ದುಬಾರಿಯಾಗುತ್ತೆ ಅಡುಗೆ ಅನಿಲ ? LPG ಕುರಿತ latest update ಇಲ್ಲಿದೆ..!

ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು ಸರ್ಕಾರ ತೆಗೆದುಹಾಕುವ ಎಲ್ಲಾ ಸಾಧ್ಯತೆಗಳು ಇವೆ  ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. 
 

LPG Subsidy : ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು ಸರ್ಕಾರ ತೆಗೆದುಹಾಕುವ ಎಲ್ಲಾ ಸಾಧ್ಯತೆಗಳು ಇವೆ  ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. ಹಣಕಾಸು ಸಚಿವಾಲಯವು 2022 ರ ಹಣಕಾಸು ವರ್ಷದಲ್ಲಿ ಪೆಟ್ರೋಲಿಯಂ ಸಬ್ಸಿಡಿಯನ್ನು 12,995 ಕೋಟಿ ರೂ.ಗೆ ಇಳಿಸಿದೆ. ಬಜೆಟ್ (Budget) ಮಂಡಿಸುವಾಗ ಹಣಕಾಸು ಸಚಿವರು ಉಜ್ವಾಲಾ ಯೋಜನೆಗೆ ಒಂದು ಕೋಟಿ ಫಲಾನುಭವಿಗಳನ್ನು ಕೂಡ ಸೇರಿಸಲಾಗುವುದು ಎಂದು ಹೇಳಿದ್ದಾರೆ.  ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿದರೆ ಕೇಂದ್ರದ ಮೇಲೆ  ಸಬ್ಸಿಡಿ ಹೊರೆ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

1 /5

2019 ರಲ್ಲಿ ಎಲ್‌ಪಿಜಿಯ ಬೆಲೆಯನ್ನು ಹೆಚ್ಚಿಸಲಾಗಿತ್ತು. ಆದರೆ ಆಗ ಎಲ್ ಪಿಜಿ ಬೆಲೆಯಲ್ಲಾದ ಹೆಚ್ಚಳ ಪೆಟ್ರೊಲ್ ಬೆಲೆ ಏರಿಕೆಗಿಂತ ಕಡಿಮೆಯೇ ಇತ್ತು. ಈ ಬಾರಿಯೂ , ಇದೇ ರೀತಿಯದ್ದೇನಾದರೂ ಸಂಭವಿಸಬಹುದು. ಚಿಲ್ಲರೆ ಮಾರಾಟಗಾರರು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಬಹುದು. ಮಿಂಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಎಲ್ ಪಿಜಿ ಮೇಲಿನ ಸಬ್ಸಿಡಿಯನ್ನು ಕೊನೆಗೊಳಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ, ಸೀಮೆಎಣ್ಣೆ ಮತ್ತು ಎಲ್‌ಪಿಜಿಯ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಿದೆ ಎನ್ನಲಾಗಿದೆ.

2 /5

15 ನೇ ಹಣಕಾಸು ಆಯೋಗದ ವರದಿಯ ಪ್ರಕಾರ,  ಪೆಟ್ರೋಲಿಯಂ ಸಬ್ಸಿಡಿ ಮೂಲಕ ಆದಾಯವು 2018-19ನೇ ಹಣಕಾಸು ವರ್ಷದಲ್ಲಿ 1.6 ಕ್ಕೆ ಇಳಿದಿದೆ ಎಂದು ಹೇಳಿದೆ. 2011-12ರಲ್ಲಿ ಇದು 9.1 ಪ್ರತಿಶತದಷ್ಟಿತ್ತು.  ಜಿಡಿಪಿ ಪ್ರಕಾರ ಇದು 0.8 ಪ್ರತಿಶತದಿಂದ 0.1 ಕ್ಕೆ ಇಳಿದಿದೆ. 2011-12ರಲ್ಲಿ ಸೀಮೆಎಣ್ಣೆ ಸಬ್ಸಿಡಿ 28,215 ಕೋಟಿ ರೂ ಇತ್ತು. 2020-21ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಇದನ್ನು 3,659 ಕೋಟಿ ರೂ.ಗೆ ಇಳಿಸಲಾಗಿದೆ.  

3 /5

 ಉಜ್ವಾಲಾ ಯೋಜನೆಯು ಎಲ್‌ಪಿಜಿ ಸಬ್ಸಿಡಿಯ ಹೊರೆಯನ್ನು ಹೆಚ್ಚಿಸುತ್ತದೆ ಎಂದು ಹಣಕಾಸು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. ಸರ್ಕಾರವು ಸಬ್ಸಿಡಿ ಯೋಜನೆಯನ್ನು ಬಡವರಿಗೆ ಸೀಮಿತಗೊಳಿಸಿದರೆ, ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಈ ಹೊರೆಯನ್ನು ಕೂಡಾ ಕಡಿಮೆ ಮಾಡಬಹುದು.

4 /5

ಎಲ್ಪಿಜಿ ಸಿಲಿಂಡರ್ ಬೆಲೆಗಳು ಅಂತರರಾಷ್ಟ್ರೀಯ ಮಾನದಂಡ ಮತ್ತು ರೂಪಾಯಿ-ಡಾಲರ್ ವಿನಿಮಯ ದರವನ್ನು ಅವಲಂಬಿಸಿರುತ್ತದೆ. ಸರ್ಕಾರ ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಕಳುಹಿಸುತ್ತದೆ. ಆದರೆ ಕೆರೋಸಿಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.  

5 /5

 1 ಮೇ 2016 ರಂದು ಭಾರತ ಸರ್ಕಾರ ಉಜ್ವಾಲಾ ಯೋಜನೆಯನ್ನು ಪ್ರಾರಂಭಿಸಿತು. ಇದರಲ್ಲಿ, ಬಡ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಕ್ಕಾಗಿ 1,600 ರೂ.ಗಳನ್ನು ನೀಡಲಾಗುತ್ತದೆ.