುಮೆಣಸು ಇವುಗಳನ್ನು ಚೆನ್ನಾಗಿ ಅರೆದು/ಜಗಿದು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿರಿ. ಇದರ ಮೇಲೆ 1 ಕಪ್ ಹಸುವಿನ ಹಾಲಿಗೆ ಸ್ವಲ್ಪ ಸಕ್ಕರೆ ಹಾಕಿ ಸೇವಿಸಬೇಕು.
ಅರ್ಧ ಮುಷ್ಟಿಯಷ್ಟು ಒಣದ್ರಾಕ್ಷಿಯನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಚೆನ್ನಾಗಿ ಕಿವುಚಿ, ಹಾಲು ಸಕ್ಕರೆಯೊಂದಿಗೆ ಸೇವಿಸಬಹುದು.
1-2 ಟೀ ಚಮಚ ಬೆಟ್ಟದ ನೆಲ್ಲಿಚಟ್ಟಿನ ಪುಡಿ, 1-2 ಟೀ ಚಮಚ ಬೆಣ್ಣೆ ಮತ್ತು ಸ್ವಲ್ಪ ಸಕ್ಕರೆಯನ್ನು ಮಿಶ್ರಣ ಮಾಡಿ ರಾತ್ರಿ ಊಟದ ಅರ್ಧಗಂಟೆ ಮೊದಲು ಸೇವಿಸಬೇಕು.
1 ಕಪ್ ಬಿಸಿ ಹಾಲಿನೊಂದಿಗೆ 1 ಟೀ ಚಮಚ ಹಸುವಿನ ತುಪ್ಪವನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಸೇವಿಸಬೇಕು.
ನಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಎದುರಾದರೆ ಕೇವಲ ಮಲಬದ್ಧತೆ ಮಾತ್ರವಲ್ಲದೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ನೀರಿನ ಅಂಶ ಕಡಿಮೆ ಆದಾಗ ಎದುರಾಗುವ ಮಲಬದ್ಧತೆ ಸಮಸ್ಯೆ ಕೂಡ ಸಾಕಷ್ಟು ತೊಂದರೆ ಕೊಡುತ್ತದೆ. ಹೀಗಾಗಿ ನೀವು ಹೆಚ್ಚು ನೀರನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು.