Hanuman Jayanti 2021: ಈ ಬಾರಿಯ ಹನುಮ ಜಯಂತಿಯಂದು ನಿರ್ಮಾಣಗೊಳ್ಳುತ್ತಿವೆ ಈ ಎರಡು ಯೋಗಗಳು

Hanuman Jayanti 2021 - ಶ್ರೀ ಆಂಜನೇಯನನ್ನು  (Lord Hanuman) ಕಲಿಯುಗದ ಜಾಗ್ರತ ದೇವ ಎಂದೂ ಕೂಡ ಕರೆಯಲಾಗುತ್ತದೆ. ಶಿವ ಸ್ವರೂಪಿಯಾಗಿರುವ ಆಂಜನೇಯ ಶಿವನ ರೀತಿಯೇ ತನ್ನ ಎಲ್ಲಾ ಭಕ್ತರಿಗೆ ಅತ್ಯಂತ ಸುಲಭವಾಗಿ ಒಲಿಯುತ್ತಾನೆ ಮತ್ತು ತನ್ನ ಭಕ್ತಾದಿಗಳ ಇಷ್ಟಾರ್ಥ ನೆರವೇರಿಸುತ್ತಾನೆ ಎನ್ನಲಾಗುತ್ತದೆ. 

Hanuman Jayanti 2021 - ಶ್ರೀ ಆಂಜನೇಯನನ್ನು  (Lord Hanuman) ಕಲಿಯುಗದ ಜಾಗ್ರತ ದೇವ ಎಂದೂ ಕೂಡ ಕರೆಯಲಾಗುತ್ತದೆ. ಶಿವ ಸ್ವರೂಪಿಯಾಗಿರುವ ಆಂಜನೇಯ ಶಿವನ ರೀತಿಯೇ ತನ್ನ ಎಲ್ಲಾ ಭಕ್ತರಿಗೆ ಅತ್ಯಂತ ಸುಲಭವಾಗಿ ಒಲಿಯುತ್ತಾನೆ ಮತ್ತು ತನ್ನ ಭಕ್ತಾದಿಗಳ ಇಷ್ಟಾರ್ಥ ನೆರವೇರಿಸುತ್ತಾನೆ ಎನ್ನಲಾಗುತ್ತದೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ತಿಥಿಯಂದು ಹನುಮಾನ್ ಜಯಂತಿ ಉತ್ಸವ ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದೇ ಶ್ರೀ ಆಂಜನೇಯ ಅಂಜನಿ ಮಾತೆಯ (Anjani Mata) ಗರ್ಭದಿಂದ ಜನಿಸಿದ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಈ ದಿನವನ್ನು ಹನುಮಾನ್ (Lord Hanuman) ಜಯಂತಿ ರೂಪದಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ 27, 2021 ರಂದು ಮಂಗಳವಾರ ಹನುಮಾನ್ ಜಯಂತಿ (Hanuman Jayanti 2021) ಆಚರಿಸಲಾಗುತ್ತಿದೆ. ಜೋತಿಷ್ಯಶಾಸ್ತ್ರದ ಅನುಸಾರ ಈ ಬಾರಿಯ ಹನುಮ ಜಯಂತಿಯ ದಿನ ಎರಡು ಯೋಗಗಳ ನಿರ್ಮಾಣವಾಗುತ್ತಿದೆ. 

 

ಇದನ್ನೂ ಓದಿ-Hanuman Temple: ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಆ ಎರಡು ಯೋಗಗಳು ಯಾವುವು? - ಈ ಬಾರಿಯ ಹನುಮ ಜಯಂತಿಯ ದಿನ ಅಂದರೆ 27 ಏಪ್ರಿಲ್ 2021 ರಂದು ಸಿದ್ಧಿ ಹಾಗೂ ವ್ಯತಿಪಾತ ಯೋಗಗಳು ಸಂಭವಿಸುತ್ತಿವೆ. ಹನುಮ ಜಯಂತಿಯ ದಿನ ಸಂಜೆ 8 ಗಂಟೆ 3 ನಿಮಿಷದವರೆಗೆ ಸಿದ್ಧಿ ಯೋಗ ಇರಲಿದ್ದು, ಬಳಿಕ ವ್ಯತಿಪಾತ ಯೋಗ ಆರಂಭಗೊಳ್ಳಲಿದೆ.

2 /5

2. ಸಿದ್ಧಿ ಯೋಗ ಯಾವಾಗ ಆರಂಭ ? (Auspicious Yog)-ವಾರ, ತಿಥಿ ಹಾಗೂ ನಕ್ಷತ್ರಗಳ ಮಧ್ಯೆ ಹೊಂದಾಣಿಕೆಯಿಂದ ಸಿದ್ಧಿ ಯೋಗ ನಿರ್ಮಾಣಗೊಳ್ಳಲಿದೆ.

3 /5

3. ಸಿದ್ಧಿಯೋಗದ ಮಹತ್ವವೇನು? - ಧಾರ್ಮಿಕ ಮಾನ್ಯತೆಗಳ ಪ್ರಕಾರ ಸಿದ್ಧಿಯೋಗದ ಅಧಿಪತಿ ಶ್ರೀ ಸಿದ್ಧಿವಿನಾಯಕನಾಗಿದ್ದಾನೆ. ಈ ಯೋಗದಲ್ಲಿ ಆರಂಭಗೊಳ್ಳುವ ಕಾರ್ಯಗಳು ಯಾವುದೇ ರೀತಿಯ ಅಡೆತಡೆ ಅಥವಾ ವಿಘ್ನಗಳಿಲ್ಲದೆ ಪೂರ್ಣಗೊಳ್ಳುತ್ತವೆ. ಕಾರ್ಯಸಿದ್ಧಿ ಪ್ರಾಪ್ತಿಗಾಗಿ ಈ ಯೋಗ ಉತ್ತಮ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಆಂಜನೇಯನ ಪೂಜೆ ಮಾಡುವುದು ಅತ್ಯಂತ ಶುಭಕರ ಮತ್ತು ಫಲದಾಯಕ ಎಂದು ಭಾವಿಸಲಾಗುತ್ತದೆ.

4 /5

4. ವ್ಯತಿಪಾತ ಯೋಗ - ಧಾರ್ಮಿಕ ನಂಬಿಕೆಗಳ ಪ್ರಕಾರ ಈ ಯೋಗವನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಈ ಅವಧಿಯಲ್ಲಿ ಮಂತ್ರಗಳ ಜಪ, ಗುರುಪೂಜೆ, ಉಪವಾಸ ಇತ್ಯಾದಿಗಳನ್ನು ಕೈಗೊಳ್ಳುವುದಕ್ಕೆ ಭಾರಿ ಮಹತ್ವವಿದೆ.

5 /5

5. ಹನುಮ ಜಯಂತಿ ಈ ನಕ್ಷತ್ರದಲ್ಲಿ ಆಚರಿಸಬೇಕು? (Hanuman Jayanti 2021 Shubh Muhurat)- ಹನುಮ ಜಯಂತಿಯ ದಿನ ಸಂಜೆ 8 ಗಂಟೆ 8 ನಿಮಿಷಕ್ಕೆ ಸ್ವಾತಿ ನಕ್ಷತ್ರ ಇರಲಿದೆ ಹಾಗೂ ಆ ಬಳಿಕ ವಿಶಾಖಾ ನಕ್ಷತ್ರ ಆರಂಭಗೊಳ್ಳಲಿದೆ.