ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಬಗ್ಗೆ ಹೆಚ್ಚು ಗಮನಹರಿಸುವ ನಾವು ಕೂದಲ ಆರೈಕೆಯನ್ನು ನಿರ್ಲಕ್ಷಿಸಿಸುತ್ತೇವೆ. ಆದರೆ ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ಕೂದಲಿನಲ್ಲಿರುವ ನೈಸರ್ಗಿಕ ಸುರಕ್ಷತಾ ಪದರವನ್ನು ಹಾಳು ಮಾಡುತ್ತವೆ. 3-4 ದಿನಗಳವರೆಗೆ ಸತತವಾಗಿ ಬಿಸಿಲನ್ನು ಎದುರಿಸುತ್ತಿದ್ದರೆ, ತಲೆಯಲ್ಲಿರುವ ರಕ್ಷಣಾ ಜೀವಕೋಶಗಳು ನಾಶವಾಗುತ್ತವೆ. ಇದರಿಂದ ಕೂದಲು ಶುಷ್ಕವಾಗಿ, ಕಳೆಗುಂದಿ, ಕವಲೊಡೆದು ಉದುರಲು ಆರಂಭವಾಗುತ್ತದೆ. ಹಾಗಿದ್ದರೆ, ಬೇಸಿಗೆಯಲ್ಲಿ ಕೂದಲಿನ ಆರೈಕೆ ಹೇಗಿರಬೇಕು ಎಂಬುದರ ಬಗ್ಗೆ ನಾವು ತಿಳಿಸುತ್ತೇವೆ.
ರೋಸ್ ವಾಟರ್: ತಲೆಯ ಚರ್ಮ ಆರೋಗ್ಯವಾಗಿ ಮತ್ತು ಜಿಡ್ಡಿನಿಂದ ಮುಕ್ತವಾಗಿಡಲು, ವಾರದಲ್ಲಿ 2 ರಿಂದ 3 ಬಾರಿ ರೋಸ್ ವಾಟರ್'ನಿಂದ ಕೂದಲನ್ನು ತೊಳೆಯಿರಿ. ಇದು ನಿಮ್ಮ ಕೂದಲನ್ನು ಮೃದುವಾಗಿಯೂ, ಸ್ವಚ್ಛವಾಗಿಯೂ ಇಡುತ್ತದೆ. ಅಲ್ಲದೆ, ತಲೆನೋವು, ಮೊದಲಾದ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.
ಹೇರ್ ಸ್ಟೈಲರ್ ಮತ್ತು ಹೇರ್ ಸ್ಟ್ರೇಟ್ನರ್ ಬಳಸದಿರಿ : ಬೇಸಿಗೆಯಲ್ಲಿ ಈ ಮಿಶಿನ್'ಗಳನ್ನೂ ಬಳಸುವುದು ಕೂದಲಿಗೆ ಒಳ್ಳೆಯದಲ್ಲ. ಇದರಿಂದ ನೆತ್ತಿ ಮತ್ತು ಕೂದಲಿಗೆ ಮತ್ತಷ್ಟು ಶಾಖ ತಗುಲಿ ಕೂದಲು ಉದುರಲು ಆರಂಭಿಸುತ್ತದೆ.
ಸಾಸಿವೆ ಎಣ್ಣೆ ಬಳಸಿ: ಬೇಸಿಗೆಯಲ್ಲಿ ಕೂದಲಿನ ಮಸಾಜ್ ಮಾಡಲಿ ಸಾಸಿವೆ ಎಣ್ಣೆಯನ್ನು ಬಳಸಿ. ಇದು ತಲೆಯಾ ಚರ್ಮದಲ್ಲಿನ ಸಮಸ್ಯೆಗಳನ್ನೂ ನಿವಾರಿಸುವುದಲ್ಲದೆ, ಕೂದಲನ್ನು ಆರೋಗ್ಯಕರವಾಗಿಯೂ, ಸುಂದರವಾಗಿಯೂ ಕಾಣುವಂತೆ ಮಾಡುತ್ತದೆ.
ಧೂಳಿನಿಂದ ದೂರವಿರಿ : ಮನೆಯಿಂದ ಹೊರಗೆ ಹೋಗುವಾಗ ಕೂದಲನ್ನು ಆದಷ್ಟು ಬಟ್ಟೆಯಿಂದ ಮುಚ್ಚಿಕೊಳ್ಳಿ. ಇಲ್ಲವಾದರೆ ರಸ್ತೆಯಲ್ಲಿನ ಧೂಳು ಕುದಲಿನಲ್ಲಿ ಕುಳಿತು ಕೊಳಕಾಗುವಂತೆ ಮಾಡುತ್ತದೆ. ಕೂದಲನ್ನು ಕಟ್ಟಲು ಕಾಟನ್ ಬಟ್ಟೆಯನ್ನೇ ಬಳಸಿ. ವಾರಕ್ಕೆ ಕನಿಷ್ಠ 3 ಬಾರಿಯಾದರೂ ತಲೆಗೆ ಸ್ನಾನ ಮಾಡಿ.