Rashmika Mandanna : ನ್ಯಾಷನಲ್‌ ಕ್ರಷ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದು ಇದೇ ಸಿನಿಮಾಗಳಿಂದ!

Rashmika Mandanna Films : ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಣ್ಣದ ಲೋಕದಲ್ಲಿ ಬಹುಬೇಡಿಕೆಯ ನಟಿ. ಕನ್ನಡ ಮಾತ್ರವಲ್ಲದೇ ಬಹುಭಾಷಾ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಇವರು ಪ್ಯಾನ್‌ ಇಂಡಿಯಾ ಸ್ಟಾರ್‌. ಹಾಗಾದರೆ ನಟಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚಲು ಕೈ ಹಿಡಿದ ಸಿನಿಮಾಗಳ ಬಗ್ಗೆ ತಿಳಿಯೋಣ. 
 

1 /6

ಪುಷ್ಪಾ : ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್‌ ಜೊತೆ ನಟಿಸಿದ್ದರು. ಈ ಸಿನಿಮಾ ಸಖತ್‌ ಹಿಟ್‌ ಆಗಿ ಪ್ರೇಕ್ಷಕರ ಮನಗೆದ್ದಿತ್ತು.   

2 /6

ವಾರಿಸು : ಈ ಚಿತ್ರದ ಮೂಲಕ ನಟಿ ರಶ್ಮಿಕಾ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವೂ ಸೂಪರ್‌ ಹಿಟ್‌ ಸಿನಿಮಾ ಆಗಿ ಮುನ್ನುಗಿತ್ತು.  

3 /6

ಅಂಜನಿಪುತ್ರ : ಈ ಸಿನಿಮಾದ ಮೂಲಕ ರಶ್ಮಿಕಾ ಕನ್ನಡದಲ್ಲಿ ಪುನೀತ್‌ ರಾಜಕುಮಾರ್‌ ಅವರ ಜೊತೆ ನಟಿಸಿ ಕನ್ನಡತಿ ಎಂದು ಗುರುತಿಸಿಕೊಂಡಿದ್ದರು. 

4 /6

ಗೀತಾ ಗೋವಿಂದಂ : ಈ ಸಿನಿಮಾದಲ್ಲಿ ನಟಿ ಸಖತ್‌ ಬೋಲ್ಡ್‌ ಆಗಿ ನಟಿಸಿದ್ದರು. ವಿಜಯ್‌ ದೇವರಕೊಂಡ ಜೊತೆ ಸಖತ್‌ ರೋಮ್ಯಾನ್ಸ್‌ ಮಾಡಿ ಬೆಸ್ಟ್‌ ಆನ್‌ ಸ್ಕ್ರೀನ್‌ ಜೋಡಿ ಎನಿಸಿಕೊಂಡಿದ್ರು.   

5 /6

ಮಿಷನ್‌ ಮಜ್ನು : ಈ ಸಿನಿಮಾದಲ್ಲಿ ರಶ್ಮಿಕಾ ಸಿದ್ದಾರ್ಥ ಮಲ್ಹೋತ್ರಾಗೆ  ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ಕುರುಡು ಪಾಕಿಸ್ತಾನಿ ಹುಡುಗಿಯ ಪಾತ್ರ ಮಾಡಿ ಎಲ್ಲರ ಮನಸ್ಸನ್ನು ಗೆದಿದ್ದು ಇದೇ ಸಿನಿಮಾದಿಂದ.  

6 /6

ಡಿಯರ್‌ ಕಾಮ್ರೇಡ್‌ : ಈ ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಜೊತೆ ನಟಿಸಿದ್ದರು. ಈ ಸಿನಿಮಾ ಎಲ್ಲ ಯಂಗ್‌ಸ್ಟಸ್ಟ್‌ ಗೆ ಸಖತ್‌ ಫೇವರೆಟ್‌.