Health Tips: ಹಾಲಿನಲ್ಲಿ ಇಂಗು ಬೆರೆಸಿ ಕುಡಿಯುವುದರ ಈ ಅದ್ಭುತ ಲಾಭಗಳು ನಿಮಗೆ ತಿಳಿದಿವೆಯೇ?

Health Care Tips: ಆಹಾರ ಪದಾರ್ಥಗಳ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವಲ್ಲಿ ಇಂಗು ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ವಿವಿಧ ಭಕ್ಷ್ಯಗಳನ್ನು ತಯಾರಿಸುವಾಗ ಇಂಗನ್ನು ಬಳಸಲಾಗುತ್ತದೆ. ಆದರೆ. ಹಾಲಿನಲ್ಲಿ ಇಂಗನ್ನು ಬೆರೆಸಿ ಕುಡಿಯುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು ನಿಮಗೆ ತಿಳಿದಿವೆಯೇ? 

Health Care Tips: ಆಹಾರ ಪದಾರ್ಥಗಳ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವಲ್ಲಿ ಇಂಗು ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ವಿವಿಧ ಭಕ್ಷ್ಯಗಳನ್ನು ತಯಾರಿಸುವಾಗ ಇಂಗನ್ನು ಬಳಸಲಾಗುತ್ತದೆ. ಆದರೆ. ಹಾಲಿನಲ್ಲಿ ಇಂಗನ್ನು ಬೆರೆಸಿ ಕುಡಿಯುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು ನಿಮಗೆ ತಿಳಿದಿವೆಯೇ? ಹೌದು, ಹಾಲು ಮತ್ತು ಇಂಗು ಎರಡೂ ಕೂಡ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಹಾಲಿನಲ್ಲಿ ಇಂಗು ಬೆರೆಸಿ ಕೊಡಿಯುವುದರಿಂದ ಹಲವು ಕಾಯಿಲೆಗಳಲ್ಲಿ ತುಂಬಾ ಪ್ರಯೋಜನವನ್ನು ನೀಡುತ್ತದೆ. 

 

ಇದನ್ನೂ ಓದಿ-Health Care Tips: ಪೋಷಕಾಂಶಗಳ ಆಗರವಾಗಿರುವ ಈ ತರಕಾರಿ ಚಳಿಗಾಲದ ಹಲವು ಕಾಯಿಲೆಗಳಿಗೆ ರಾಮಬಾಣ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆಯಿರಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಇಂಗು ಹಾಲು ಬೆರೆಸಿ ಸೇವಿಸುವುದು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇಂಗು ಸೇವನೆಯಿಂದ ಮಲಬದ್ಧತೆ, ಅಸಿಡಿಟಿ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ದೂರಾಗುತ್ತವೆ. ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಈ ಹಾಲನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ.  

2 /5

2. ಒಂದೊಮ್ಮೆ ಬಿಕ್ಕಳಿಕೆ ಆರಂಭವಾದಾಗ ಅದು ನೀರು ಕುಡಿದರೂ ಕೂಡ ನಿಲ್ಲುವ ಮಾತೆ ಎತ್ತುವುದಿಲ್ಲ. ಹೀಗಾಗಿ ಒಂದು ವೇಳೆ ನೀವೂ ಕೂಡ ಆಗಾಗ್ಗೆ ಬಿಕ್ಕಳಿಸುವಿಕೆಯಿಂದ ಬಳಲುತ್ತಿದ್ದರೆ, ಆಸಫೆಟಿಡಾ ಹಾಲು ಕುಡಿಯುವುದು ಪ್ರಯೋಜನಕಾರಿಯಾಗಿದೆ. ಹಾಲು ಮತ್ತು ಇಂಗು ಬೆರೆಸಿ ಕುಡಿಯುವುದರಿಂದ ಬಿಕ್ಕಳಿಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.  

3 /5

3. ಇಂಗು-ಹಾಲು ಪೈಲ್ ಸಮಸ್ಯೆ ಇರುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಹಾಲನ್ನು ಕುಡಿಯುವುದರಿಂದ ಪೈಲ್ಸ್ ನೋವು ನಿವಾರಣೆಯಾಗುತ್ತದೆ. ಇದು ಗಟ್ಟಿಯಾದ ಮಲವನ್ನು ಮೃದುಗೊಳಿಸುವ ಕೆಲಸ ಮಾಡುತ್ತದೆ, ಇದು ನೋವನ್ನು ತಪ್ಪಿಸಬಹುದು.  

4 /5

4. ಇಂಗು ಹಾಲು ಯಕೃತ್ತಿಗೂ ಕೂಡ ಪ್ರಯೋಜನಕಾರಿ. ಈ ಹಾಲನ್ನು ಕುಡಿಯುವುದರಿಂದ ಲಿವರ್ ಗೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ. ಇಂಗು ಹಾಲು ಇಡೀ ದೇಹವನ್ನು ಕ್ರಿಯಾಶೀಲವಾಗಿಸುವ ಕೆಲಸ ಮಾಡುತ್ತದೆ.  

5 /5

5. ಹಾಲು ಮತ್ತು ಇಂಗು ಬೆರೆಸಿ ಕಿವಿಗೆ ಹಾಕಿದರೆ ಕಿವಿ ನೋವು ಕಡಿಮೆಯಾಗುತ್ತದೆ. ಮೇಕೆ ಹಾಲಿಗೆ ಅಸಫೆಟಿಡಾವನ್ನು ಸೇರಿಸಿದಾಗ, ಅದು ಇಯರ್ ಡ್ರಾಪ್ ರೀತಿ ಕಾರ್ಯನಿರ್ವಹಿಸುತ್ತದೆ. ರಾತ್ರಿಯಿಡೀ ಈ ಹನಿಯನ್ನು ಕಿವಿಯಲ್ಲಿ ಇರಿಸಿ ಮತ್ತು ಬೆಳಗ್ಗೆ ಅದನ್ನು ಸ್ವಚ್ಛಗೊಳಿಸಿ.