Vitamin B12 Deficiency: ದೇಹವನ್ನು ಆರೋಗ್ಯಕರವಾಗಿಡಲು ಸಹಾಯಮಾಡುವ ಅತ್ಯಗತ್ಯ ಪೋಷಕಾಂಶಗಳಲ್ಲಿ ವಿಟಮಿನ್ ಬಿ 12 ಕೂಡ ಒಂದು. ಆದರೆ, ಈ ವಿಟಮಿನ್ ಬಿ12 ಅನ್ನು ನಮ್ಮ ದೇಹ ತನ್ನಷ್ಟಕ್ಕೆ ತಾನೇ ತಯಾರಿಸಿಕೊಳ್ಳುವುದಿಲ್ಲ,
Vitamin B12 Deficiency: ದೇಹವನ್ನು ಆರೋಗ್ಯಕರವಾಗಿಡಲು ಸಹಾಯಮಾಡುವ ಅತ್ಯಗತ್ಯ ಪೋಷಕಾಂಶಗಳಲ್ಲಿ ವಿಟಮಿನ್ ಬಿ 12 ಕೂಡ ಒಂದು. ಆದರೆ, ಈ ವಿಟಮಿನ್ ಬಿ12 ಅನ್ನು ನಮ್ಮ ದೇಹ ತನ್ನಷ್ಟಕ್ಕೆ ತಾನೇ ತಯಾರಿಸಿಕೊಳ್ಳುವುದಿಲ್ಲ, ಆದ್ದರಿಂದ ಅದನ್ನು ಪಡೆಯಲು ವಿಟಮಿನ್ ಬಿ 12 ನಲ್ಲಿ ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುವುದು ತುಂಬಾ ಮುಖ್ಯ.
ಇದನ್ನೂ ಓದಿ-Palmistry In Kannada: ನಿಮ್ಮ ಅಂಗೈಯನ್ನು ನೀವೇ ನೋಡಿ ನಿಮ್ಮ ಭವಿಷ್ಯ ತಿಳಿದುಕೊಳ್ಳಿ, ಇಲ್ಲಿದೆ ಟ್ರಿಕ್
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಮಾಂಸವು ವಿಟಮಿನ್ ಬಿ 12 ನ ಅತ್ಯುತ್ತಮ ಮೂಲವಾಗಿದೆ, ಹೀಗಾಗಿ ಪ್ರತಿನಿತ್ಯ ಮಾಂಸದ ಸೇವನೆ ದೇಹದ ವಿಟಮಿನ್ ಬಿ 12 ಜೊತೆಗೆ, ಬಿ 2, ಬಿ 3 ಮತ್ತು ಬಿ 6 ಗಳ ಕೊರತೆಯನ್ನು ನೀಗಿಸುತ್ತದೆ.
2. ಸಾಮಾನ್ಯವಾಗಿ ಸೇವಿಸುವ ಮೆನುಗಳಲ್ಲಿ ಟ್ಯೂನಾ ಮೀನು ಕೂಡ ಒಂದು ಮತ್ತು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಪೋಷಕಾಂಶಗಳಿಗೆ ಅದು ಉತ್ತಮ ಮೂಲವಾಗಿದೆ. ಇದರಲ್ಲಿ ವಿಟಮಿನ್ ಬಿ 12 ಸಹ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.
3. ಹಾಲು, ಮೊಸರು ಮತ್ತು ಚೀಸ್‌ನಂತಹ ಹಲವು ಡೈರಿ ಉತ್ಪನ್ನಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ 12 ಸೇರಿದಂತೆ ಹಲವು ವಿಟಮಿನ್‌ಗಳು ಕಂಡುಬರುತ್ತವೆ.
4. ನೀವು ವಿಟಮಿನ್ ಬಿ 12 ಜೊತೆಗೆ ಎಲ್ಲಾ ಪೋಷಕಾಂಶಗಳನ್ನು ಬಯಸಿದರೆ ನೀವು ಸಾಲ್ಮನ್ ಮೀನುಗಳನ್ನು ಸೇವಿಸಬಹುದು.
5. ನಿಮ್ಮ ದೇಹದಲ್ಲಿ ಬಿ 12 ಕೊರತೆಯಿದ್ದರೆ, ನೀವು ಮೊಟ್ಟೆಗಳನ್ನು ಸೇವಿಸಬೇಕು. ಏಕೆಂದರೆ ಪ್ರತಿದಿನ ಮೊಟ್ಟೆಯನ್ನು ಸೇವಿಸುವುದರಿಂದ ವಿಟಮಿನ್ ಬಿ12 ಕೊರತೆ ದೂರಾಗುತ್ತದೆ.