WhatsApp Latest Update - WhatsAppನ ನೂತನ ಪ್ರೈವಸಿ ಪಾಲಸಿಯ ಬಗ್ಗೆ ಸದ್ಯ ಬಳಕೆದಾರರು ತೀವ್ರ ಅಸಮಾಧಾನಗೊಂಡಿದ್ದಾರೆ.
ನವದೆಹಲಿ: WhatsApp Latest Update - WhatsAppನ ನೂತನ ಪ್ರೈವಸಿ ಪಾಲಸಿಯ ಬಗ್ಗೆ ಸದ್ಯ ಬಳಕೆದಾರರು ತೀವ್ರ ಅಸಮಾಧಾನಗೊಂಡಿದ್ದಾರೆ. ಆದರೆ, ಇದರ ಹೊರತಾಗಿಯೂ ಕೂಡ WhatsApp ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತರುತ್ತಲೇ ಇದೆ. ಇತ್ತೀಚೆಗಷ್ಟೇ WhatsApp ವಿಡಿಯೋಗೆ ಸಂಬಂಧಿಸಿದ ಒಂದು ಹೊಸ ವೈಶಿಷ್ಟ್ಯ ಬಿಡುಗಡೆ ಮಾಡಿದೆ. ಹಾಗಾದರೆ ಬನ್ನಿ ಯಾವುದು ಈ ಅಪ್ಡೇಟ್ ನೋಡೋಣ.
ಇದನ್ನು ಓದಿ- WhatsApp-Signal ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದ Telegram App
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಟೆಕ್ ಸೈಟ್ WABetaInfo ಪ್ರಕಾರ WhatsApp ಮ್ಯೂಟ್ (WhatsApp Mute Video Update) ವೈಶಿಷ್ಟ್ಯವನ್ನು ವೀಡಿಯೊಗೆ ಪರಿಚಯಿಸುತ್ತಿದೆ.
ವರದಿಗಳ ಪ್ರಕಾರ, ವೀಡಿಯೊ ಫೈಲ್‌ಗಳನ್ನು ಹಂಚಿಕೊಳ್ಳುವಾಗ ಈ ಹೊಸ ವೈಶಿಷ್ಟ್ಯದ ಕೆಲಸಕ್ಕೆ ಬರಲಿದೆ. ಈಗ ನೀವು ಸಂದೇಶವನ್ನು ಕಳುಹಿಸುವಾಗ ವೀಡಿಯೊವನ್ನು ಮ್ಯೂಟ್ ಮಾಡಲು ಸಾಧ್ಯವಾಗಲಿದೆ.
ಈ ಮೊದಲು ಯಾವುದೇ ಒಂದು ವಿಡಿಯೋವನ್ನು ಬಳಕೆದಾರರು ಹಂಚಿಕೊಂಡರೆ, ಆ ವಿಡಿಯೋ ಸ್ವಯಂಚಾಲಿತವಾಗಿ on ಆಗುತ್ತಿತ್ತು.
ಒಂದು ವೇಳೆ ನೀವೂ ಕೂಡ ಈ ಹೊಸ ವೈಶಿಷ್ಟ್ಯವನ್ನು (WhatsApp New Update Today) ಬಳಸಲು ಬಯಸುತ್ತಿದ್ದರೆ, ನಿಮ್ಮ ಮೊಬೈಲ್ ನಲ್ಲಿರುವ WhatsApp ಅನ್ನು ನೀವು 2.21.3.13 ವರ್ಶನ್ ಗೆ ಅಪ್ಡೇಟ್ ಮಾಡಬೇಕು, ಆದರೆ ಇದೊಂದು ಬೀಟಾ ವರ್ಶನ್ ಆಗಿದೆ ಎಂಬುದು ನೆನಪಿರಲಿ.
ವೀಡಿಯೊವನ್ನು ಮ್ಯೂಟ್ ಮಾಡಲು, ವೀಡಿಯೊವನ್ನು ಪ್ಲೇ ಮಾಡುವಾಗ ನೀವು ಎಡಭಾಗದಲ್ಲಿ ಸ್ಪೀಕರ್ ಐಕಾನ್ ಅನ್ನು ನೋಡುತ್ತೀರಿ. ಇದನ್ನು ಕ್ಲಿಕ್ ಮಾಡಿದಾಗ, ವೀಡಿಯೊದ ಧ್ವನಿ ಮ್ಯೂಟ್ ಆಗಲಿದೆ.